ಸುಡಾನ್ ದೇಶದ ಸೈನಿಕರಿಂದ ಮಹಿಳೆಯರ ಮೇಲೆ ನಿರಂತರ ಅತ್ಯಾಚಾರ
ಊಟ, ನೀರು, ಬಟ್ಟೆ ಬೇಕಂದ್ರೆ ಸೈನಿಕರ ದೇಹದಾಹ ತೀರಿಸಲೇಬೇಕಂತೆ
ಸೈನಿಕರ ಕೈಗೆ ಸಿಕ್ಕ ಒಂದೊಂದು ಮಹಿಳೆಯದ್ದು ಒಂದೊಂದು ಕಥೆ ವ್ಯಥೆ!
ಸುಡಾನ್ ಸೈನಿಕರು ಅಕ್ಷರವಾಗಿ ಅಲ್ಲಿಯ ಮಹಿಳೆಯರನ್ನು ರಕ್ಕಸರಂತೆ ಪೀಡಿಸುತ್ತಿದ್ದಾರೆ. ಯುದ್ಧಭೂಮಿಯಿಂದ ಸದ್ಯ ಅವರ ದುರ್ವರ್ತನೆಗಳ ಒಂದೊಂದೇ ಸುದ್ದಿಗಳು ಜಾಗತಿವಾಗಿ ಸದ್ದು ಮಾಡುತ್ತಿವೆ. ಸುಡಾನ್ ಸೈನಿಕರ ಕೈಗೆ ಸಿಕ್ಕಿರುವ ಸಂತ್ರಸ್ತ ಮಹಿಳೆಯರು ದೈಹಿಕವಾಗಿ ಹಾಗೂ ಮಾನಸಿಕವಾಗಿ ವಿಲವಿಲ ಎನ್ನುತ್ತಿದ್ದಾರೆ. ಈಗಾಗಲೇ ಸುಡಾನ್ನಲ್ಲಿ ಸೃಷ್ಟಿಯಾಗಿರುವ ಅಂತರ್ಯುದ್ಧ ದೇಶವನ್ನೇ ಹೈರಾಣು ಮಾಡಿ ಹಾಕಿದೆ. ಮಧ್ಯಪ್ರಾಚ್ಯದ ಅಂತ್ಯಂತ ಸುಂದರ ನಗರವೆಂದೇ ಕರೆಯಲ್ಪಡುವ ಸುಡಾನ್ನಲ್ಲಿ ಈಗ ಆರ್ಎಸ್ಎಫ್ ಸೈನಿಕರ ಕರಾಳ ರೂಪವೊಂದು ಬಹಿರಂಗಗೊಳ್ಳುತ್ತಿದೆ.
ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರ.. 1000 ಭಾರತೀಯ ವಿದ್ಯಾರ್ಥಿಗಳ ರಕ್ಷಣೆಯೇ ರೋಚಕ
ಈ ಅಂತರ್ಯುದ್ಧದಲ್ಲಿ ಸುಡಾನ್ ಓಮ್ದುರ್ಮಾ ನಗರಕ್ಕೆ ರಕ್ಷಣೆಗಾಗಿ ಬಂದ ಮಹಿಳೆಯರು ಆರ್ಎಸ್ಎಫ್ ಯೋಧರ ದೇಹದಾಹಕ್ಕೆ ವಿಲವಿಲ ಅಂದು ಹೋಗುತ್ತಿದ್ದಾರೆ. ನಿಮಗೆ ಊಟ ನೀರು ಬಟ್ಟೆ ಬೇಕು ಅಂದ್ರೆ ನೀವು ನಿಮ್ಮ ದೇಹವನ್ನು ನಮಗೆ ಒಪ್ಪಿಸಬೇಕು ಅಂತ ಸುಡಾನ್ ಸೈನಿಕರು ಅಲ್ಲಿನ ಮಹಿಳೆಯರನ್ನು ದೈಹಿಕವಾಗಿ ಬೇಕಾ ಬಿಟ್ಟಿ ಬಳಸಿಕೊಳ್ಳುತ್ತಿದ್ದಾರೆ. ಲೈಂಗಿಕವಾಗಿ ಅವರ ಮೇಲೆ ವಿಪರೀತ ದೌರ್ಜನ್ಯ ಎಸಗುತ್ತಿದ್ದಾರೆ. ತಮ್ಮ ಪರಿಸ್ಥಿತಿಗಳನ್ನು ಖುದ್ದು ಅಲ್ಲಿನ ಮಹಿಳೆಯರೇ ಅಂತಾರಾಷ್ಟ್ರೀಯ ಮಾಧ್ಯಮಗಳ ಮುಂದೆ ಅಳಲು ತೋಡಿಕೊಳ್ಳುತ್ತಿದ್ದಾರೆ.
ಪುಟ್ಟ ಮಕ್ಕಳ, ವೃದ್ಧ ಪೋಷಕರ ಹೊಟ್ಟೆಗಾಗಿ ಬಟ್ಟೆ ಬಿಚ್ಚುತ್ತಿದ್ದಾರೆ ಸುಡಾನ್ ಮಹಿಳೆಯರು..!
ಸುಡಾನ್ನಲ್ಲಿ ಕಳೆದ ಏಪ್ರಿಲ್ 15ರಿಂದ ಶುರುವಾದ ಅಂತರ್ಯುದ್ಧದಿಂದಾಗಿ ಸಾವಿರಾರು ಲಕ್ಷಾಂತರ ನಾಗರಿಕರ ಸಾವಾಗಿದೆ. ಸಾವಿರಾರು ಜನರು ಮನೆ ಮಠ ಕಳೆದುಕೊಂಡು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ವಲಸೆ ಹೋಗುತ್ತಿದ್ದಾರೆ. ಹಾಗೆ ಬಂದ ನಿರಾಶ್ರಿತ ಮಹಿಳೆಯರೇ ಈ ಸೈನಿಕರ ದೇಹದಾಹಕ್ಕೆ ಆಹಾರವಾಗುತ್ತಿದ್ದಾರೆ. ಸುಡಾನ್ ನಗರವಾದ ಒಮ್ರುಡಾನ್ಗೆ ವಲಸೆ ಬಂದ ಮಹಿಳೆಯರನ್ನು ಅಲ್ಲಿನ ಸೈನಿಕರು ಒತ್ತಾಯಪೂರ್ವಕವಾಗಿ ತಮ್ಮ ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದಾರೆ. ಹೀಗೆ ವಲಸೆ ಬಂದ ಮಹಿಳೆಯರು ತಮಗೆ ಮತ್ತು ತಮ್ಮ ಮಕ್ಕಳಿಗಾಗಿ ಆಹಾರ ಅರಸುವ ಸ್ಥಿತಿ ಬಂದಿದೆ. ಅದೇ ಈಗ ಅಲ್ಲಿನ ಸೈನಿಕರಿಗೆ ಬಂಡವಾಳವಾಗಿದೆ. ಆಹಾರ, ವಸತಿ, ನೀರು ಬೇಕಾದರೆ ನಮ್ಮೊಂದಿಗೆ ದೈಹಿಕವಾಗಿ ಸಹಕರಿಸಲೇಬೇಕು ಅಂತ ಅವರ ಮೇಲೆ ದೈಹಿಕ ದೌರ್ಜನ್ಯಗಳನ್ನು ಎಸೆಗುತ್ತಿದ್ದಾರೆ.
ಮಹಿಳೆಯರನ್ನು ಸಾಲಾಗಿ ನಿಲ್ಲಿಸಿ ತಮಗೆ ಇಷ್ಟವಾದವರನ್ನು ಆರಿಸಿಕೊಳ್ಳುತ್ತಿರುವ ನೀಚರು
ಹೀಗೆ ಸೈನಿಕರ ಕೈಗೆ ಸಿಕ್ಕು ಮುದ್ದೆಯಾಗಿ ಹೋದ ಓರ್ವ ಮಹಿಳೆ ತನ್ನ ಕಷ್ಟವನ್ನು ತೋಡಿಕೊಂಡಿದ್ದಾಳೆ. ನನ್ನ ತಂದೆ ತಾಯಿ ಇಬ್ಬರೂ ಕೂಡ ವಯಸ್ಸಾದವರು, ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ನಾವು ಇಲ್ಲಿಯೇ ಒಂದು ಕಾರ್ಖಾನೆಯ ಬಳಿ ಉಳಿದುಕೊಂಡಿದ್ದೇವೆ. ಅದರ ಸುತ್ತಲೆಲ್ಲಾ ಸೈನಿಕರೇ ಇದ್ದಾರೆ ನನ್ನ ಮಗಳನ್ನು ನಾನು ಆಚೆಗೆ ಕಳುಹಿಸಿಲ್ಲ. ಹೊಟ್ಟೆಗೆ ಬಟ್ಟೆಗೆ ಬೇಕಂದ್ರೆ ನಾನೇ ಆಚೆಗೆ ಹೋಗುತ್ತೇನೆ. ಅವರು ಹೇಳಿದಂತೆ ಕೇಳಬೇಕಾಗುತ್ತದೆ. ಸುಮಾರು 12 ಜನ ಮಹಿಳೆಯರನ್ನು ಇಲ್ಲಿಯ ಸೈನಿಕರು ದೈಹಿಕವಾಗಿ ಹಿಂಡಿಹಿಪ್ಪೆ ಮಾಡಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾಳೆ.
ಇದನ್ನೂ ಓದಿ : ಹೊಟ್ಟೆಗೆ ಹಿಟ್ಟಿಲ್ಲ ಆದರೂ ಜುಟ್ಟಿಗೆ ಬೇಕು ಅಣ್ವಸ್ತ್ರ ಮಲ್ಲಿಗೆ: ಪಾಕಿಸ್ತಾನ, ನೀ ಯಾಕೆ ಹೀಗೆ..?
ಹೀಗೆ ಒಬ್ಬೊಬ್ಬರದು ಒಂದೊಂದು ಕಥೆಯಿದೆ. ಮತ್ತೊಬ್ಬ ಮಹಿಳೆಯೂ ಕೂಡ ತನ್ನ ಕಥೆಯನ್ನು ತೋಡಿಕೊಂಡಿದ್ದಾಳೆ. ಸದ್ಯ ನಾವಿರುವ ಎಲ್ಲಾ ಪ್ರದೇಶಗಳನ್ನು ಆರ್ಎಸ್ಎಫ್ ಯೋಧರು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಏನೇ ಬೇಕಾದರೂ ಕೂಡ ನಾವು ಅವರು ಹೇಳಿದಂತೆ ಕೇಳಿದ್ರೆ ಮಾತ್ರ ಸಿಗುತ್ತೆ. ನನ್ನನ್ನು ಒಂದು ಮನೆಯೊಳಗೆ ಕರೆದುಕೊಂಡು ಹೋಗಿ ಅಲ್ಲಿರುವ ಊಟ, ಅಡುಗೆ ಸಾಮಾನುಗಳು ಅಡುಗೆ ಪಾತ್ರೆಗಳನ್ನು ತೆಗೆದುಕೊಳ್ಳಲು ಹೇಳಿದರು. ಅದು ನಾನು ಆ ಸೈನಿಕರ ದೈಹಿಕದಾಹ ತೀರಿಸಿದ ಮೇಲೆ. ಇಂತಹ ಸ್ಥಿತಿ ಯಾವ ಶತ್ರುಗಳಿಗೂ. ನಾನು ನನ್ನ ಪುಟ್ಟ ಪುಟ್ಟ ಮಕ್ಕಳಿಗೆ ಮೂರು ಹೊತ್ತು ಊಟ ಕೊಡಲೇಬೇಕು. ಅವರಿಗಾಗಿ ನಾನು ಅವರೊಂದಿಗೆ ಹಾಸಿಗೆಯತ್ತ ಹೋಗಲೇಬೇಕಾಯ್ತು ಎಂದು ಅವಲತ್ತು ತೋಡಿಕೊಂಡಿದ್ದಾಳೆ.
ಆ ಹೆಣ್ಣು ಮಕ್ಕಳಿಗೆ ಬಂದಿರುವ ಮತ್ತೊಂದು ಹೀನಾಯ ಸ್ಥಿತಿ ಅಂದ್ರೆ, ತಮ್ಮ ನಿಯಂತ್ರಣದಲ್ಲಿರುವ ಪ್ರದೇಶದಲ್ಲಿ ವಾಸಿಸುತ್ತಿರುವ ಹೆಣ್ಣು ಮಕ್ಕಳನ್ನು ಎಳೆದು ತರುವ ಸೈನಿಕರು ಅವರನ್ನು ಸಾಲಾಗಿ ನಿಲ್ಲಿಸುತ್ತಾರೆ. ಆ ನಂತರ ತಮಗೆ ಇಷ್ಟವಾದ ಮಹಿಳೆಯರನ್ನ ಯುವತಿಯರನ್ನ ಆಯ್ಕೆ ಮಾಡಿಕೊಂಡು ಅವರ ಮೇಲೆ ತಮ್ಮ ಕಾಮತೃಷೆ ತೀರುವವರೆಗೂ ನಿರಂತರ ಅತ್ಯಾಚಾರ ಮಾಡುತ್ತಾರೆ ಅಂತ ಮತ್ತೊಂದು ಮಹಿಳೆ ಹೇಳಿಕೊಂಡಿದ್ದಾಳೆ. ಇನ್ನು ಲೈಂಗಿಕವಾಗಿ ಸಹಕರಿಸಲು ಒಪ್ಪದ ಯುವತಿಯರನ್ನ ಹೀನಾಮಾನವಾಗಿ ನಡೆಸಿಕೊಳ್ಳಲಾಗುತ್ತಂತೆ. ಅವರ ಕೈ ಕಾಲುಗಳನ್ನು ಸುಡಲಾಗುತ್ತಂತೆ. ಹೀಗೆ ಸುಡಾನ್ ಸೈನಿಕರ ಒಂದೊಂದು ರಾಕ್ಷಸ ರೂಪವನ್ನು ಮಾಧ್ಯಮಗಳ ಎದುರು ತೆರೆದಿಡುತ್ತಿದ್ದಾರೆ ಅಲ್ಲಿನ ಮಹಿಳೆಯರು. ಆದ್ರೆ ಅವರ ಸಹಾಯಕ್ಕಾಗಲಿ, ಸಂರಕ್ಷಣೆಗೆ ಆಗಲಿ ಯಾರು ಕೂಡ ಇಂದಿಗೂ ತಲೆಕೆಡೆಸಿಕೊಂಡಿಲ್ಲ. ಮಧ್ಯಪ್ರಾಚ್ಯದ ಕೆಂಪು ಸಮುದ್ರಕ್ಕೆ ಅಂಟಿಕೊಂಡಿರುವ ಅತ್ಯಂತ ಸುಂದರಭರಿತ ದೇಶದಲ್ಲಿ ನಡೆಯುತ್ತಿರುವ ಈ ನಾರಿಪೀಡನೆ ನಿಜಕ್ಕೂ ವಿಪರ್ಯಾಸವೇ ಸರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ