newsfirstkannada.com

ಕಳೆದು ಹೋಗಿದ್ದ ಲಕ್ಷಾಂತರ ಮೌಲ್ಯದ ಚಿನ್ನದ ಬ್ಯಾಗ್​ ಸಿಗುವಂತೆ ಮಾಡಿದ ಶಕ್ತಿ ಸ್ಕೀಮ್​​; ಹೇಗೆ..?

Share :

Published April 13, 2024 at 6:05am

    ಒಡವೆಗಳಿದ್ದ ಬ್ಯಾಗ್​ ಕಳಕೊಂಡು ಕಣ್ಣೀರು ಹಾಕಿದ್ದ ಮಹಿಳೆ

    ಬಸ್​ ಏರಿ ಕ್ಯಾರಿಯರ್​​ನಲ್ಲಿ ಕ್ಯಾರಿ ಬ್ಯಾಗ್​ ಇಟ್ಟಿದ್ದ ಶಿಲ್ಪಾ

    ಶಕ್ತಿ ಯೋಜನೆಯ ಆಧಾರ್​ ಕಾರ್ಡ್​ನಿಂದ ಸಿಕ್ತು ಸುಳಿವು

ವಿಜಯಪುರದಲ್ಲಿ ಅಪರೂಪದ ಘಟನೆ ನಡೆದಿದೆ. ಸರ್ಕಾರಿ ಬಸ್​ ಏರಿ ಬಾಗಲಕೋಟೆಗೆ ತೆರಳ್ತಿದ್ದ ಮಹಿಳೆ, ಬಸ್ ಕ್ಯಾರಿಯರ್​ನಲ್ಲಿ ಚಿನ್ನಾಭರಣವಿದ್ದ ಬ್ಯಾಗ್​ ಇಟ್ಟಿದ್ದಾಳೆ. ಆದ್ರೆ, ಆಕೆ ಇಟ್ಟಿದ್ದ ಬ್ಯಾಗ್​ ದಾರಿ ಮಧ್ಯೆ ಮಂಗ ಮಯಾವಾಗಿಬಿಟ್ಟಿತ್ತು. ಆದ್ರೆ ಒಡವೆ ಕಳ್ಕೊಂಡು ಕಣ್ಣೀರಾಕುತ್ತಿದ್ದ ಮಹಿಳೆಗೆ ಆಸೆರೆಯಾಗಿದ್ದು ‘ಶಕ್ತಿ ಯೋಜನೆ’.

ಇದನ್ನೂ ಓದಿ: ಕೂಲ್‌.. ಕೂಲ್‌.. ರಾಜ್ಯದಲ್ಲಿ ಇಂದು ಗುಡುಗು ಸಿಡಿಲು ಸಹಿತ ಭಾರೀ ಮಳೆ; ಎಲ್ಲೆಲ್ಲಿ ವರ್ಷಧಾರೆ?

ಶಿಲ್ವಾ ಎಂಬುವವರು ಬಸವನಬಾಗೇವಾಡಿಯಲ್ಲಿ ಬಸ್​ ಹತ್ತಿದ್ದರು. ಈ ಮಹಿಳೆ ಬಾಗಲಕೋಟೆಗೆ ಹೋಗುತ್ತಿದ್ದರು. ಆದ್ರೆ, ಏಕಾಏಕಿ ನಿಡಗುಂದಿಗೆ ಬಸ್​ ಬರ್ತಾಯಿದ್ದಂತೇ ಚಿನ್ನಾಭರಣವಿದ್ದ ಆಕೆಯ ಬ್ಯಾಗ್ ನಾಪತ್ತೆಯಾಗಿದೆ. ಪರಿಣಾಮ ದಾರಿ ಕಾಣದೇ ಅಲ್ಲೇ ಇಳಿದ ಶಿಲ್ಪಾ ಅಸಹಾಯಕರಾಗಿ ನಿಂತಿದ್ದಾರೆ.

ಶಿಲ್ಪಾ ಅಫಜಲಪೂರದಿಂದ ಬಾದಾಮಿಗೆ ತೆರಳುತ್ತಿದ್ದ KA 25 F03 ಸರ್ಕಾರಿ ಬಸ್​ ಏರಿದ್ದಾರೆ. ಬಸವನ ಬಾಗೇವಾಡಿಯಿಂದ ಬಾಗಲಕೋಟೆಗೆ ತೆರಳ್ತಿದ್ದ ಶಿಲ್ಪಾ, ಕ್ಯಾರಿಯರ್​ನಲ್ಲಿ ಚಿನ್ನಭರಣಾವಿದ್ದ ಬ್ಯಾಗ್​ನ ಇಟ್ಟಿದ್ದಾರೆ. ಇನ್ನು, ಕುದರಿಸಾಲವಾಡಗಿಯಲ್ಲಿ ಶಾರದಾ ಎಂಬ ಮಹಿಳೆ ಕೂಡ ಬಸ್​ ಏರಿ, ತನ್ನಲ್ಲಿದ್ದ ಕ್ಯಾರಿ ಬ್ಯಾಗ್​ನ ಕ್ಯಾರಿಯರ್​ನಲ್ಲಿ ಇಟ್ಟಿದ್ದಾರೆ. ಆದ್ರೆ, ನಿಡಗುಂದಿಯಲ್ಲಿ ಶಾರದಾ ತನ್ನ ಬ್ಯಾಗ್​ ಬದಲಾಗಿ ಚಿನ್ನವಿದ್ದ ಶಿಲ್ಪಾ ಬ್ಯಾಗ್​ ತೆಗೆದುಕೊಂಡು ಇಳಿದಿದ್ದಾರೆ. ಇತ್ತ, ಕ್ಯಾರಿ ಬ್ಯಾಗ್​ ಬದಲಾಗಿದ್ದನ್ನ ಕಂಡು ನಿಡಗುಂದಿ ನಿಲ್ದಾಣದಲ್ಲಿ ಇಳಿದು ಶಿಲ್ಪಾ ತನ್ನ ಮಕ್ಕಳೊಂದಿಗೆ ಏನು ದಾರಿ ಕಾಣದೇ ಕಣ್ಣೀರಾಕುತ್ತಾ ನಿಂತಿದ್ದಾರೆ. ಈ ವೇಳೆ ಸ್ಥಳೀಯ ನಿವಾಸಿ ಮೆಹಬೂಬ್​ ವಾಲೀಕಾರ ಎಂಬುವವರು ಶಿಲ್ಪಾಗೆ ಸಹಾಯ ಮಾಡಿದ್ದು, 112 ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಇದನ್ನೂ ಓದಿ: ಇಂದಿನಿಂದ ಭಾರೀ ಮಳೆ; ಸಾರ್ವಜನಿಕರು ಗಮನದಲ್ಲಿ ಇಡಲೇಬೇಕಾದ ಅಂಶಗಳು!

ಅತ್ತ, ಬಸ್​ ಇಳಿದು ಮನೆಗೆ ಹೋಗಿದ್ದ ಶಾರದಾ ಬ್ಯಾಗ್​ನಲ್ಲಿದ್ದ ಚಿನ್ನ, ನಗದು ಕಂಡು ಶಾಕ್ ಆಗಿದ್ದಾರೆ. ಇತ್ತ, ಶಾರದಾ ಬ್ಯಾಗ್​ನಲ್ಲಿ ಶಕ್ತಿ ಯೋಜನೆಗಾಗಿ ಅಗತ್ಯವಿದ್ದ ಆರ್ಧಾರ್ ಕಾರ್ಡ್​ ಇತ್ತು. ಪೊಲೀಸರ ಮೊರೆ ಹೋದ ಶಿಲ್ಪಾ, ಆಧಾರ್‌ ಕಾರ್ಡ್‌ನಿಂದ ಶಾರದಾಳ ನಂಬರ್‌ ಪತ್ತೆ ಮಾಡಿಸಿ ಆಕೆಗೆ ಕರೆ ಮಾಡಿದ್ದಳು. ಪೊಲೀಸರ ಸಹಾಯದೊಂದಿಗೆ ಶಾರದಾ ಇದ್ದ ಸ್ಥಳಕ್ಕೆ ತೆರಳಿ 35 ಗ್ರಾಮ್‌ ಚಿನ್ನಾಭರಣ, 3 ಸಾವಿರ ನಗದು ಇದ್ದ ತನ್ನ ಕ್ಯಾರಿ ಬ್ಯಾಗನ್ನ ವಾಪಸ್ ಪಡೆದು ಕೊಂಡಿದ್ದಳು. ಒಟ್ಟಾರೆ, ಎರಡೂ ಕ್ಯಾರಿ ಬ್ಯಾಗ್‌ಗಳು ಒಂದೇ ತರ ಇದ್ದ ಕಾರಣ ಅದಲಿ ಬದಲಿ ಆಗೋಗಿತ್ತು. ಕೊನೆಗೂ ಕಳೆದುಕೊಂಡಿದ್ದ ಚಿನ್ನ ಹಣ ವಾಪಸ್ ಸಿಕ್ಕಿದ್ದಕ್ಕೆ ಶಿಲ್ಪಾ ಸಂತಸಗೊಂಡಿದ್ದಾರೆ. ಅತ್ತ, ಶಾರದಾ ಕೂಡ ತನ್ನದಲ್ಲದ ಚಿನ್ನದ ಬ್ಯಾಗ್​ ಹಿಂತಿರುಗಿಸಿ ನಿಟ್ಟುಸಿರು ಬಿಟ್ಟಿದ್ದಾರೆ. ಶಕ್ತಿ ಯೋಜನೆಯ ಆಧಾರ್ ಕಾರ್ಡ್​ನಿಂದಾಗಿ ಕಳೆದುಹೋಗಿದ್ದ ಚಿನ್ನ ವಾಪಾಸ್ ಸಿಕ್ಕಿದ್ದೇ ಇಲ್ಲಿ ಗಮನಾರ್ಹ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಳೆದು ಹೋಗಿದ್ದ ಲಕ್ಷಾಂತರ ಮೌಲ್ಯದ ಚಿನ್ನದ ಬ್ಯಾಗ್​ ಸಿಗುವಂತೆ ಮಾಡಿದ ಶಕ್ತಿ ಸ್ಕೀಮ್​​; ಹೇಗೆ..?

https://newsfirstlive.com/wp-content/uploads/2024/04/vijayapura-gold2.jpg

Load More