ಹಾಸನದಲ್ಲಿ ಮುಂದುವರಿದ ಹೃದಯಾಘಾತ; ಮತ್ತೊಬ್ಬರು ಹಾರ್ಟ್​ ಅಟ್ಯಾಕ್​​ಗೆ ಬಲಿ

author-image
Bheemappa
Updated On
ಹಾಸನದಲ್ಲಿ ಮುಂದುವರಿದ ಹೃದಯಾಘಾತ; ಮತ್ತೊಬ್ಬರು ಹಾರ್ಟ್​ ಅಟ್ಯಾಕ್​​ಗೆ ಬಲಿ
Advertisment
  • ಎದೆ ನೋವು ಕಾಣಿಸಿಕೊಂಡಾಗ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು
  • ಜಿಲ್ಲೆಯಲ್ಲಿ ಹೃದಯಾಘಾತದಿಂದ ಎಷ್ಟು ಜನ ಉಸಿರು ಚೆಲ್ಲಿದ್ದಾರೆ?
  • ತಾಲೂಕು ಆಸ್ಪತ್ರೆಗೆ ಕರೆದೊಯ್ದರು ಉಳಿಯಲಿಲ್ಲ ಮಹಿಳೆ ಜೀವ

ಹಾಸನ: ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳು ಮುಂದುವರಿದಿದ್ದು ಇದುವರೆಗೆ 40 ದಿನಗಳಲ್ಲಿ 17 ಜನರು ಉಸಿರು ಚೆಲ್ಲಿದ್ದರು. ಇದರ ಬೆನಲ್ಲೇ ಬೇಲೂರು ಪಟ್ಟಣದ ಜೆಪಿ‌ ನಗರದ ಮಹಿಳೆ ಒಬ್ಬರು ಹಾರ್ಟ್​ ಅಟ್ಯಾಕ್​​ಗೆ ಬಲಿಯಾಗಿದ್ದಾರೆ. ಈವರನ್ನು ಸೇರಿ ಜಿಲ್ಲೆಯಲ್ಲಿ 18 ಜನರು ಹೃದಯಾಘಾತದಿಂದ ಜೀವ ಕಳೆದುಕೊಂಡಂತೆ ಆಗಿದೆ.

ಬೇಲೂರು ಪಟ್ಟಣದ ಜೆಪಿ‌ ನಗರದ ಮಹಿಳೆ ಲೇಪಾಕ್ಷಿ (38) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಲೇಪಾಕ್ಷಿಗೆ ಎದೆ ನೋವು ಕಾಣಿಸಿಕೊಂಡಾಗ ತಕ್ಷಣ ಆಕೆಯ ಗಂಡ ಬೇಲೂರಿನ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಮಹಿಳೆ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಕಳೆದ 40 ದಿನಗಳಲ್ಲಿ ಒಟ್ಟು 18 ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಇದನ್ನೂ ಓದಿ: ತಿರುಪತಿ ಇಂದ ಬರುವಾಗ ಟಿಟಿ ವಾಹನ ಭೀಕರ ಅಪಘಾತ.. ಸ್ಥಳದಲ್ಲೇ ಜೀವ ಬಿಟ್ಟ ಮೂವರು, 9 ಮಂದಿ ಗಂಭೀರ

publive-image

ಜಿಲ್ಲೆಯಲ್ಲಿ ಹೃದಯಾಘಾತದಿಂದ ಜೀವ ಬಿಟ್ಟವರು

ಜಿಲ್ಲೆಯಲ್ಲಿ ಹೃದಯಾಘಾತದಿಂದ ಜೀವ ಕಳೆದುಕೊಂಡವರ ಸಂಖ್ಯೆ ಹೆಚ್ಚುತ್ತದೆ. ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಕೆಲವತ್ತಿ ಗ್ರಾಮದ ಕವನ ಕೆ.ವಿ ಹಾರ್ಟ್​ ಅಟ್ಯಾಕ್​ನಿಂದ ಸಾವನ್ನಪ್ಪಿದ್ದರು. ಇದಾದ ಮೇಲೆ ಕೆಲವೇ ದಿನಗಳಲ್ಲಿ ಜಿಲ್ಲೆಯ 2 ಪ್ರತ್ಯೇಕ ಘಟನೆಗಳಲ್ಲಿ ಹೊಳೆನರಸೀಪುರ ಪಟ್ಟಣದ ಮಡಿವಾಳ ಬಡಾವಣೆಯ ಯುವತಿ ಸಂಧ್ಯಾ ಹಾಗೂ ಅರಕಲಗೂಡು ತಾಲೂಕಿನ ಕಾಡನೂರು ಗ್ರಾಮದ ಯುವಕ ಅಭಿಷೇಕ್ ಕೊನೆಯುಸಿರೆಳೆದಿದ್ದರು.

ಇವರ ಬೆನ್ನಲ್ಲೇ ಹಾಸನ ತಾಲೂಕಿನ ಅಗಲಹಳ್ಳಿ ಕೊಪ್ಪಲು ಗ್ರಾಮದ ನವೀನ್ ಕುಮಾ‌ರ್ (21) ಹೃದಯಾಘಾತದಿಂದ ನಿಧನರಾಗಿದ್ದರು. ಹೊಳೆನರಸೀಪುರ ಪಟ್ಟಣದ ನಿವಾಸಿ ಚನ್ನಕೇಶವ ಹಾಗೂ ಜ್ಯೋತಿ ದಂಪತಿಯ ಪುತ್ರ ನಿಶಾಂತ್ (19) ಬೆಂಗಳೂರಿನ ಜೆಪಿ ನಗರದಲ್ಲಿ ಸಾವನ್ನಪ್ಪಿದ್ದರು. ಇವರ ಬೆನ್ನಲ್ಲೇ ನಿಶಾದ್ ಅಹಮ್ಮದ್ (35) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಈಗ ಲೇಪಾಕ್ಷಿ (38) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment