/newsfirstlive-kannada/media/post_attachments/wp-content/uploads/2025/03/Pet-love.jpg)
ನಮ್ಮ ಕಣ್ಣಿಗೆ ಒಂದು ಸಣ್ಣ ಧೂಳಿನ ಕಣ ಬಿದ್ದರೂ ಆಗೋ ನೋವು ಅಷ್ಟಿಷ್ಟಲ್ಲ. ಆದರೆ ಚೀನಾದ ವೈದ್ಯರು ಮಹಿಳೆಯ ಕಣ್ಣುಗಳಿಂದ 60ಕ್ಕೂ ಹೆಚ್ಚು ಜೀವಂತ ಹುಳುಗಳನ್ನ ಹೊರ ತೆಗೆದಿದ್ದಾರೆ. ಇದು ಇಡೀ ವೈದ್ಯಕೀಯ ಜಗತ್ತಿನಲ್ಲೇ ಅಪರೂಪದಲ್ಲಿ ಅಪರೂಪವಾದ ಘಟನೆ ಇದಾಗಿದೆ.
ಚೀನಾದ ಮಹಿಳೆಯೊಬ್ಬರಿಗೆ ಸದಾ ಕಣ್ಣಿನ ತುರಿಕೆ ಕಾಣಿಸುತ್ತಾ ಇತ್ತು. ನವೆಯಾದಾಗ ಕಣ್ಣನ್ನು ಮೆಲ್ಲಗೆ ಉಚ್ಚುತ್ತಾ ಇದ್ದಂತೆ ಹುಳುಗಳು ಉದುರಲು ಆರಂಭಿಸಿದೆ. ಕಣ್ಣಿನಿಂದ ಉದುರಿದ ಹುಳುಗಳನ್ನು ನೋಡಿದ ಆಕೆ ಗಾಬರಿಯಾಗಿದ್ದಾಳೆ. ಭಯಭೀತಳಾಗಿದ್ದ ಆ ಮಹಿಳೆ ಚೀನಾದ ಕುನ್ಮಿಂಗ್‌ನಲ್ಲಿರೋ ಆಸ್ಪತ್ರೆಗೆ ದಾಖಲಾಗಿದ್ದರು.
ಆಸ್ಪತ್ರೆಯಲ್ಲಿ ಪರೀಕ್ಷಿಸಿದ ನಂತರ ವೈದ್ಯರು ಆ ಮಹಿಳೆಯ ಕಣ್ಣುಗುಡ್ಡೆಗಳು ಮತ್ತು ಕಣ್ಣುರೆಪ್ಪೆಗಳ ಮಧ್ಯೆ ಜೀವಂತ ಹುಳುಗಳು ಮುತ್ತಿಕೊಂಡಿರೋದನ್ನ ನೋಡಿ ಆಘಾತಕ್ಕೊಳಗಾಗಿದ್ದಾರೆ. ಕೊನೆಗೆ ಆಕೆಯ ಬಲಗಣ್ಣಿನಿಂದ 40, ಎಡಗಣ್ಣಿನಿಂದ 10 ಕ್ಕೂ ಹೆಚ್ಚು ಜೀವಂತ ಹುಳುಗಳನ್ನು ಹೊರಗಡೆ ತೆಗೆದಿದ್ದಾರೆ.
ಮಹಿಳೆಯ ಕಣ್ಣಿನಲ್ಲಿ ಹುಳುಗಳು ಪತ್ತೆಯಾಗಿರೋದು ಇದು ಅಪರೂಪದ ಪ್ರಕರಣವಾಗಿದೆ. ಈಕೆಗೆ ಚಿಕಿತ್ಸೆ ನೀಡಿದ ಡಾ.ಗುವಾನ್ ಎಂಬುವ ವೈದ್ಯರು ಇದಕ್ಕೆ ಕಾರಣವೇನು ಅನ್ನೋದನ್ನು ತಿಳಿಸಿದ್ದಾರೆ. ಈ ಮಹಿಳೆಯು ಫಿಲಾರಿಯೋಡಿಯಾ ಮಾದರಿಯ ಹುಳುಗಳಿಂದ ಸೋಂಕಿಗೆ ಒಳಗಾಗಿದ್ದಾಳೆ. ಇದು ಸಾಮಾನ್ಯವಾಗಿ ನೊಣಗಳು ಕಚ್ಚುವುದರಿಂದ ಹರಡುತ್ತದೆ ಎಂದಿದ್ದಾರೆ.
ಇದಕ್ಕಿಂತಲೂ ಮುಖ್ಯವಾಗಿ ಈ ಮಹಿಳೆಯು ಸಾಕುಪ್ರಾಣಿಗಳ ಪ್ರಿಯೆ. ಸದಾ ನಾಯಿ ಮತ್ತು ಬೆಕ್ಕುಗಳ ಜೊತೆ ಸಲುಗೆಯಿಂದ ಇರುತ್ತಿದ್ದಳು. ಪ್ರಾಣಿಗಳ ದೇಹದ ಮೇಲಿಂದ ಸಾಂಕ್ರಾಮಿಕ ಹುಳುಗಳು ಹರಡುತ್ತದೆ. ಪ್ರಾಣಿಗಳನ್ನು ಸ್ಪರ್ಶಿಸುವುದು ಮತ್ತು ಅವಳ ಕಣ್ಣುಗಳನ್ನು ಉಜ್ಜುವುದಿಂದ ಹುಳುಗಳು ಕಣ್ಣಿಗೆ ಮುತ್ತಿಕೊಳ್ಳುವಿಕೆಗೆ ಕಾರಣವಾಗಬಹುದು ಎಂದು ವೈದ್ಯರು ಶಂಕಿಸಿದ್ದಾರೆ. ಇನ್ನು ಮುಂದೆ ಸಾಕು ಪ್ರಾಣಿಗಳನ್ನು ಮುಟ್ಟಿದ ತಕ್ಷಣ ಸಾಬೂನಿನಿಂದ ಕೈ ತೊಳೆಯುವಂತೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ:ನಾವು ಸಾಂಬಾರ್ ಮಾಡಲು ತರಕಾರಿಗಿಂತ ಹೆಚ್ಚು ಬಳಸೋದು ಹಣ್ಣು; ಹೇಗೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ