newsfirstkannada.com

ಗಂಡ ಚೆನ್ನಾಗಿ ನೋಡಿಕೊಳ್ತಿಲ್ಲ ಎಂದು ಸಂಕ್ರಾಂತಿ ಹಬ್ಬದ ದಿನವೇ ಕೆರೆಗೆ ಹಾರಿದ ಮಹಿಳೆ

Share :

Published January 16, 2024 at 7:33am

  ಕೆರೆಗೆ ಹಾರಿ ಕಲ್ಲಿನ‌ ಮೇಲೆ ಬಿದ್ದು ಪಾದಕ್ಕೆ ಗಂಭೀರ ಗಾಯ

  ಪಾದಕ್ಕೆ ಗಾಯವಾಗಿ ಅದೃಷ್ಟವಶಾತ್ ಬದುಕುಳಿದ ಮಹಿಳೆ

  ಚಿಕ್ಕಬಳ್ಳಾಪುರ ನಗರದ ಕಂದವಾರ ಕೆರೆಯಲ್ಲಿ ಘಟನೆ

ಗಂಡ ಚೆನ್ನಾಗಿ ನೋಡಿಕೊಳ್ಳಲ್ಲ ಅಂತ ಸಂಕ್ರಾಂತಿ ಹಬ್ಬದ ದಿನವೇ ಕೆರೆಗೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಚಿಕ್ಕಬಳ್ಳಾಪುರ ನಗರದ ಕಂದವಾರ ಕೆರೆಯಲ್ಲಿ ಈ ಘಟನೆ ನಡೆದಿದೆ.

ದೊಡ್ಡಬಳ್ಳಾಪುರ ತಾಲೂಕಿನ ಗೂಳ್ಯ ಗ್ರಾಮದ ನಿವಾಸಿ ಅನಸೂಯಮ್ಮ ಆತ್ಮಹತ್ಯೆಗೆ ಯತ್ನಿಸಿದವರು. ಪತಿ ನನ್ನ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಅಂತ ನೊಂದು ಅನಸೂಯಮ್ಮ ಕೆರೆಗೆ ಹಾರಿದ್ದಾರೆ. ಇತ್ತ ಕೆರೆಗೆ ಹಾರಿದವಳನ್ನು ಅಲ್ಲಿದ್ದವರು ಕೂಡಲೇ ರಕ್ಷಿಸಿದ್ದಾರೆ.

ಅನಸೂಯ ಕೆರೆಗೆ ಹಾರುವಾಗ ಕಲ್ಲಿನ‌ ಮೇಲೆ ಬಿದ್ದ ಪರಿಣಾಮ ಕಾಲಿಗೆ ಗಂಭೀರವಾಗಿ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಚಿಕ್ಕಬಳ್ಳಾಪುರ ‌ನಗರ ಪೊಲೀಸರು, ಅಗ್ನಿಶಾಮಕ ದಳದವರು ಸಂಬಂಧಿಕರಿಗೆ ಮಹಿಳೆಯನ್ನು ಒಪ್ಪಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಂಡ ಚೆನ್ನಾಗಿ ನೋಡಿಕೊಳ್ತಿಲ್ಲ ಎಂದು ಸಂಕ್ರಾಂತಿ ಹಬ್ಬದ ದಿನವೇ ಕೆರೆಗೆ ಹಾರಿದ ಮಹಿಳೆ

https://newsfirstlive.com/wp-content/uploads/2024/01/CBL-WOMEN.jpg

Load More