newsfirstkannada.com

ಫ್ರೀ ಬಸ್​ ಎಫೆಕ್ಟ್​​.. ಹೆಣ್ಣುಮಕ್ಕಳು ಇಡೀ ಕರ್ನಾಟಕ ಟ್ರಿಪ್​​.. ಟಿಕೆಟ್​ ಕೊಟ್ರೂ ಗಂಡಸರಿಗೆ ಸಿಗದ ಸೀಟು!

Share :

Published June 16, 2023 at 7:46pm

    ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​​ ಸರ್ಕಾರದ ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್​..!

    ಫ್ರೀ ಬಸ್​​ನಲ್ಲಿ ವಿದ್ಯಾರ್ಥಿನಿಯರು, ಹೆಣ್ಣುಮಕ್ಕಳು, ವೃದ್ಧೆಯರು ಇಡೀ ಕರ್ನಾಟಕ ಟ್ರಿಪ್​​​

    ತುಂಬು ತುಳುಕುತ್ತಿರೋ ಸರ್ಕಾರಿ ಬಸ್, ಟಿಕೆಟ್​​ ಕೊಟ್ರೂ ಗಂಡಸ್ಸರಿಗೆ ಸಿಗದ ಟಿಕೆಟ್​​..!

ಬೆಂಗಳೂರು: ಕರುನಾಡಿನ ನಾರಿಮಣಿಯರಿಗೆ ಶಕ್ತಿ ತುಂಬಿರೋ ಕಾಂಗ್ರೆಸ್​ ಸರ್ಕಾರದ ಯೋಜನೆಗೆ ದಿನದಿಂದ ದಿನಕ್ಕೆ ಡ್ಯಿಮ್ಯಾಂಡ್​ ಜಾಸ್ತಿ ಆಗ್ತಿದೆ. ರಾಜ್ಯದ ದಶ ದಿಕ್ಕುಗಳಲ್ಲೂ ಮಹಿಳೆಯರ ಶಕ್ತಿ ಸಂಚಾರ ಸಖತ್​ ಹೈ ಸ್ಪೀಡ್​ನಿಂದ ಸಾಗುತ್ತಿದೆ. ಮಹಿಳೆಯರ ಅಬ್ಬರ ಮುಂದೆ ಪುರುಷ ಪ್ರಯಾಣಿಕರು ಟಿಕೆಟ್​ಗೆ ಹಣ ನೀಡಿದ್ರೂ ನಿಂತುಕೊಂಡೇ ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್ಯದಲ್ಲಿ ಮಹಿಳಾ ಮಣಿಯರ ಪಾಲಿಗೆ ವರವಾಗಿರೋ ಶಕ್ತಿ ಯೋಜನೆಗೆ ಸಖತ್​ ರೆಸ್ಪಾನ್ಸ್​ ಸಿಕ್ತಿದೆ. ಶಾಂತಕ್ಕ, ಸರೋಜಕ್ಕ, ಶಾರದಕ್ಕ ಎಲ್ಲರೂ ಬನ್ನಿ ಫ್ರೀ ರೌಂಡ್ಸ್​ ಹೋಗೋಣ ಅಂತ ಮಹಿಳೆಯರು ಸರ್ಕಾರಿ ಬಸ್​ನತ್ತ ಲಗ್ಗೆ ಇಡ್ತಿದ್ದಾರೆ. ನಾರಿಯರಿಂದ ತುಂಬಿ ತುಳುಕುತ್ತಿರೋ ಬಸ್​ಗಳು ವಾಲಾಡುತ್ತಾ, ತೇಲಾಡುತ್ತಾ ರಸ್ತೆಯಲ್ಲಿ ಸಂಚರಿಸುತ್ತಿವೆ.

ಬಸ್​ ಏರಲು ನಾರಿಯರ ಫೈಟ್​.. ನೂಕಾಟ-ತಳ್ಳಾಟ

ಶಕ್ತಿ ಯೋಜನೆಯ ಫ್ರೀ ಬಸ್​ ಪ್ರಯಾಣವನ್ನ ತಮ್ಮದಾಗಿಸಿಕೊಳ್ಳಲು ಮಹಿಳೆಯರು ಸರ್ಕಾರಿ ಬಸ್ ಏರ್ತಿದ್ದಾರೆ. ನಾ ಮುಂದೆ ತಾ ಮುಂದೆ ಅಂತ ಯುವತಿರು, ಮಹಿಳೆಯರು, ವೃದ್ದೆಯರು ಬಸ್​ನಲ್ಲಿ ಪ್ರಯಾಣಿಸುತ್ತಿದ್ದಾರೆ. ಹೀಗಾಗಿ ಕಲ್ಯಾಣ ಕರ್ನಾಟಕ ಸಾರಿಗೆ ಬಸ್​ಗಳು ಫುಲ್ ರಶ್ ಆಗ್ತಿವೆ. ಇದರಿಂದ ಸೇಡಂನಲ್ಲಿ ಬಸ್​​ ಹತ್ತಲು ಮಹಿಳೆಯರು ಪರದಾಟ ನಡೆಸಿದ್ದಾರೆ. ಸೇಡಂನಿಂದ ಯಾದಗಿರಿಗೆ ಹೋಗುವ ಬಸ್ಸನ್ನ ಏರೋಕೆ ಮಂದಾದ ಮಹಿಳೆಯರು ಜಗಳವಾಡಿದ್ದಾರೆ.

ಖಾಸಗಿ ಬಸ್​ ಮಾಲೀಕರಿಗೆ ಕಂಟಕವಾದ ‘ಶಕ್ತಿ’

ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಒದಗಿಸಿರುವ ಶಕ್ತಿ ಯೋಜನೆ ಖಾಸಗಿ ಬಸ್​ ಮಾಲೀಕರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ದಾವಣಗೆರೆ ಜಿಲ್ಲೆಯಾದ್ಯಂತ ಓಡಾಟ ನಡೆಸುವ 300ಕ್ಕೂ ಅಧಿಕ ಖಾಸಗಿ ಬಸ್​ಗಳು ಖಾಲಿ ಹೊಡೆಯುತ್ತಿದ್ದು, ಬಸ್​ ಸಿಬ್ಬಂದಿ ಕಂಗಾಲಾಗಿದ್ದಾರೆ.

ಫ್ರೀ ಬಸ್​ನಲ್ಲಿ ಟೂರ್​ ಹೊರಟ ವಿಜಯಪುರ ನಾರಿಯರು

ಶಕ್ತಿ ಯೋಜನೆ ಕೆಲವು ಮಹಿಳೆಯರನ್ನ ಯಾವ ರೀತಿ ಸೆಳೆಯುತ್ತಿದೆ ಅಂದ್ರೆ ಸರ್ಕಾರಿ ಬಸ್​ನಲ್ಲಿ ಪ್ರಯಾಣ ಮಾತ್ರವಲ್ಲ ಟೂರ್​ ಹೋಗೋಕು ಮಹಿಳೆಯರು ಮುಂದಾಗಿದ್ದಾರೆ. ವಿಜಯ ಜಿಲ್ಲೆಯ ಇತಿಹಾಸ ಪ್ರಸಿದ್ಧ ಗೋಳಗುಮ್ಮಟ ವೀಕ್ಷಿಸಲು ಟೂರ್​ ಪ್ಲಾನ್​ ಮಾಡಿದ ಮಹಿಳಾ ಸಂಘದವರು ಬಸ್​ ಏರಿ ಬಂದಿದ್ರು. ಅಲ್ಲದೇ ಮುಂದೆ ಧರ್ಮಸ್ಥಳ, ಸೇರಿದಂತೆ ಹಲವು ಪ್ರವಾಸಿ ತಾಣಕ್ಕೆ ಹೋಗ್ತೀವಿ ಅಂತಾನು ನ್ಯೂಸ್​ ಫಸ್ಟ್​ಗೆ ತಿಳಿಸಿದ್ರು.

ಒಟ್ನಲ್ಲಿ ಶಕ್ತಿ ಯೋಜನೆ ಹಲವು ಮಹಿಳೆಯರ ಪಾಲಿಗೆ ಸಿಹಿಯಾದ್ರೆ ಕೆಲವರ ಪಾಲಿಗೆ ಕಹಿಯಾಗಿದೆ. ಕೇವಲ ಆರನೇ ದಿನಕ್ಕೆ ಶಕ್ತಿಯ ಆರ್ಭಟ ಇಷ್ಟು ಜೋರಾಗಿದ್ದು ಇನ್ನೂ ಮುಂದಿನ ದಿನಗಳಲ್ಲಿ ಈ ಶಕ್ತಿ ಅದ್ಯಾವ್ಯಾವ ಸೀನ್​ ಕ್ರಿಯೇಟ್​ ಮಾಡುತ್ತೆ ಅಂತ ಕಾದುನೋಡ್ಬೇಕಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಫ್ರೀ ಬಸ್​ ಎಫೆಕ್ಟ್​​.. ಹೆಣ್ಣುಮಕ್ಕಳು ಇಡೀ ಕರ್ನಾಟಕ ಟ್ರಿಪ್​​.. ಟಿಕೆಟ್​ ಕೊಟ್ರೂ ಗಂಡಸರಿಗೆ ಸಿಗದ ಸೀಟು!

https://newsfirstlive.com/wp-content/uploads/2023/06/Bus-1.jpg

Load More