/newsfirstlive-kannada/media/post_attachments/wp-content/uploads/2024/10/KARVA-CHOUT-1.jpg)
ಪತಿಗೆ ವಿಷ ನೀಡಿ ಸಾಯಿಸಿದ ಆರೋಪದ ಮೇಲೆ ಪತ್ನಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಸಿರಥುವಿನ ಸರ್ಕಲ್ ಆಫೀಸರ್​ ಅವದೇಶ್​ ಕುಮಾರ್​​ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ. ಶೈಲೇಶ್​ (32) ಮೃತ ದುರ್ದೈವಿ. ಇವರು ಇಸ್ಮಾಯಿಲ್​​ಪುರ ಗ್ರಾಮದ ನಿವಾಸಿಯಾಗಿದ್ದರು. ಭಾನುವಾರ ರಾತ್ರಿ ಕರ್ವಾ ಚೌತ್ ಹಬ್ಬದ ಊಟ ಮಾಡಿದ ಮೇಲೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು.
ನಂತರ ಅವರನ್ನು ಲೋಕಲ್ ಕಮ್ಯೂನಿಟಿ ಹೆಲ್ತ್​​ ಸೆಂಟರ್​ಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ವೇಳೆ ಆತ ಸಾವನ್ನಪ್ಪಿದ್ದಾನೆ. ಕೊನೆಗೆ ಶೈಲೇಶ್​ನ ಕುಟುಂಬಸ್ಥರು ಆತನ ಪತ್ನಿ ಸವಿತಾ (30) ವಿರುದ್ಧ ದೂರು ನೀಡಿದ್ದಾರೆ. ಪತಿಗೆ ಊಟದಲ್ಲಿ ವಿಷ ಹಾಕಿ ಸಾಯಿಸಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ ಅಂತಾ ಅಧಿಕಾರಿ ತಿಳಿಸಿದ್ದಾರೆ.
ದೂರು ಆಧರಿಸಿ ನಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದೇವು. ಇದೀಗ ಆರೋಪಿಯನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಕರ್ವಾ ಚೌತ್ ಉಪವಾಸ ವ್ರತದಲ್ಲಿ ಗಂಡನ ದೀರ್ಘಾಯುಷ್ಯಕ್ಕಾಗಿ ಬೇಡಿದ್ದ ಪತ್ನಿ ಉಪವಾಸ ಮುಗಿಯುತ್ತಿದ್ದಂತೆ ವಿಷ ಹಾಕಿ ಅದೇ ಗಂಡನನ್ನು ಕೊಂದಳು ಎಂಬ ಮಾತುಗಳು ಕೇಳಿಬಂದಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us