/newsfirstlive-kannada/media/post_attachments/wp-content/uploads/2025/02/BGK_WOMANS.jpg)
ಆ ಊರಲ್ಲಿ ಕಳ್ಳ, ಖದೀಮರ ಕಾಟ ಹೆಚ್ಚಾಗಿದೆ. ದೊಡ್ಡ ದೊಡ್ಡ ಮನೆಗಳು, ಒಂಟಿ ನಿವಾಸಗಳೇ ಕಳ್ಳರ ಟಾರ್ಗೆಟ್ ಆಗಿವೆ. ಇದು ಊರಿನವರನ್ನ ಕಂಗಾಲಾಗಿಸಿದೆ. ಕಳ್ಳರನ್ನ ಮಟ್ಟ ಹಾಕೋಕೆ ಗ್ರಾಮಸ್ಥರು ಮುಂದಾಗಿದ್ದಾರೆ. ಸೀರೆ ಸೊಂಟಕ್ಕೆ ಕಟ್ಟಿ, ಕೈನಲ್ಲಿ ದೊಣ್ಣೆ ಹಿಡಿದು ಮಹಿಳಾ ಮಣಿಗಳು ಅಖಾಡಕ್ಕೆ ಧುಮುಕಿದ್ದಾರೆ.
ಬಾಗಲಕೋಟೆಯ ಮುಧೋಳ ನಗರ ಸೇರಿ ವಿವಿಧ ಭಾಗದಲ್ಲಿ ಕಳ್ಳರ ಕೈಚಳಕ ಹೆಚ್ಚಾಗಿದೆ. ರಾತ್ರಿ ವೇಳೆ ಬೀಗ ಜಡಿದ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ನಡೀತಿದೆ. ಹೀಗೆ ಕಳ್ಳತನಕ್ಕೆ ಮುಂದಾಗುವ ಚೋರರ ಹೆಡೆಮುರಿ ಕಟ್ಟಲು ನಗರದ ನಿವಾಸಿಗಳು ವಿಷೇಶವಾಗಿ ಸ್ತ್ರೀಯರು ರಾತ್ರಿಪೂರ್ತಿ ತಮ್ಮ ತಮ್ಮ ಬಡಾವಣೆಗಳಲ್ಲಿ ಗಸ್ತು ತಿರುಗುತ್ತಿದ್ದಾರೆ. ಮಧ್ಯರಾತ್ರಿ 12ಗಂಟೆ ವರೆಯಿಂದ ಬೆಳಗಿನ ಜಾವ 4 ಗಂಟೆವರೆಗೆ ರೌಂಡ್ಸ್ ಹಾಕುತ್ತಿದ್ದಾರೆ.
ನಾರಿಮಣಿಯರಷ್ಟೇ ಅಲ್ಲದೆ ಹಲವು ದಿನಗಳಿಂದ ಪುರುಷರು ಸಹ ರಾತ್ರಿ ಗಸ್ತು ತಿರುಗುತ್ತಿದ್ದಾರೆ. ಈ ಮೂಲಕ ಪೊಲೀಸ್ ಇಲಾಖೆಗೆ ಸಹಕಾರ ನೀಡ್ತಿದ್ದಾರೆ. ಒಂದೊಂದು ದಿನ ಐದರಿಂದ 6 ಜನರ ತಂಡವಾಗಿ ವಿಂಗಡಣೆಗೊಂಡು ಗಸ್ತು ತಿರುಗ್ತಾರೆ. ಇದಕ್ಕಾಗಿ ಒಂದು ವಾಟ್ಸ್ಌಪ್ ಗ್ರೂಪ್ ಕೂಡ ಮಾಡ್ಕೊಂಡು ರಾತ್ರಿ ವೇಳೆ ರೌಂಡ್ಸ್ ಹಾಕೋ ಫೋಟೋಗಳನ್ನ ಅದರಲ್ಲಿ ಅಪ್ಲೋಡ್ ಮಾಡ್ತಾರೆ. ರಾತ್ರಿ ವೇಳೆ ನಡೆಯುವ ಪ್ರತಿಯೊಂದು ಸೂಕ್ಷ್ಮ ವಿಚಾರಗಳು ಈ ಗ್ರೂಪ್ಪಿನಲ್ಲಿ ಚರ್ಚೆಯಾಗುತ್ತೆ. ಬಳಿಕ ಒಂದು ಸಭೆ ಸೇರಿ ನಿರ್ಧಾರ ಕೈಗೊಳ್ತಾರೆ. ಹೀಗೆ ಕಳ್ಳರ ಹೆಡೆಮುರಿ ಕಟ್ಟಲು ಸಕಲ ಪ್ರಯತ್ನ ಮಾಡ್ತಿದ್ದಾರೆ.
ಇದನ್ನೂ ಓದಿ:ಹಸು, ಎಮ್ಮೆ ಹಾಲಿಗಿಂತ ಜಿರಳೆ ಹಾಲು ಬೆಸ್ಟ್.. ಆರೋಗ್ಯಕ್ಕೆ ಹೇಗೆಲ್ಲಾ ಉಪಯೋಗ ಆಗುತ್ತೆ ಇದು?
ಕಳ್ಳರ ಹಾವಳಿ ತಡೆಯಲು ಮಹಿಳೆಯರು ಅಖಾಡಕ್ಕಿಳಿದಿರೋದು ಗರ್ವದ ವಿಚಾರ. ಆದ್ರೆ ಕಳ್ಳರಿಗೆ ಇನ್ನೂ ಹೆಡೆಮುರಿ ಕಟ್ಟೋಕೆ ಆಗದಿರೋದು ವಿಪರ್ಯಾಸ. ಹೀಗಾಗಿ ಆದಷ್ಟು ಬೇಗ ಖದೀಮರ ಆಟಕ್ಕೆ ಕಡಿವಾಣ ಬಿದ್ದು ನೆಮ್ಮದಿಯ ನಿದ್ದೆ ಈ ಊರಿನವರು ನೋಡಬೇಕಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ