newsfirstkannada.com

ಹಣಕ್ಕಾಗಿ ಅತ್ತೆಯನ್ನೇ ಬರ್ಬರವಾಗಿ ಕೊಂದು ಹಾಕಿದ ಹಂತಕ; ಅಸಲಿಗೆ ಆಗಿದ್ದೇನು..?

Share :

Published February 28, 2024 at 8:25pm

  ಮಹಿಳೆಯ ಬರ್ಬರ ಕೊಲೆಗೆ ಬೆಚ್ಚಿಬಿದ್ದ ಸಿಲಿಕಾನ್​ ಸಿಟಿ

  ಹಣಕ್ಕಾಗಿ ಅತ್ತೆಯನ್ನೇ ಕೊಂದು ಹಾಕಿದ ಪಾಪಿ ಅಳಿಯ

  ಪೊಲೀಸ್​ ವಿಚಾರಣೆಗೆ ತಪ್ಪೊಪ್ಪಿಕೊಂಡ ಹಂತಕ..!

ಬೆಂಗಳೂರು: ಹಣಕ್ಕಾಗಿ ಅತ್ತೆಯನ್ನೇ ಅಳಿಯ ಬರ್ಬರವಾಗಿ ಕೊಲೆ ಮಾಡಿ ಸುಟ್ಟು ಹಾಕಿದ್ದಾನೆ. ಈ ದುರ್ಘಟನೆ ನಡೆದಿದ್ದು ಬೇರೆಲ್ಲೂ ಅಲ್ಲ, ಬದಲಿಗೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ!

ಇತ್ತೀಚೆಗೆ ಮನೆಯಿಂದ ಹೋದ 37 ವರ್ಷದ ಸುಕನ್ಯಾ ಕಾಣೆಯಾಗಿದ್ದು, ಈ ಬಗ್ಗೆ ಸುಕನ್ಯಾ ಪತಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ನೀಡಿದ್ದ. ಸುಕನ್ಯಾ ಕಾಣೆಯಾದ ದಿನ ಅವಳ ಅಳಿಯ ಸುಕನ್ಯಾಳಿಗೆ ಕರೆ ಮಾಡಿ ಬಾಡಿಗೆ ಕಾರ್​ ನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು , ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಕೊಡಲ್ಲ ಎಂದು ಹೇಳಿದ್ದಕ್ಕೆ ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾಗಿ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ.

ಸದ್ಯ ಪೊಲೀಸ್ರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಇಷ್ಟೇ ಅಲ್ಲದೆ ಕೇವಲ ಹಣಕ್ಕಾಗಿ ಈ ಕೊಲೆ ನಡೆದಿದ್ಯಾ? ಅಥವಾ ಬೇರೆ ಏನಾದ್ರೂ ಕಾರಣ ಇದೆಯೇ? ಅನ್ನೋ ವಿಚಾರ ಬಯಲಿಗೆ ಬರಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಹಣಕ್ಕಾಗಿ ಅತ್ತೆಯನ್ನೇ ಬರ್ಬರವಾಗಿ ಕೊಂದು ಹಾಕಿದ ಹಂತಕ; ಅಸಲಿಗೆ ಆಗಿದ್ದೇನು..?

https://newsfirstlive.com/wp-content/uploads/2024/02/Crime-story_1.jpg

Load More