newsfirstkannada.com

ಒಂಟಿಯಾಗಿ ಹೋಟೆಲ್​​ಗೆ ಹೋಗೋ ಹೆಣ್ಣುಮಕ್ಕಳೇ ಹುಷಾರ್​​.. ನೀವು ಓದಲೇಬೇಕಾದ ಸ್ಟೋರಿ!

Share :

Published January 18, 2024 at 8:46pm

    ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ಹೆಣ್ಮಕ್ಕಳಿಗಿಲ್ಲ ಸೇಫ್ಟಿ

    ಹೋಟೆಲ್​ನಲ್ಲಿ ಯುವತಿ ಜೊತೆ ಅಸಭ್ಯ ವರ್ತನೆ!

    ಕಾಮ ಕ್ರಿಮಿಗಳ ಅಸಭ್ಯ ವರ್ತನೆ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಣ್ಮಕ್ಕಳಿಗೆ ಸುರಕ್ಷತೆಯೇ ಇಲ್ಲದಂತಾಗಿದೆ. ಬಿಎಂಟಿಸಿ ಬಸ್, ಮೆಟ್ರೋ, ಮಾಲ್​ಗಳಲ್ಲಿ ಹೆಣ್ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸುವ ಕಾಮುಕರಿಗೆ ಕಡಿವಾಣ ಹಾಕಬೇಕಿದೆ. ಈಗ ಹೋಟೆಲ್​​ನಲ್ಲೂ ಕಾಮುಕರ ಕುಚೇಷ್ಠೆ ಮುಂದುವರಿದಿದೆ. ಹೆಣ್ಮಕ್ಕಳ್ಳನ್ನ ಟಚ್ ಮಾಡಿ ವಿಕೃತ ಸುಖ ಪಡುತ್ತಿದ್ದ ಕಾಮುಕರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದು ವಿಜಯನಗರ ಆರ್​ಪಿಸಿ ಲೇಔಟ್​ನಲ್ಲಿರುವ ನಮ್ಮೂಟ ಹೋಟೆಲ್​ನಲ್ಲಿ 2023 ಡಿಸಂಬರ್ 30ರ ಸಂಜೆ 7.30ಕ್ಕೆ ನಡೆದ ಘಟನೆ. ಇದೀಗ ತಡವಾಗಿ ಅಂದರೆ 2024ರ ಜನವರಿ 10ರಂದು ಬೆಳಕಿಗೆ ಬಂದಿದೆ.

ಅಂದು ಸಂಜೆ 7ವರೆ ಆಗ್ತಿದ್ದಂತೆ ನಮ್ಮೂಟ ಹೋಟೆಲ್​ಗೆ ಮೂವರು ಕಾಮಕ್ರಿಮಿಗಳು ಎಂಟ್ರಿ ಕೊಡ್ತಾರೆ. ಮೊದ್ಲು ದೋಸೆ ಆರ್ಡರ್​ ಮಾಡಿ ಅಲ್ಲೇ ನಿಂತು ಹರಟೆ ಹೊಡೆಯುತ್ತಾರೆ. ಬಳಿಕ ಹೋಟೆಲ್​ಗೆ ಬಂದ ಓರ್ವ ಯುವತಿಯನ್ನ ಟಾರ್ಗೆಟ್​ ಮಾಡ್ತಾರೆ. ಅದಕ್ಕೂ ಮೊದ್ಲು ಪ್ಲ್ಯಾನ್​ ಹಾಕ್ತಾರೆ. ಅದ್ರಂತೆ ಓರ್ವ ಯುವಕ ಆ ಯುವತಿ ಬಳಿ ತೆರಳಿದ್ರೆ ಇನ್ನಿಬ್ಬರು ಅಲ್ಲೇ ನಿಂತು ವಾಚ್​ ಮಾಡ್ತಾರೆ. ಬೇಕು ಬೇಕಂತಲೇ ಆಕೆ ಪಕ್ಕದಲ್ಲಿ ಬಂದ ಆ ಕ್ರಿಮಿ ಯುವತಿಯ ಹಿಂಬದಿಗೆ ಕೈ ನಿಂದ ಹೊಡೆದು ಅನುಚಿತ ವರ್ತನೆ ತೋರ್ತಾನೆ. ಉಳಿದಿಬ್ಬರು ಅದನ್ನು ನೋಡಿ ಖುಷಿ ಪಟ್ಟಿದ್ದಾರೆ. ತಕ್ಷಣ ಸಿಟ್ಟಿಗೆದ್ದ ಯುವತಿ ಯುವಕರ ಜೊತೆ ಗಲಾಟೆ ಮಾಡಿ ಕೂಗಾಡಿದ್ದಾಳೆ. ತಕ್ಷಣ ಸ್ಥಳೀಯರೆಲ್ಲರೂ ಜಮಾಯಿಸಿದ್ದಾರೆ.. ಜನ ಸೇರುತ್ತಿದ್ದಂತೆ ಮೂವರು ಕಾಮುಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಕಾಮುಕರಿಗಾಗಿ ಹುಡುಕಾಟ

ಈ ಬೆನ್ನಲ್ಲೇ ಓರ್ವ ಯುವತಿ ಮಹಿಳೆಯರ ಸುರಕ್ಷತೆ ಬಗ್ಗೆ ಧ್ವನಿ ಎತ್ತಿದ್ದಾಳೆ. ಇಂತಹ ಸ್ಥಳದಲ್ಲೇ ಹೀಗಾದ್ರೆ ಹೆಣ್ಮಕ್ಕಳಿಗೆ ಸುರಕ್ಷತೆ ಎಲ್ಲಿದೆ ಅಂತ ಪಶ್ನೆಸಿದ್ದಾಳೆ. ಇನ್ನು ಈ ಸಂಬಂಧ ನಮ್ಮೂಟ ಹೋಟೆಲ್ ಕ್ಯಾಶಿಯರ್ ಸುಕನ್ಯಾ ಕೊಟ್ಟ ದೂರಿನ ಮೇರೆಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇತ್ತೀಚಿಗಿನ ಕೆಲ ದಿನಗಳ ಹಿಂದೆ ಜನನಿಬಿಡ ಮಾಲ್‌ನಲ್ಲೂ ಇಂತಹ ಕೃತ್ಯವೊಂದು ಬೆಳಕಿಗೆ ಬಂದಿತ್ತು.. ಇದೀಗ ಹೋಟೆಲ್​ನಲ್ಲೂ ಇಂತಹ ಕೃತ್ಯ ನಡೆದಿದ್ದು, ಬೆಂಗಳೂರಿನಲ್ಲಿ ಹೆಣ್ಮಕ್ಕಳಿಗಿಲ್ಲ ಸೇಫ್ಟಿ ಇಲ್ವಾ..? ಅನ್ನೋ ಪ್ರಶ್ನೆ ಉಧ್ಭವಿಸುತ್ತೆ.. ಅದೇನೆ ಇರ್ಲಿ ಇಂತಹ ನೀಚ ಕೆಲಸಕ್ಕೆ ಕೈ ಹಾಕೋ ಕಾಮುಕರಿಗೆ ತಕ್ಕ ಪಾಠ ಆಗ್ಲೇ ಬೇಕು!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂಟಿಯಾಗಿ ಹೋಟೆಲ್​​ಗೆ ಹೋಗೋ ಹೆಣ್ಣುಮಕ್ಕಳೇ ಹುಷಾರ್​​.. ನೀವು ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2024/01/Hotel-story.jpg

Load More