/newsfirstlive-kannada/media/post_attachments/wp-content/uploads/2025/03/SHOWER-BATHING.jpg)
ಸಾಧಾರಣವಾಗಿ ಜನರು ದಿನಕ್ಕೆ ಒಮ್ಮೆ ಇಲ್ಲವೇ ಎರಡು ಬಾರಿ ಸ್ನಾನವನ್ನು ಮಾಡಿಯೇ ಮಾಡುತ್ತಾರೆ. ಕೆಲವರಂತೂ ಪದೇ ಪದೇ ಸ್ನಾನ ಮಾಡುವ ರೂಢಿಯನ್ನು ಇಟ್ಟುಕೊಂಡಿರುತ್ತಾರೆ. ಇನ್ನು ಕೆಲವರು ಇರುತ್ತಾರೆ, ಅವರಿಗೂ ಸ್ನಾನಕ್ಕೂ ಅಂದ್ರೆ ಅಲರ್ಜಿ, ವಾರಕ್ಕೆ ಎರಡು ಇಲ್ಲವೇ ಮೂರು ಬಾರಿ ಮಾಡಿದರೆ ಮುಗೀತು ಅನ್ನುವ ಹಾಗೆ ಇರ್ತಾರೆ. ಆದ್ರೆ ಈಗ ನಾವು ನಿಮಗೆ ಹೇಳಲು ಹೊರಟಿರುವ ಸ್ಟೋರಿಯಲ್ಲಿ ಇಲ್ಲಿಯ ಮಹಿಳೆಯರು ವರ್ಷಕ್ಕಲ್ಲಾ, ತಿಂಗಳಿಗಲ್ಲಾ, ವಾರಕ್ಕೆ ಅಲ್ಲಾ, ಜೀವನದಲ್ಲಿ ಕೇವಲ ಒಂದು ಬಾರಿ ಸ್ನಾನ ಮಾಡುತ್ತಾರೆ.
ಇದನ್ನೂ ಓದಿ:ಭಾರತದ ಕಾನೂನಿಂದ ಪಾರಾಗಲು ಯತ್ನಿಸಿದ್ದ ಲಲಿತ್ ಮೋದಿಗೆ ಭಾರೀ ಹಿನ್ನಡೆ; ಬಿಗ್ ಶಾಕ್ ಕೊಟ್ಟ ವನವಾಟು PM
ಅಚ್ಚರಿಯಾದರೂ ಕೂಡ ಇದು ನಂಬಲೇಬೇಕಾದ ವಿಚಾರ. ಜಗತ್ತಿನಲ್ಲಿ ಅನೇಕ ರೀತಿಯ ಸಮುದಾಯದ ಜನರಿದ್ದಾರೆ. ಅದರಲ್ಲೂ ಆದಿವಾಸಿ ಸಮುದಾಯವು ತನ್ನದೇ ವಿಶೇಷ ಪರಂಪರೆಯೊಂದಿಗೆ ಗುರುತಿಸಿಕೊಂಡು ಬಂದಿದೆ. ಅವರ ಕೆಲವು ಪರಂಪರೆಗಳು ಮಾನವ ಜಗತ್ತನ್ನು ಅಚ್ಚರಿಗೆ ತಳ್ಳುತ್ತವೇ ಆ ಮಟ್ಟದಲ್ಲಿ ಅವರ ಬದುಕಿನ ಶೈಲಿ ಇರುತ್ತದೆ. ಅಂತಹುದೇ ಒಂದು ಸಮುದಾಯ ಆಫ್ರಿಕಾದಲ್ಲಿದೆ.
ಆಫ್ರಿಕಾದಲ್ಲಿ ಹಿಂಬಾ ಎಂಬ ಆದಿವಾಸಿ ಸಮುದಾಯವಿದೆ. ಉತ್ತರ ನಮಿಬಿಯಾದಲ್ಲಿರುವ ಮಹಾದ್ವೀಪದಲ್ಲಿ ಈ ಸಮುದಾಯ ನೆಲೆಸುತ್ತದೆ. ಈ ಹಿಂಬಾ ಜಾತಿಯ ಸಮುದಾಯ ಇಂದಿಗೂ ಕೂಡ ಸಾವಿರಾರು ವರ್ಷಗಳ ಪ್ರಾಚೀನ ಪರಂಪರೆಯನ್ನು ಪಾಲಿಸುತ್ತಲೇ ಇದ್ದಾರೆ.
ಕೆಲವು ವರದಿಗಳು ಹೇಳುವ ಪ್ರಕಾರ ಹಿಂಬಾ ಆದಿವಾಸಿ ಸಮುದಾಯದಲ್ಲಿ ಸಾಮಾನ್ಯ ಮನುಷ್ಯರ ರೀತಿ ನಿತ್ಯ ಸ್ನಾನ ಮಾಡುವುದು ನಿಷೇಧವಿದೆ. ಇದರಾಚೆಗೂ ಈ ಜನರು ತುಂಬಾ ಸ್ವಚ್ಛ ಹಾಗೂ ಶುದ್ಧವಾಗಿರುತ್ತಾರೆ.
ಈ ಸಮುದಾಯದ ಹೆಣ್ಣು ಮಕ್ಕಳು ಜೀವನದಲ್ಲಿ ಒಂದು ಬಾರಿ ಮಾತ್ರ ಸ್ನಾನ ಮಾಡುತ್ತಾರೆ. ಅದು ಕೂಡ ಅವರ ಮದುವೆಯ ದಿನದಂದ. ಅಂದು ಸ್ನಾನ ಮಾಡಿದ ಮಹಿಳೆಯರು ಮತ್ತೆಂದಿಗೂ ನೀರನ್ನು ತಮ್ಮ ಮೈಗೆ ಸೋಕಲು ಬಿಡುವುದಿಲ್ಲ. ಉಳಿದ ದಿನದಲ್ಲಿ ಮಹಿಳೆಯರು ನೀರಿನ ಹಬೆಯಿಂದ ಸ್ನಾನ ಮಾಡುತ್ತಾರೆ. ಕುದಿಯುವ ನೀರಿನ ಹಬೆಯನ್ನು ಮೈಗೆ ತಾಕುವಂತೆ ಮಾಡಿ, ಮೈಗೆ ಅಂಟಿಕೊಂಡಿರುವ ಹಬೆಯ ನೀರಿನಿಂದ ಸ್ನಾನ ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಮತ್ತು ಬಿಸಿಲಿನಿಂದ ತಮ್ಮ ಚರ್ಮವನ್ನು ಕಾಪಾಡಿಕೊಳ್ಳಲು ಲೋಷನ್ಗಳನ್ನು ಬಳಸುತ್ತಾರೆ ಎಂದು ಹಲವ ಸಂಶೋಧಕರು ಈ ಸಮುದಾಯದ ಬಗ್ಗೆ ಉಲ್ಲೇಖ ಮಾಡಿದ್ದಾರೆ.
ಇದನ್ನೂ ಓದಿ:ವಿಶ್ವದಲ್ಲಿಯೇ ಅತಿ ದೊಡ್ಡ ಕೋಣ ಇದು.. ಇದರ ಹೆಸರೇ ವಿಭಿನ್ನ! ದಿನಕ್ಕೆ ಎಷ್ಟು KG ಆಹಾರ ತಿನ್ನುತ್ತೆ ಗೊತ್ತಾ?
ಹಿಂಬಾ ಜನಸಮುದಾಯ ನೋಡಲು ತುಂಬಾ ಸುಂದರವಾಗಿರುತ್ತಾರೆ. ಇವರ ಮೈಬಣ್ಣ ಕೆಂಪು ಓಚರ್ನಿಂದ ಕೂಡಿರುತ್ತದೆ ಆಫ್ರೀಕಾದ ಒಂದು ದ್ವೀಪದಲ್ಲಿ ನೆಲೆಸಿರುವ ಈ ಜನಸಮುದಾಯದ ಒಟ್ಟು ಜನಸಂಖ್ಯೆ ಸುಮಾರು 50 ಸಾವಿರ ಎಂದು ಹೇಳಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ