ಮದುವೆ ಆಗಿ ವರ್ಷ ಕಳೆದಿಲ್ಲ.. ಅತ್ತೆ ಮನೆ ಮುಂದೆ ಸತ್ಯಾಗ್ರಹಕ್ಕೆ ಕೂತ ನವವಿವಾಹಿತೆ..!

author-image
Ganesh
Updated On
ಮದುವೆ ಆಗಿ ವರ್ಷ ಕಳೆದಿಲ್ಲ.. ಅತ್ತೆ ಮನೆ ಮುಂದೆ ಸತ್ಯಾಗ್ರಹಕ್ಕೆ ಕೂತ ನವವಿವಾಹಿತೆ..!
Advertisment
  • ನ್ಯಾಯ ಎಲ್ಲಿದೆ ಸ್ವಾಮಿ ಎಂದು ಸತ್ಯಾಗ್ರಹ
  • 3 ದಿನಗಳಿಂದ ಅನ್ನ, ನೀರು ಮುಟ್ಟದೇ ಪ್ರತಿಭಟನೆ
  • ಕೊತ್ವಾಲಿ ಪ್ರದೇಶದ ವಿಜ್ರವಾರ ಗ್ರಾಮದಲ್ಲಿ ಘಟನೆ

ನವವಿವಾಹಿತೆಯೊಬ್ಬಳು ಮೂರು ದಿನಗಳಿಂದ ತನ್ನ ಅತ್ತೆಯ ಮನೆಯ ಬಾಗಿಲಲ್ಲಿ ಸತ್ಯಾಗ್ರಹ ಮಾಡ್ತಿರುವ ಘಟನೆ ಉತ್ತರಪ್ರದೇಶದ ಮೌರಾನಿಪುರ ಕೊತ್ವಾಲಿ ಪ್ರದೇಶದ ವಿಜ್ರವಾರ ಗ್ರಾಮದಲ್ಲಿ ನಡೆದಿದೆ.

ಶಿವಾಂಗಿ ತಿವಾರಿ ಎಂಬ ನವವಿವಾಹಿತ ಮಹಿಳೆ ತನ್ನ ಪ್ರಾಣವನ್ನೇ ಕಳೆದುಕೊಂಡರೂ ಸಹ ತನ್ನ ತಾಯಿಯ ಮನೆಗೆ ಹೋಗುವುದಿಲ್ಲ ಅಂತಾ ಹಠ ಹಿಡಿದು ತನ್ನ ಅತ್ತೆ ಮನೆ ಮುಂದೆ ಧರಣಿ ನಡೆಸುತ್ತಿದ್ದಾಳೆ.

ಇದನ್ನೂ ಓದಿ: ಮುತ್ತಪ್ಪ ರೈ ಪುತ್ರ ಸಾವಿರ, ಸಾವಿರ ಕೋಟಿ ಒಡೆಯ.. ರಿಕ್ಕಿ ಓದಿದ್ದು ಏನು?

ಕೌಟುಂಬಿಕ ಕಲಹದದ ಹಿನ್ನೆಲೆ ಆಕೆಯನ್ನ ಅತ್ತೆ ಮನೆಯಿಂದ ಹೊರಕ್ಕೆ ತಳ್ಳಿ, ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರಂತೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಮಹಿಳೆಯ ಮನವೊಲಿಸಲು ಪ್ರಯತ್ನಿಸಿದ್ದಾರೆ. ಪೊಲೀಸರ ಮಾತಿಗೂ ಜಗ್ಗದ ಮಹಿಳೆ ತನ್ನ ಸತ್ಯಾಗ್ರಹ ಮುಂದುವರೆಸಿದ್ದಾರೆ.

ನಾನು ಮೂರು ದಿನಗಳಿಂದ ಪ್ರತಿಭಟನೆ ಮಾಡ್ತಿದ್ದೇನೆ. ಹೊಟ್ಟೆಗೆ ಏನೂ ಸೇವಿಸಿಲ್ಲ. ಮೂರು ದಿನಗಳಿಂದ ಕಾಯುತ್ತ ಕೂತಿದ್ದೇನೆ. ನನ್ನ ಪತಿ ಸಂಜೆಯೂ ಬಂದಿಲ್ಲ. ರಾತ್ರಿಯೂ ಇಲ್ಲ. ಹಗಲು ರಾತ್ರಿ ಆತನಿಗಾಗಿ ಕಾಯುತ್ತಿದ್ದೇನೆ. ಆತನ ಸುಳಿವೇ ಇಲ್ಲ. ನನ್ನ ಪತಿ ನನಗೆ ಹೊಡೆಯುತ್ತಾರೆ. ಆದರೆ ಅವರನ್ನು ನಾನು ಬಿಟ್ಟು ಎಲ್ಲಿಗೆ ಹೋಗಬೇಕು? ನನಗೆ ನ್ಯಾಯ ಬೇಕು. ನ್ಯಾಯ ಸಿಗೋವರೆಗೂ ಎಲ್ಲಿಗೂ ಹೋಗಲ್ಲ ಎಂದು ಪಟ್ಟು ಹಿಡಿದು ಕೂತಿದ್ದಾಳೆ.

ಇದನ್ನೂ ಓದಿ: ಆರ್​ಸಿಬಿಗೆ ಸೋಲು.. ಚಿನ್ನದಂಥ ಅವಕಾಶ ಕೈಚೆಲ್ಲಿದ ಕನ್ನಡಿಗ ಮನೋಜ್ ಭಾಂಡಗೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment