/newsfirstlive-kannada/media/post_attachments/wp-content/uploads/2025/02/GIRLS-2.jpg)
ಸೌಂದರ್ಯ ಅನ್ನೋದು ಹೆಣ್ಣು ಮಕ್ಕಳಿಗೆ ತುಂಬಾನೇ ಮುಖ್ಯ. ಅದರಲ್ಲೂ ಮುಖದಲ್ಲಿ ಕಾಂತಿ ಇದ್ದರೆ ಮುಗಿತು ಅವರೇ ಸಿರಿವಂತರು. ಪುರುಷರ ಮುಖದಲ್ಲಿ ಗಡ್ಡ, ಮೀಸೆ ಬೆಳೆಯುವುದು ಕಾಮನ್. ಕೆಲವು ಮಹಿಳೆಯರ ಮುಖದಲ್ಲಿಯೂ ಕೂಡ ಸಣ್ಣ ಸಣ್ಣ ಕೂದಲು ಬೆಳೆಯುತ್ತಲೇ ಇರುತ್ತವೆ. ಇದಕ್ಕೆ ಬಹು ಮುಖ್ಯ ಕಾರಣ ಹಾರ್ಮೋನ್.
ಇದನ್ನೂ ಓದಿ:ಪ್ರಾಮಿಸ್ ಡೇ ದಿನ ನಿಮ್ಮನ್ನು ನೀವು ಸ್ಟ್ರಾಂಗ್ ಮಾಡಿಕೊಳ್ಳೋದು ಹೇಗೆ? ಸಿಂಗಲ್ ಆಗಿರೋರು ಓದಬೇಕಾದ ಸ್ಟೋರಿ!
ಮಹಿಳೆಯರ ದೇಹದಲ್ಲಿ ಪುರುಷ ಹಾರ್ಮೋನ್ ಆದ ಎಂಡ್ರೋಜನ್ ಹಾರ್ಮೋನ್ ಹೆಚ್ಚು ಉತ್ಪತ್ತಿಯಾಗುತ್ತ ಇರುತ್ತದೆ. ಹೀಗಾಗಿ ಮಹಿಳೆಯರ ಮುಖದಲ್ಲಿ ಕೂದಲು ಬೆಳೆಯಲು ಶುರುವಾಗುತ್ತದೆ. ಹೀಗೆ ಮುಖದ ಮೇಲೆ ಬೆಳೆಯುವ ಕೂದಲಿನಿಂದ ಮಹಿಳೆಯರು ಸಾಕಷ್ಟು ತೊಂದರೆಯನ್ನು ಅನುಭವಿಸುತ್ತ ಇರುತ್ತಾರೆ. ಹೀಗಾಗಿ ತಮ್ಮ ಮುಖದ ಮೇಲಿನ ಕೂದಲನ್ನು ಹೊಗಲಾಡಿಸಲು ಸಾಕಷ್ಟು ಮನೆಮದ್ದನ್ನು ಟ್ರೈ ಮಾಡುತ್ತಿರುತ್ತಾರೆ. ಎಷ್ಟೇ ಮನೆಮದ್ದು ಟ್ರೈ ಮಾಡಿದ್ರೂ ಹೋಗದ ಕೂದಲಿಗೆ ರೇಸರ್ನಿಂದ ರಿಮೂವ್ ಮಾಡೋದಕ್ಕೆ ಶುರು ಮಾಡಿ ಬಿಡುತ್ತಾರೆ.
ಈಗಂತೂ ಮಾರುಕಟ್ಟೆ ನಾನಾ ಬಗೆಯ ಹೇರ್ ರಿಮೂವಲ್ ಪ್ರಾಡಕ್ಟ್ಸ್ ಬಂದಿವೆ. ಕೆಲವು ನಿಮಿಷಗಳಲ್ಲೇ ಮುಖದ ಮೇಲಿನ ಕೂದಲನ್ನು ಮಂಗಮಾಯ ಮಾಡುತ್ತದೆ. ಅದರಲ್ಲಿ ಮುಖ್ಯವಾಗಿದ್ದು ರೇಸರ್. ಸಾಕಷ್ಟು ಮಹಿಳೆಯರು ತರಾತುರಿಯಲ್ಲಿ ಮುಖದ ಮೇಲಿನ ಕೂದಲನ್ನು ಹೊಗಲಾಡಿಸಲು ರೇಸರ್ ಯೂಸ್ ಮಾಡ್ತಾರೆ. ಸರಿಯಾದ ವಿಧಾನ ತಿಳಿದುಕೊಳ್ಳದೇ ರೇಸರ್ನಿಂದ ರಿಮೂವ್ ಮಾಡಿ ತ್ವಚೆಯನ್ನು ಹಾಳು ಮಾಡಿಕೊಳ್ಳುತ್ತಾರೆ.
- ಮುಖದ ಮೇಲೆ ಇರುವ ಕೂದಲನ್ನು ತೆಗೆಯಲು ರೇಸರ್ ತಾಕಿಸಿದರೆ ಮುಗಿತು, ರೇಸರ್ ತಾಕೀಸಿದ ಜಾಗದಲ್ಲಿ ಕೆಂಪು, ಊತ ಮತ್ತು ಕಿರಿಕಿರಿಯಂತಹ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಇದು ಕೂದಲು, ಗುಳ್ಳೆಗಳು ಮತ್ತು ಸೋಂಕಿಗೆ ಕಾರಣವಾಗಬಹುದು.
- ತ್ವಚೆಯ ಮೇಲೆ ರೇಸರ್ ತಾಕಿಸಿದ್ದೇ ಆದರೆ ಅಲ್ಲಿ ನೋವುಂಟು ಆಗಬಹುದು. ವಿಶೇಷವಾಗಿ ನೋವು, ಮಾರ್ಕ್ಗಳು ಮತ್ತು ಚರ್ಮದ ಬಣ್ಣ ಬದಲಾವಣೆಗಳಿಗೆ ಕಾರಣವಾಗಬಹುದು. ಬಹು ಮುಖ್ಯವಾಗಿ ಸೋಂಕಿಗೆ ಕಾರಣವಾಗಬಹುದು.
- ಇನ್ನೊಂದು ಅಲರ್ಜಿಯ ಪ್ರತಿಕ್ರಿಯೆಗಳನ್ನು ಉಂಟುಮಾಡಬಹುದು. ಜೊತೆಗೆ ಕೆಟ್ಟ ವಾಸನೆ ಬರುವ ಸಾಧ್ಯತೆ ಇರುತ್ತದೆ. ಹೀಗೆ ರೇಸರ್ನಿಂದ ಕೂದಲನ್ನು ತೆಗೆದ ಮೇಲೆ ಆ ಜಾಗದಲ್ಲಿ ಗುಳ್ಳೆಗಳು ಆಗೋದಕ್ಕೆ ಶುರುವಾಗಿ ಬಿಡುತ್ತೆ. ಅದರಲ್ಲೂ ಪದೇ ಪದೇ ಮುಖಕ್ಕೆ ರೇಸರ್ ತಾಕೀಸಿದರೇ ಮುಖ ಒರಟಾಗುತ್ತ ಹೋಗುತ್ತದೆ.
- ಹೀಗೆ ತ್ವಚೆಯ ಮೇಲಿನ ಕೂದಲನ್ನು ತೆಗೆದ ಮೇಲೆ ಕಿರಿಕಿರಿ, ದದ್ದುಗಳು ಮತ್ತು ತುರಿಕೆಗಳನ್ನು ಉಂಟಾಗಬಹುದು. ಆದ್ದರಿಂದ ಆದಷ್ಟು ರೇಸರ್ ನಿಮ್ಮ ಮುಖಕ್ಕೆ ತಾಕಿಸದ ಹಾಗೇ ನೋಡಿಕೊಳ್ಳಿ. ಹೀಗೆ ಮಾಡಿದಾಗ ಮಾತ್ರ ನಿಮ್ಮ ಮುಖ ಚನ್ನಾಗಿ ಇರಲು ಸಾಧ್ಯವಾಗುತ್ತದೆ.
- ಅತಿಯಾದ ಕೂದಲು ನಿಮ್ಮ ಮುಖದ ಮೇಲೆ ಕಾಣಿಸಿಕೊಳ್ಳುತ್ತಲೇ ಇದ್ದರೆ ಒಮ್ಮೆ ವೈದ್ಯರನ್ನು ಸಂಪರ್ಕಿಸಿ. ಅವರ ನೇತೃತ್ವದಲ್ಲಿ ಔಷಧಿ ತೆಗೆದುಕೊಂಡರೆ ಅದು ಇನ್ನೂ ಉತ್ತಮ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ