‘13 ವರ್ಷದ ಹಿಂದೆಯೇ ಸತ್ತ ನನ್ನ ಗಂಡನಿಂದ ಗರ್ಭಿಣಿಯಾದೆ’- ಮಹಿಳೆ ಶಾಕಿಂಗ್​ ಹೇಳಿಕೆ

author-image
Gopal Kulkarni
Updated On
‘13 ವರ್ಷದ ಹಿಂದೆಯೇ ಸತ್ತ ನನ್ನ ಗಂಡನಿಂದ ಗರ್ಭಿಣಿಯಾದೆ’- ಮಹಿಳೆ ಶಾಕಿಂಗ್​ ಹೇಳಿಕೆ
Advertisment
  • 13 ವರ್ಷಗಳ ಹಿಂದೆ ಮೃತಪಟ್ಟ ಪತಿದೇವ ನಿತ್ಯ ಕನಸಲ್ಲಿ ಪ್ರತ್ಯಕ್ಷ
  • ಕನಸಿನಲ್ಲಿಯೇ ನಡೆಯುತ್ತಿದ್ದವಂತೆ ಮಧುರ ಘಳಿಗೆಗಳ ಪ್ರಕ್ರಿಯೆ
  • ಮೃತ ಪತಿಯಿಂದಲೇ ನಾನು ಗರ್ಭಿಣಿ ಅಂತಿದ್ದಾಳೆ ಮಹಿಳೆ

ಇಂದಿನ ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ ಎಲ್ಲವೂ ಕೂಡ ಅಕರ್ಷಣಿಯವಾಗಿಯೇ ಕಾಡುತ್ತವೆ. ರೀಲ್ಸ್, ಡಾನ್ಸ್, ಹಾಸ್ಯಭರಿತ ಸ್ಕಿಟ್ಸ್​ಗಳು ಇವೆಲ್ಲವೂ ಜನರನ್ನು ಮನಸೆಳೆಯುತ್ತವೆ. ಯಾವುದೋ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುವ ಮೂಲಕ ಹವಾ ಸೃಷ್ಟಿಸಿರುತ್ತೆ. ಹೀಗೆ ವೈರಲ್ ಆಗಿರುವ ವಿಡಿಯೋಗಳಲ್ಲಿ ಇದೊಂದು ಅಪರೂಪಕ್ಕಿಂತ ಅಪರೂಪವಾದ ವಿಡಿಯೋ.

ಈ ವಿಡಿಯೋದಲ್ಲಿ ಇರುವ ಮಹಿಳೆ ಎಲ್ಲಿಯವರು ಅನ್ನೋದು ಸ್ಪಷ್ಟವಾಗಿ ಗೊತ್ತಿಲ್ಲ. ಆದ್ರೆ ಅವಳು ಪತ್ರಕರ್ತನೊಬ್ಬನು ಕೇಳಿದ ಪ್ರಶ್ನೆಗೆ ನೀಡಿದ ಉತ್ತರಗಳಿವೆಯಲ್ಲಾ ಒಂದಕ್ಕಿಂತ ಒಂದು ಅದ್ಭುತ, ಅವಳ ಉತ್ತರವನ್ನು ಕೇಳಿದ ನಾವು ನಗಬೇಕೋ, ಅವಳನ್ನ ಮುಗ್ಧೆ ಅನ್ನಬೇಕೋ, ಮುಟ್ಟಾಳತನದ ಪರಮಾವಧಿ ಅನ್ನಬೇಕೋ ಗೊತ್ತಾಗಲ್ಲ.


">August 1, 2024

ಇದನ್ನೂ ಓದಿ: ಪ್ಯಾರಿಸ್‌ ಒಲಿಂಪಿಕ್ಸ್‌.. ‘ಕಿಕ್‌’ ಔಟ್‌ ಆದ ಪರಾಗ್ವೆಯನ್ ಸ್ವಿಮ್ಮರ್‌; ಕಾರಣ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ!

ಈ ಮಹಿಳೆ ಈಗ ತುಂಬು ಗರ್ಭಿಣಿ, ಪತಿ ಮೃತಪಟ್ಟು 13 ವರ್ಷಗಳೇ ಆಗಿವೆ. ಈ ಮಗುವಿಗೆ ತಂದೆ ಯಾರು ಅಂತ ಪತ್ರಕರ್ತ ಕೇಳಿದ್ರೆ ಮಹಿಳೆ, ತೀರಿಹೋದ ನನ್ನ ಪತಿ ಅಂತಲೇ ಹೇಳುತ್ತಾಳೆ. ಅಲ್ಲಮ್ಮಾ, ನಿನ್ನ ಪತಿ ಮೃತಪಟ್ಟು 13 ವರ್ಷ ಆಯ್ತು ಅಂತಿಯಾ, ಅದು ಹೇಗೆ ಸಾಧ್ಯ ಅಂತ ಕೇಳಿದ್ರೆ, ನನ್ನ ಪತಿ ನಿತ್ಯ ನನ್ನ ಕನಸಲ್ಲಿ ಬರುತ್ತಿದ್ದರು. ನನ್ನ ಸಾಂಗತ್ಯದಲ್ಲಿರುತ್ತಿದ್ದರು, ಕನಸಿನಲ್ಲಿಯೇ ನಾವು ಮಿಲನದಲ್ಲಿ ತೊಡಗುತ್ತಿದ್ದೇವು. ಅವರಿಂದಲೇ ಈಗ ನಾನು ಗರ್ಭಿಣಿಯಾಗಿದ್ದೇನೆ ಎಂದು ಹೇಳಿದ್ದಾಳೆ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡದಾಗಿ ಸದ್ದು ಮಾಡುತ್ತಿದೆ. ಮಹಿಳೆಯ ಉತ್ತರ ಕೇಳಿದ ನೆಟ್ಟಿಗರು ಬಿದ್ದು ಬಿದ್ದು ನಗ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment