Advertisment

ಅತಿಯಾದ ಕೆಲಸದ ಒತ್ತಡ; ಬಿಕ್ಕಿ ಬಿಕ್ಕಿ ಅತ್ತ ಪೋಸ್ಟ್​ ಆಫೀಸ್​​ ಸಿಬ್ಬಂದಿ!

author-image
Veena Gangani
Updated On
ಅತಿಯಾದ ಕೆಲಸದ ಒತ್ತಡ; ಬಿಕ್ಕಿ ಬಿಕ್ಕಿ ಅತ್ತ ಪೋಸ್ಟ್​ ಆಫೀಸ್​​ ಸಿಬ್ಬಂದಿ!
Advertisment
  • ಅತಿಯಾದ ಕೆಲಸದ ಒತ್ತಡಕ್ಕೆ ಕಣ್ಣೀರು ಹಾಕಿದ ಮಹಿಳಾ ಸಿಬ್ಬಂದಿ
  • ಪೋಸ್ಟ್ ಆಫೀಸ್​ನಲ್ಲಿ ಆಧಾರ್ ಲಿಂಕ್​ಗೆ ಹೆಚ್ಚಾಗುತ್ತಿದೆ ಜನಸಂದಣಿ
  • ಒಳಗೆ ಹೋಗಿ ನನಗೆ ಈ ಕೆಲಸ ಆಗಲ್ಲ ಅಂತ ಹೇಳ್ತೀನಿ ಎಂದ ಸಿಬ್ಬಂದಿ

ರಾಯಚೂರು: ಅತಿಯಾದ ಕೆಲಸದ ಒತ್ತಡಕ್ಕೆ ಪೋಸ್ಟ್ ಆಫೀಸ್ ಸಿಬ್ಬಂದಿ ಬಿಕ್ಕಿ ಬಿಕ್ಕಿ ಅತ್ತಿರೋ ಘಟನೆ ನಗರದ ಪೋಸ್ಟ್ ಆಫೀಸ್​ನಲ್ಲಿ ನಡೆದಿದೆ. ಆಧಾರ್‌ ಕೇಂದ್ರದಲ್ಲಿ ಆಧಾರ್ ಲಿಂಕ್ ಸೇರಿದಂತೆ ತಿದ್ದುಪಡಿಗೆ ನಿತ್ಯ ಜನಸಂದಣಿ ಹೆಚ್ಚಾಗಿದೆ.‌

Advertisment

publive-image

ಆದರೆ ಕೇಂದ್ರದಲ್ಲಿ ಓರ್ವ ಮಹಿಳಾ ಸಿಬ್ಬಂದಿಯನ್ನ ಮಾತ್ರ ಕರ್ತವ್ಯಕ್ಕೆ ನಿಯೋಜಿಸಲಾಗುತ್ತು. ಹೀಗಾಗಿ ಕಚೇರಿಯಲ್ಲಿ ಒತ್ತಡ ಹೆಚ್ಚಾಗಿದೆ. ಸಾರ್ವಜನಿಕರು ಸೇರಿದಂತೆ ಮೇಲಧಿಕಾರಿಯಿಂದಲೂ ಒತ್ತಡ ಹೆಚ್ಚಾಗಿದ್ದರಿಂದ ಮಹಿಳಾ ಸಿಬ್ಬಂದಿ ಕೆಲಸ ಮಾಡುತ್ತಲೆ ಕಣ್ಣೀರು ಹಾಕಿದ್ದಾರೆ.  ನನಗೆ ಆಗಲ್ಲ ಇದು. ಕೆಲಸ ಮಾಡಿ‌ ಯಾರು ಬೈಗುಳ ತಿಂತಾರೆ. ನಾನು ಒಬ್ಬಳೆ ಎಷ್ಟು ಅಂತಾ ಕೆಲಸ ಮಾಡಲಿ. ಒಳಗೆ ಹೋಗಿ ಆಗಲ್ಲ ಅಂತ ಸರ್‌ಗೆ ಹೇಳ್ತೀನಿ ಎಂದು ಸಾರ್ವಜನಿಕರ ಮುಂದೆಯೇ ಅಳಲು ತೋಡಿಕೊಂಡಿದ್ದಾರೆ. ಇನ್ನು ಅಧಿಕ ವರ್ಕ್‌ಲೋಡ್‌ನಿಂದಾಗಿ ಮಹಿಳಾ ಸಿಬ್ಬಂದಿ ಕಣ್ಣೀರಿಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment