newsfirstkannada.com

ಪೋಸ್ಟ್ ಆಫೀಸ್​ ನೌಕರರಿಗೆ ಫಜಿತಿ ತಂದಿಟ್ಟ ರಾಹುಲ್ ಗಾಂಧಿ ನೀಡಿದ ಈ ಹೇಳಿಕೆ..!

Share :

Published May 30, 2024 at 6:39am

    ಮಹಿಳೆಯರ ನಿಯಂತ್ರಣಕ್ಕೆ ಅಂಚೆ ಕಚೇರಿಯ ಸಿಬ್ಬಂದಿ ಹೈರಾಣು

    ಅಂಚೆ ಕಛೇರಿ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು

    8500 ರೂಪಾಯಿ ನಿರೀಕ್ಷೆಯಲ್ಲಿ ಡಿಜಿಟಲ್ ಖಾತೆಗೆ ಮುಗಿಬಿದ್ದ ಜನ

ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅದೊಂದು ಘೋಷಣೆ ಮಾಡಿದ್ರು. ಇಂಡಿಯಾ ಒಕ್ಕೂಟ ಅಧಿಕಾರ ಬಂದ ಕೂಡಲೇ ಕಟಾ ಕಟ್​ ಹಣ ನಿಮ್ಮ ಅಕೌಂಟ್​ಗೆ ಫಟಾಫಟ್​ ಅಂತ ಬಂದು ಬಿಡು ಅಂದಿದ್ರು. ಹೀಗಂದಿದ್ದೇ ಅಂದಿದ್ದು, ನಾರಿಮಣಿಯರು ಆಧಾರ್​ ಕಾರ್ಡ್​ ಪಾನ್​ ಕಾರ್ಡ್​ ಹಿಡಿದು ಪೋಸ್ಟ್ ಆಫೀಸ್ ಮುಂದೆ ಕ್ಯೂ ನಿಂತಿದ್ದಾರೆ. ಕಟಾ ಕಟ್ ಇದೀಗ ಎಲ್ಲೆಲ್ಲೂ ಕಟಾಕಟ್​ದೇ ಹವಾ.

ಇದನ್ನೂ ಓದಿ: ಗೋವಾದಲ್ಲಿ ಟೈಟು, ಎಣ್ಣೆ ಏಟಲ್ಲಿ ಫೈಟು! ಸ್ಯಾಂಡಲ್​​ವುಡ್​ ನಿರ್ಮಾಪಕನ ಮೂಗು ಬಗಿದ ಆರೋಪ​

ಅದರಲ್ಲೂ ಬೆಂಗಳೂರಿನ ಪೋಸ್ಟ್​​ ಆಫೀಸ್​​ ಮುಂದೆ IPPB ಖಾತೆ ಮಾಡಿಸಿಕೊಳ್ಳಲು ಮಹಿಳೆಯರು ಫಟಾಫಟ್​ ಅಂತ ಬಂದು ಕ್ಯೂ ನಿಂತು ಬಿಟ್ಟಿದ್ದಾರೆ. ಕಾಂಗ್ರೆಸ್​ ನಾಯಕ ರಾಹುಲ್ ​ಗಾಂಧಿ ಅವರ ಅದೊಂದು ಮಾತು, ಅದೊಂದು ಘೋಷಣೆ ಅದೊಂದು ಭರವಸೆ ಇವತ್ತು.

ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಗೆದ್ದರೆ ಖಾತೆಗೆ 8500 ರೂಪಾಯಿ ಹಣ ಹಾಕುವ ಘೋಷಣೆಯನ್ನ, ಪ್ರಚಾರದ ವೇಳೆ ರಾಹುಲ್​ ಗಾಂಧಿ ಮಾಡಿದ್ರು. ರಾಹುಲ್ ​ಗಾಂಧಿ ಘೋಷಣೆ ಬೆನ್ನಲ್ಲೆ ಅಲರ್ಟ್ ಆದ ನಾರಿಯರು​, ಪೋಸ್ಟ್ ಆಫೀಸ್​ನಲ್ಲಿ ಖಾತೆ ತೆರೆಯಲು ಮುಗಿಬಿದ್ದಿದ್ದಾರೆ. 15 ದಿನದಿಂದ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಕಟಾ ಕಟ್​ ಖಾತೆ ಮಾಡಿಸೋಕೆ ಸರ್ಕಸ್​ ಮಾಡ್ತಿದ್ದಾರೆ.

ಇದನ್ನೂ ಓದಿ: ವಿದೇಶದಿಂದ ಬರೋ ಮುನ್ನವೇ ಪ್ರಜ್ವಲ್​ ರೇವಣ್ಣ ಮಾಸ್ಟರ್​ ಪ್ಲಾನ್​​.. ಜಾಮೀನಿಗಾಗಿ ಕೋರ್ಟ್​ ಮೊರೆ!

ಮಹಿಳೆಯರ ನಿಯಂತ್ರಣಕ್ಕೆ ಅಂಚೆ ಕಚೇರಿಯ ಸಿಬ್ಬಂದಿ ಕೂಡ ಹೈರಾಣಾಗಿದ್ದಾರೆ. ನಿತ್ಯ ಬೆಳಗ್ಗೆ 4 ಗಂಟೆಯಿಂದಲೇ ಮಹಿಳೆಯರು ಕ್ಯೂನಲ್ಲಿ ನಿಲ್ಲುತ್ತಿದ್ದಾರೆ. ಬೆಂಗಳೂರಿನ ಹಲವು ಪೋಸ್ಟ್​ ಆಫೀಸ್​ಗಳ ಮುಂದೆ ಸರತಿ ಸಾಲಿನಲ್ಲಿ ಮಹಿಳೆಯರು ನಿಲ್ಲುತ್ತಿದ್ದಾರೆ. ಹೀಗಾಗಿ ಮಹಿಳೆಯರ ನಿಯಂತ್ರಣಕ್ಕಾಗಿ ಪೋಸ್ಟ್ ಆಫೀಸ್​ ಸಿಬ್ಬಂದಿ ಟೋಕ‌ನ್ ವಿತರಣೆ ಮಾಡುತ್ತಿದ್ದಾರೆ.

ಬೆಳಗ್ಗೆ 4 ಗಂಟೆಗೇನೆ ಟೋಕನ್ ವಿತರಣೆ ಕಾರ್ಯ ಆರಂಭವಾಗ್ತಾಯಿದೆ. ಇಂಡಿಯಾ ಕೂಟ ಅಧಿಕಾರಕ್ಕೆ ಬರುತ್ತಿದ್ದಂತೆ 8500 ರೂಪಾಯಿ ನಿಮ್ಮ ಖಾತೆಗೆ ಬರಲಿದೆ. ಇದಕ್ಕಾಗಿ ಡಿಜಿಟಲ್ ಖಾತೆ ಮಾಡಿಸಿಕೊಳ್ಳಿ ಅಂದಿದ್ದೇ ಅಂದಿದ್ದು. ಜನ ಅಲರ್ಟ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೋಸ್ಟ್ ಆಫೀಸ್​ ನೌಕರರಿಗೆ ಫಜಿತಿ ತಂದಿಟ್ಟ ರಾಹುಲ್ ಗಾಂಧಿ ನೀಡಿದ ಈ ಹೇಳಿಕೆ..!

https://newsfirstlive.com/wp-content/uploads/2024/05/Post-office.jpg

Load More