ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು.. ಕನ್ನಡತಿ ಶ್ರೇಯಂಕಾ ಪಾಟೀಲ್ ಶೈನ್

author-image
Ganesh
Updated On
ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು.. ಕನ್ನಡತಿ ಶ್ರೇಯಂಕಾ ಪಾಟೀಲ್ ಶೈನ್
Advertisment
  • 2024ರ ಮಹಿಳಾ ಏಷ್ಯಾ ಕಪ್​​ನಲ್ಲಿ ಭಾರತಕ್ಕೆ ಗೆಲುವು
  • ಎದುರಾಳಿ ಪಾಕ್ ವಿರುದ್ಧ 7 ರನ್​ಗಳ ಭರ್ಜರಿ ಜಯ
  • ಶಫಾಲಿ, ಮಂದಾನ ಅದ್ಭುತ್ ಬ್ಯಾಟಿಂಗ್ ಪ್ರದರ್ಶನ

2024ರ ಮಹಿಳಾ ಏಷ್ಯಾ ಕಪ್​​ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ 7 ವಿಕೆಟ್​ಗಳ ಗೆಲುವು ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ್ದ ಪಾಕ್, ಟೀಂ ಇಂಡಿಯಾಗೆ 109 ರನ್​​ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಟೀಮ್ ಇಂಡಿಯಾ ಕೇವಲ 14.1 ಓವರ್​ನಲ್ಲಿ ಗೆಲುವು ದಾಖಲಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ 108 ರನ್‌ಗಳಿಗೆ ಆಲೌಟ್ ಆಯಿತು. ಟೀಂ ಇಂಡಿಯಾ ಪರ ದೀಪ್ತಿ ಹಾಗೂ ರೇಣುಕಾ ಮಾರಕ ಬೌಲಿಂಗ್ ಮಾಡಿದರು. ದೀಪ್ತಿ 4 ಓವರ್ ಗಳಲ್ಲಿ 20 ರನ್ ನೀಡಿ 3 ವಿಕೆಟ್ ಪಡೆದರು. ರೇಣುಕಾ 4 ಓವರ್​ಗಳಲ್ಲಿ 14 ರನ್ ನೀಡಿ 2 ವಿಕೆಟ್ ಪಡೆದರು. ಶ್ರೇಯಾಂಕ ಪಾಟೀಲ್ 3.2 ಓವರ್ ಗಳಲ್ಲಿ ಕೇವಲ 14 ರನ್ ನೀಡಿ 2 ವಿಕೆಟ್ ಪಡೆದರು. ಪೂಜಾ 4 ಓವರ್​​ಗಳಲ್ಲಿ 31 ರನ್ ನೀಡಿ 2 ವಿಕೆಟ್ ಪಡೆದರು.

ಇದನ್ನೂ ಓದಿ:ಪಾಂಡ್ಯ ಹಿಂದಿಕ್ಕಿ ಸೂರ್ಯ ಪಟ್ಟ ಗಿಟ್ಟಿಸಿಕೊಂಡಿದ್ದು ಹೇಗೆ..? ಇದು ತ್ರಿಮೂರ್ತಿಗಳ ಕೃಪಾಕಟಾಕ್ಷ..!

publive-image

109 ರನ್​ಗಳ ಗುರಿ ಬೆನ್ನು ಹತ್ತಿದ ಭಾರತ, ಅದ್ಭುತ ಆರಂಭ ಪಡೆಯಿತು. ಶಫಾಲಿ ವರ್ಮಾ 29 ಬಾಲ್​ನಲ್ಲಿ 40 ರನ್​ಗಳ ಕಾಣಿಕೆ ನೀಡಿದರು. ಸ್ಮೃತಿ ಮಂದಾನ 31 ಬಾಲ್​​ನಲ್ಲಿ 45 ರನ್​ ಚಚ್ಚಿ ತಂಡವನ್ನು ಗೆಲುವಿನ ದಡಕ್ಕೆ ತಂದಿಟ್ಟಿದ್ದರು. ಹೇಮಲತಾ 14 ರನ್​ಗಳಿಸಿ ಔಟ್ ಆದರೆ, ಕ್ಯಾಪ್ಟನ್ ಹರ್ಮನ್ ಪ್ರೀತ್ ಕೌರ್ 5 ಹಾಗೂ ಜೆಮಿ 3 ರನ್​ಗಳಿಸಿ ತಂಡವನ್ನು ಗೆಲ್ಲಿಸಿಕೊಟ್ಟರು. ಭಾರತ 14.1 ಓವರ್​ನಲ್ಲಿ ಮೂರು ವಿಕೆಟ್ ಕಳೆದುಕೊಂಡು ಗೆಲುವು ಬೀರಿತು.

2024ರ ಮಹಿಳಾ ಏಷ್ಯಾ ಕಪ್‌ನಲ್ಲಿ ಟೀಮ್ ಇಂಡಿಯಾ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಿ ಗೆಲುವು ಸಾಧಿಸಿದೆ. ಎರಡನೇ ಪಂದ್ಯ ಯುಎಇ ವಿರುದ್ಧ ಆಡಲಿದೆ. ಜುಲೈ 23 ರಂದು ಟೀಂ ಇಂಡಿಯಾ ಮತ್ತು ನೇಪಾಳ ನಡುವೆ ಪಂದ್ಯ ನಡೆಯಲಿದೆ.

ಇದನ್ನೂ ಓದಿ:ಗಂಭೀರ್​​ ಆಡಿದ ಗೇಮ್​ಗೆ ಬೆಂಡ್​ ಆದ ಕೊಹ್ಲಿ.. ಆರಂಭದಲ್ಲೇ ಜುಟ್ಟು ಹಿಡಿದು ಬಿಗಿಗೊಳಿಸಿದ ಗೌತಿ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment