ಮಹಿಳೆಯರು ಮಾಡುವ ಆ ಕೆಲಸಗಳಿಂದ ಮನೆಗೆ ಬರುತ್ತಾ ಆಪತ್ತು?
ಸರಿಯಾದ ಕೆಲಸ ಮಾಡಿದ್ರೆ ಯಾವುದೇ ಸೌಕರ್ಯಗಳಿಗೆ ಕೊರತೆ ಇರಲ್ಲ
ಕೆಲವು ಕೆಟ್ಟ ಅಭ್ಯಾಸಗಳಿಂದಾಗಿ ಲಕ್ಷ್ಮಿಯೂ ಕೋಪಗೊಳ್ಳುವುದು ನಿಜಾನಾ?
ಹೆಣ್ಣು ಸಂಸಾರದ ಕಣ್ಣು ಅಂತಾರೆ. ಯಾವ ಮನೆಯಲ್ಲಿ ಹೆಣ್ಣು ಖುಷಿ ಖುಷಿಯಿಂದ ಇರುತ್ತಾಳೋ ಅಲ್ಲಿ ಲಕ್ಷ್ಮಿ ಆಹ್ವಾನ ಆಗುತ್ತೆ ಅನ್ನೋ ನಂಬಿಕೆ ಇದೆ. ಹೆಣ್ಣೊಬ್ಬಳು ತಾಯಿಯಾಗಿ, ಮಗಳಾಗಿ, ತಂಗಿಯಾಗಿ, ಅಕ್ಕನಾಗಿ, ಮಡದಿಯಾಗಿ, ಅಜ್ಜಿಯಾಗಿ ಜೀವನದುದ್ದಕ್ಕೂ ಪರರಿಗಾಗಿ ಮಿಡಿಯುವ ಪ್ರೀತಿಯ ಹೃದಯ. ಆ ತಾಯಿ ಲಕ್ಷ್ಮಿಯನ್ನು ಹಿಂದೂ ಧರ್ಮದಲ್ಲಿ ಸಂಪತ್ತು ಮತ್ತು ಸಮೃದ್ಧಿಯ ದೇವತೆ ಎಂದು ಕರೆಯಲಾಗುತ್ತದೆ. ಲಕ್ಷ್ಮಿ ದೇವಿ ನೆಲೆಸಿರುವ ಸ್ಥಳದಲ್ಲಿ ಯಾರೂ ಆರ್ಥಿಕ ಮುಗ್ಗಟ್ಟನ್ನು ಎದುರಿಸುವುದಿಲ್ಲ. ಮತ್ತು ಯಾವುದೇ ಸೌಕರ್ಯಗಳಿಗೆ ಕೊರತೆ ಇರಲ್ಲ ಎಂದು ನಂಬಲಾಗಿದೆ.
ಇದನ್ನೂ ಓದಿ: ಥೇಟ್ ರಂಬೆಯಂತೆ ಕಾಣುತ್ತಿರುವ ಸಂಗೀತಾ ಶೃಂಗೇರಿ; ನಟಿ ಮೈಮಾಟಕ್ಕೆ ಫಿದಾ ಆದ್ರು ಅಭಿಮಾನಿಗಳು
ಹಿಂದೂ ನಂಬಿಕೆ ಪ್ರಕಾರ.. ಮಹಿಳೆಯರ ಕೆಲವು ಕೆಟ್ಟ ಅಭ್ಯಾಸಗಳಿಂದ ಲಕ್ಷ್ಮೀ ದೇವತೆ ಕೋಪಿಸಿಕೊಳ್ಳುತ್ತಾಳಂತೆ. ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಮಹಿಳೆಯರಿಗೆ ದೇವತೆಯ ಸ್ಥಾನಮಾನವಿದೆ. ಜೊತೆಗೆ ಮಹಿಳೆಯರನ್ನು ಮನೆಯ ಲಕ್ಷ್ಮಿ ಎಂದು ಕರೆಯಲಾಗುತ್ತದೆ. ಆದರೆ ಮಹಿಳೆಯರ ಕೆಲವು ಕೆಟ್ಟ ಅಭ್ಯಾಸಗಳಿಂದಾಗಿ ಲಕ್ಷ್ಮಿಯೂ ಕೋಪಗೊಳ್ಳುತ್ತಾಳಂತೆ. ಅಲ್ಲದೇ ಕುಟುಂಬದ ಸಂತೋಷ ಮತ್ತು ಶಾಂತಿಯನ್ನು ಕಸಿದುಕೊಳ್ಳುತ್ತಾಳೆ ಎಂದು ಹೇಳಲಾಗಿದೆ. ಮನೆಯ ಮಹಿಳೆಯರು ಹಾಗೂ ಮಕ್ಕಳು ತಾವು ತ್ಯಜಿಸಬೇಕಾದ ಕೆಟ್ಟ ಅಭ್ಯಾಸಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ.
ಹಿಂದೂ ನಂಬಿಕೆ ಪ್ರಕಾರ.. ಮನೆಯ ಹೊಸ್ತಿಲನ್ನು ಲಕ್ಷ್ಮಿ ದೇವಿಗೆ ಸಂಬಂಧಿಸಿದೆ ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮೀ ದೇವಿ ಯಾವಾಗಲೂ ಪ್ರವೇಶ ದ್ವಾರದಿಂದ ಮಾತ್ರ ಮನೆಗೆ ಪ್ರವೇಶಿಸುತ್ತಾಳೆ. ಅಂತಹ ಪರಿಸ್ಥಿತಿಯಲ್ಲಿ ಮಹಿಳೆಯರು ಕಸವನ್ನು ಗುಡಿಸಿ ಮನೆಯ ಹೊಸ್ತಿಲಲ್ಲಿ ಅಥವಾ ಮುಖ್ಯ ಬಾಗಿಲಿನ ಹಿಂದೆ ಸಂಗ್ರಹಿ ಇಡುವಂತಹ ಮಹಿಳೆಯರ ಮೇಲೆ ಲಕ್ಷ್ಮಿ ದೇವಿ ಕೋಪಗೊಳ್ಳುತ್ತಾಳಂತೆ ಎಂದು ಹೇಳಲಾಗುತ್ತಿದೆ.
ಬಹಳ ಮುಖ್ಯವಾಗಿ ಮಹಿಳೆಯರು ಮನೆಯ ಹೊಸ್ತಿಲಲ್ಲಿ ಕುಳಿತುಕೊಂಡು ಅಲಂಕಾರ ಮಾಡಿಕೊಳ್ಳಬಾರದು. ಊಟ ಮಾಡಬಾರದು ಅಥವಾ ಯಾವುದೇ ರೀತಿಯ ವ್ಯವಹಾರ ಮಾಡಬಾರದು. ಇದು ಬಡತನಕ್ಕೆ ಕಾರಣವಾಗುತ್ತದೆ. ಆಗಾಗ ಮಹಿಳೆಯರು ರಾತ್ರಿಯಲ್ಲಿ ಉಳಿದ ಹಿಟ್ಟನ್ನು ಫ್ರಿಜ್ನಲ್ಲಿ ಇಟ್ಟು ಮರುದಿನ ರೊಟ್ಟಿ ಮಾಡುತ್ತಾರೆ. ನಿಮ್ಮ ಮನೆಯಲ್ಲಿ ಇದನ್ನು ಮಾಡುತ್ತಿದ್ದರೆ ಇಂದೇ ಬಿಟ್ಟು ಬಿಡಿ. ಇದರಿಂದ ಆ ಮನೆಯವರು ರಾಹುವಿನ ದುಷ್ಪರಿಣಾಮ ಅನುಭವಿಸಬೇಕಾಗುತ್ತದೆ. ಆರೋಗ್ಯದ ಜೊತೆಗೆ ಸಮೃದ್ಧಿಯ ಮೇಲೂ ದುಷ್ಪರಿಣಾಮ ಬೀರುತ್ತದೆ. ಮಹಿಳೆಯರು ತಮ್ಮ ಪಾದಗಳಿಂದ ಪೊರಕೆಯನ್ನು ಮುಟ್ಟಬಾರದು ಎನ್ನುತ್ತಾರೆ.
ಇದನ್ನೂ ಓದಿ: ಜಿಮ್ ಮಾಡಿ ಅರ್ಧಕ್ಕೆ ಬಿಟ್ರೆ ಏನಾಗುತ್ತೆ ಬಾಸ್.. ಫಿಟ್ನೆಸ್ ಪ್ರಿಯರೇ ಎಚ್ಚರ; ಈ ಸ್ಟೋರಿ ತಪ್ಪದೇ ಓದಿ!
ಪುರಾಣಗಳ ಪ್ರಕಾರ.. ಲಕ್ಷ್ಮಿ ದೇವಿಯು ವೈಕುಂಠ ಅಥವಾ ವಿಷ್ಣುಲೋಕಕ್ಕೆ ಹೋದಾಗ ಆ ಸ್ಥಳವನ್ನು ಸ್ವಚ್ಛಗೊಳಿಸಲು ಪೊರಕೆಯನ್ನು ಬಳಸಿದಳು. ಆದ್ದರಿಂದ ಪೊರಕೆಯು ನಿಸ್ಸಂಶಯವಾಗಿ ದೇವಿಯ ಸಾಕಾರದಂತಿದೆ ಮತ್ತು ಅದನ್ನು ಗೌರವದಿಂದ ಸರಿಯಾದ ಸ್ಥಳದಲ್ಲಿ ಇಡುವುದರಿಂದ ನಿಮಗೆ ಅದೃಷ್ಟ, ಸಂಪತ್ತು ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ತರಬಹುದು. ಅದಕ್ಕಾಗಿ ಯಾವುದೇ ಕಾರಣಕ್ಕೂ ಪೊರಕೆ ಮೇಲೆ ಕಾಲನ್ನು ಇಡಬಾರದು. ಅದಕ್ಕೆ ಒದೆಯಬಾರದು. ಹಾಗೇನಾದರೂ ನೀವು ಮಾಡಿದ್ದೇ ಆದರೆ ಇದರಿಂದಾಗಿ ಹಣದ ಕೊರತೆ ಎದುರಾಗಿದೆ.
ಸೂರ್ಯೋದಯಕ್ಕೆ ಮೊದಲು ಮನೆಯನ್ನು ಸ್ವಚ್ಛಗೊಳಿಸಿ ಮತ್ತು ಸಂಜೆ ಸೂರ್ಯಾಸ್ತದ ನಂತರ ಗುಡಿಸಬೇಡಿ. ಮನೆಯ ಮುಖ್ಯ ಬಾಗಿಲನ್ನು ಸಹ ಪಾದಗಳಿಂದ ತೆರೆಯಬಾರದು. ಇಷ್ಟು ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಮಹಿಳೆಯ ಈ ಕೆಟ್ಟ ಕೆಲಸದಿಂದ ಮನೆಗೆ ಬರುವ ಲಕ್ಷ್ಮೀ ಆಚೆ ಹೋಗುತ್ತಾಳೆಂತೆ ಜೊತೆಗೆ ಹೀಗೆ ಮಾಡಿದರೆ ಆಕೆಯ ಕೋಪಕ್ಕೆ ತುತ್ತಾಗಬೇಕಾಗುತ್ತದೆ.
ವಿಶೇಷ ವರದಿ: ವೀಣಾ ಗಂಗಾಣಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ