ಸಾವಯವ ಕೃಷಿಗಾಗಿ ಜೀವನವನ್ನೇ ಮುಡಿಪಾಗಿಟ್ಟ ಬೀಜ ಮಾತೆ; ಪಾಪಮ್ಮ ಬದುಕಿನ ಪರಿಚಯ ಇಲ್ಲಿದೆ!

author-image
admin
Updated On
ಸಾವಯವ ಕೃಷಿಗಾಗಿ ಜೀವನವನ್ನೇ ಮುಡಿಪಾಗಿಟ್ಟ ಬೀಜ ಮಾತೆ; ಪಾಪಮ್ಮ ಬದುಕಿನ ಪರಿಚಯ ಇಲ್ಲಿದೆ!
Advertisment
  • ಕೋಲಾರದ ಪಾಪಮ್ಮ ಅವರು ನಿಸರ್ಗದ ಅಪ್ಪಟ ಮಗಳು
  • 150ಕ್ಕೂ ಹೆಚ್ಚು ನಾಟಿ ತಳಿ ಬೆಳೆಗಳ ಅಪರೂಪದ ಬೀಜ ಸಂರಕ್ಷಣೆ
  • ಬೀಜಗಳನ್ನು ರೈತರಿಗೆ ಉಚಿತವಾಗಿಯೇ ನೀಡುತ್ತಾರೆ ಪಾಪಮ್ಮ!

ನಾನು ಆ ಸಾಧನೆ ಮಾಡಿದೆ. ನಾನು ತುಂಬಾ ಸಹಾಯ ಮಾಡಿದೆ. ಹಂಗ್ ಮಾಡಿದೆ, ಹೀಂಗ್ ಮಾಡಿದೆ ಅನ್ನೋರು ಬೀದಿ ಬೀದಿಗೆ ಸಿಕ್ತಾರೆ. ಆದ್ರೆ, ನಿಜವಾದ ಮಾಣಿಕ್ಯಗಳು, ಡಿವಿಜಿ ಹೇಳುವಂತೆ, ಬೆಳಕೀವ ಸೂರ್ಯಚಂದ್ರರು. ಯಾಕಂದ್ರೆ, ಸೂರ್ಯ, ಚಂದ್ರರು ಸದ್ದಿಲ್ಲದೇ ತಮ್ಮ ಕೆಲಸ ಮಾಡ್ತಾರೆ. ಇಡೀ ಜಗತ್ತನ್ನೇ ಬೆಳಗುತ್ತಾರೆ. ನಿಸರ್ಗದ ಈ ಪರಮ ತತ್ವವನ್ನ ಅಕ್ಷರಶಃ ಅಳವಡಿಸಿಕೊಂಡು, ನಿಸರ್ಗ ಸೇವೆಯಲ್ಲಿ ತೊಡಗಿರೋರು, ಬೀಜ ಮಾತೆ, ಚಿನ್ನದ ನಾಡಿನ ಚಿನ್ನದ ಮಹಿಳೆ ಪಾಪಮ್ಮ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನವರಾದ ಪಾಪಮ್ಮ ಅವರು ನಿಜವಾಗಿಯೂ ನಿಸರ್ಗದ ಅಪ್ಪಟ ಮಗಳು. ಈ ಬೀಜ ಮಾತೆ ಪಾಪಮ್ಮರವರ ಕೃಷಿ ಸೇವೆ ಸದ್ದಿಲ್ಲದೆ ಸಾಗಿದೆ. ಸಾವಯವ ಕೃಷಿಗಾಗಿ ಜೀವನವನ್ನೇ ಮುಡಿಪಾಗಿಟ್ಟಿರುವ ಪಾಪಮ್ಮ, ಮುಂದಿನ ತಲೆಮಾರುಗಳಿಗೂ ವಿವಿಧ ಬೆಳೆಗಳ ಬೀಜಗಳು ಲಭ್ಯವಿರಬೇಕು ಅನ್ನೋ ಮಹಾನ್ ಉದ್ದೇಶದಿಂದ ಇವರು, ನಾಟಿ ಬೀಜಗಳನ್ನ ಸಂರಕ್ಷಿಸಿದ್ದಾರೆ.

publive-image

ಇದನ್ನೂ ಓದಿ: ಇವರು ‘ಕರ್ನಾಟಕದ ಪ್ಯಾಡ್ ವುಮನ್‌’; ಭಾರತಿ ಗುಡ್ಲಾನೂರ್​ಗೆ ನ್ಯೂಸ್​ಫಸ್ಟ್​ನ ‘ಮಹಿಳಾ ಮಾಣಿಕ್ಯ’ ಗೌರವ 

ಕಳೆದ 30 ವರ್ಷಗಳಿಂದ ನಿರಂತರವಾಗಿ, ಯಾವುದೇ ಪ್ರಚಾರ ಪಡೆಯದೇ, ಪ್ರಚಾರ ಬಯಸದೇ, 150ಕ್ಕೂ ಹೆಚ್ಚು ತರಹದ ನಾಟಿ ತಳಿ ಬೆಳೆಗಳ ಅಪರೂಪದ ಬೀಜಗಳು ಸಂರಕ್ಷಿಸಿದ್ದಾರೆ. ಇವರ ಬಳಿ 250ಕ್ಕೂ ಹೆಚ್ಚು ವಿವಿಧ ರೀತಿಯ ಬೀಜಗಳ ಇದ್ದವಂತೆ. ಬರದಿಂದಾಗಿ ಈಗ ಕೆಲವು ಇಲ್ಲ. ಆದ್ರೆ ಮತ್ತೆ ಅವುಗಳನ್ನು ಸಂಗ್ರಹ ಮಾಡುವತ್ತಾ ಹೆಜ್ಜೆ ಹಾಕಿದ್ದಾರೆ.

ಅತ್ತೆ ಮತ್ತು ಮಾವನವರಿಂದ ಕಲಿತ ಈ ಕಲೆಯನ್ನು ಪಾಪಮ್ಮ ಈಗಲೂ ಮುಂದುವರೆಸಿದ್ದಾರೆ. ನೂರಾರು ವರ್ಷ ಹಳೆಯದಾದ ಮಣ್ಣಿನ ಮಡಿಕೆಗಳಲ್ಲಿ ಈ ಬೀಜ ಸಂರಕ್ಷಿಸಿದ್ದಾರೆ. ಇವರ ಮನೆಯಲ್ಲಿರುವ ಯಾವುದೇ ಹಳೇ ಡಬ್ಬ ತೆಗೆದರೂ ಅದರಲ್ಲಿ ಸಿಗುವುದು ಮಾಣಿಕ್ಯಕ್ಕಿಂತ ಅಪರೂಪ ತಳಿಯ ಬೀಜಗಳು.

publive-image

ಹೀಗೆ ಸಂರಕ್ಷಿಸಲ್ಪಟ್ಟ ಬೀಜಗಳನ್ನು ರೈತರಿಗೆ ಉಚಿತವಾಗಿಯೇ ನೀಡುವ ಪಾಪಮ್ಮ, ನಂತರ ಇದರ ಎರಡು ಪಟ್ಟು ವಾಪಾಸು ಕೊಡಬೇಕು ಎನ್ನುವು ಷರತ್ತು ವಿಧಿಸಿಯೇ ನೀಡುತ್ತಾರೆ. ಬೀಜವಿತ್ತರಷ್ಟೇ ಬೆಳೆ, ಬೀಜವಿದ್ದರಷ್ಟೇ ಮರ, ಬೀಜವಿದ್ದರಷ್ಟೇ ಹೊಸ ಭರವಸೆ. ಮುಂದಿನ ತಲೆಮಾರಿನವರು, ಸಾವಯವ ಆಹಾರ ಸೇವಿಸ್ತಾರೆ ಅಂದ್ರೆ, ಅದಕ್ಕೂ ಪಾಪಮ್ಮ ಅವರ ಕೊಡುಗೆ ಅಪಾರ. ಕೃಷಿಯನ್ನೇ ಧ್ಯಾನಿಸುವ, ಕೃಷಿಯನ್ನೇ ಸ್ಮರಿಸುವ, ಕೃಷಿಯನ್ನೇ ಕಣಕಣದಲ್ಲೂ ತುಂಬಿಸಿಕೊಂಡಿರುವ ಪಾಪಮ್ಮ ಅವರು, ನ್ಯೂಸ್‌ಫಸ್ಟ್‌ನ ಮಹಿಳಾ ಮಾಣಿಕ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment