/newsfirstlive-kannada/media/post_attachments/wp-content/uploads/2025/07/SMG_DEVVA.jpg)
ಶಿವಮೊಗ್ಗ: ದೆವ್ವ ಬಿಡಿಸುವಂತಹ ಮಹಿಳಾ ಮಂತ್ರವಾದಿಯ ಹೊಡೆತಕ್ಕೆ ಮಹಿಳೆಯೊಬ್ಬರು ಜೀವ ಕಳೆದುಕೊಂಡಿರುವ ಘಟನೆ ಭದ್ರಾವತಿ ತಾಲೂಕಿನ ಜಂಬರಘಟ್ಟ ಗ್ರಾಮದಲ್ಲಿ ನಡೆದಿದೆ.
ಜಂಬರಘಟ್ಟ ಗ್ರಾಮ ಗೀತಾ (35) ಮೃತಪಟ್ಟ ಮಹಿಳೆ. ಗೀತಾಗೆ ದೆವ್ವ ಹಿಡಿದಿದೆ ಎಂದು ಹೇಳಿ ಅದನ್ನು ಬಿಡಿಸಲು ಆಶಾ ಎಂಬ ಮಹಿಳೆ ಮುಂದಾಗಿದ್ದಾರೆ. ದೆವ್ವ ಬಿಡಿಸುವ ಸಂದರ್ಭದಲ್ಲಿ ಮಹಿಳೆಗೆ ಕೋಲಿನಿಂದ ಆಶಾ ಹೊಡೆದಿದ್ದಾಳೆ. ಇದರಿಂದ ತೀವ್ರವಾದ ಅಸ್ವಸ್ಥಕ್ಕೆ ಗುರಿಯಾಗಿದ್ದ ಮಹಿಳೆ ಬೆಳಗ್ಗೆ ಜೀವ ಬಿಟ್ಟಿದ್ದಾಳೆ. ಆದ್ರೆ ಕೆಲ ದಿನಗಳಿಂದ ಮಹಿಳೆ ಅನಾರೋಗ್ಯದಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ಕರೆದೊಯ್ಯದೇ ಮಂತ್ರವಾದಿ ಬಳಿ ಕರೆದುಕೊಂಡು ಹೋಗಲಾಗಿದೆ.
ಇದನ್ನೂ ಓದಿ: ಮಧ್ಯಮ ವರ್ಗಕ್ಕೆ ಬೆಲೆ ಏರಿಕೆ, ತೆರಿಗೆ ಹೊರೆ ಇಲ್ಲವೇ ಇಲ್ಲ.. ಹೊರೆ ಆಗಿರೋದೇ EMI..!
ಆದರೆ ದೆವ್ವದ ನೆಪ ಮಾಡಿ ಹೊಡೆದಿದ್ದರಿಂದ ಜೀವ ಹೋಗಿದೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಹೊಳೆಹೊನ್ನೂರು ಠಾಣೆಯ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯಲಿದೆ. ಸದ್ಯ ಈ ಘಟನೆಯೂ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಮಹಿಳೆಯ ಜೀವ ಹೋಗುವಂತೆ ಹೊಡೆದಿದ್ದ ಆಶಾಳನ್ನು ಪೊಲೀಸರು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ