/newsfirstlive-kannada/media/post_attachments/wp-content/uploads/2025/06/SMRITI_MANDHANA.jpg)
ಸದ್ಯ ಇಂದು ಕ್ರಿಕೆಟ್​ ಲೋಕದಲ್ಲಿ ಐಪಿಎಲ್​ ಫೈನಲ್ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿದೆ. ಇದರ ನಡುವೆ 2025ರ ಮಹಿಳಾ ವಿಶ್ವಕಪ್​ ಟೂರ್ನಿ ನಡೆಯುವ ದಿನಾಂಕ, ಸ್ಥಳವನ್ನು ಘೋಷಣೆ ಮಾಡಲಾಗಿದೆ. ವಿಶೇಷ ಎಂದರೆ ಬೆಂಗಳೂರಿನಿಂದಲೇ ಮಹಿಳಾ ವಿಶ್ವಕಪ್​ ಟೂರ್ನಿ ಆರಂಭವಾಗುವುದರ ಜೊತೆಗೆ ಒಂದು ಸೆಮಿಫೈನಲ್​ ಪಂದ್ಯ ಕೂಡ ನಡೆಯಲಿದೆ.
2025ರ ಮಹಿಳಾ ವಿಶ್ವಕಪ್​ ಟೂರ್ನಿಯು ಸೆಪ್ಟೆಂಬರ್​ 30 ರಿಂದ ನವೆಂಬರ್​ 2 ರವವರೆಗೆ ನಡೆಯಲಿದೆ. ಭಾರತ ಹಾಗೂ ಶ್ರೀಲಂಕಾ ಸೇರಿ ಒಟ್ಟು 5 ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿವೆ. ಅಕ್ಟೋಬರ್​ 30ಕ್ಕೆ ಸೆಕೆಂಡ್​ ಸೆಮಿಫೈನಲ್ ಪಂದ್ಯ ಪೂರ್ಣಗೊಳ್ಳಲಿದೆ. ಸೆಮಿಫೈನಲ್ ಪಂದ್ಯ ಮುಗಿದ ಮೂರು ದಿನಗಳ ಬಳಿಕ ಅಂದರೆ ನವೆಂಬರ್​ 2 ರಂದು ಫೈನಲ್​ ಪಂದ್ಯ ನಡೆಯಲಿದೆ.
ಇದನ್ನೂ ಓದಿ: RCBಗೆ ಶುಭ ಹಾರೈಸಿದ ಕೇಂದ್ರ ಸಚಿವ ಹೆಚ್​​.ಡಿ ಕುಮಾರಸ್ವಾಮಿ.. ತಂಡದ ಬಗ್ಗೆ ಏನು ಹೇಳಿದರು?
ಮಹಿಳಾ ವಿಶ್ವಕಪ್​ ಟೂರ್ನಿಯ ಪಂದ್ಯಗಳು ಭಾರತದ ಪ್ರತಿಷ್ಠಿತ ನಗರಗಳಾದ ಬೆಂಗಳೂರು, ಗುವಾಹಟಿ, ಇಂದೋರ್ ಹಾಗೂ ವಿಶಾಖಪಟ್ಟಣಂನಲ್ಲಿ ನಡೆಯಲಿವೆ. ಇನ್ನು ಶ್ರೀಲಂಕಾದ ಕೊಲೊಂಬೊದಲ್ಲೂ ಮ್ಯಾಚ್​ಗಳು ನಿಗದಿಯಾಗಿವೆ. ಸೆಪ್ಟೆಂಬರ್​ 30 ರಂದು ಬೆಂಗಳೂರಿನಲ್ಲಿ ಭಾರತ ತಂಡ ಉದ್ಘಾಟನಾ ಪಂದ್ಯ ಆಡಲಿದೆ. ಅಕ್ಟೋಬರ್​ 29 ರಂದು ಮೊದಲ ಸೆಮಿಫೈನಲ್ ಗುವಾಹಟಿ ಅಥವಾ ಕೊಲೊಂಬೊದಲ್ಲಿ ನಡೆಯಲಿದೆ. ಅಕ್ಟೋಬರ್ 30 ರಂದು ಎರಡನೇ ಸೆಮಿಫೈನಲ್ ಬೆಂಗಳೂರು ಅಥವಾ ಕೊಲೊಂಬೊದಲ್ಲಿ ನಡೆಯಲಿದೆ.
2025ರ ಮಹಿಳಾ ವಿಶ್ವಕಪ್​ನಲ್ಲಿ ವಿಶ್ವದ 8 ತಂಡಗಳು ಭಾಗಿಯಾಗಲಿವೆ. ಭಾರತದ ಮಹಿಳಾ ತಂಡ ಸೇರಿದಂತೆ, ಆಸ್ಟ್ರೇಲಿಯಾ, ಇಂಗ್ಲೆಂಡ್​, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಪಾಕಿಸ್ತಾನ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ವಿಶ್ವಕಪ್​ನಲ್ಲಿ ಭಾಗಿಯಾಗಲಿವೆ. ಪಾಕಿಸ್ತಾನದ ಮಹಿಳಾ ತಂಡದ ಎಲ್ಲ ಪಂದ್ಯಗಳು ಕೊಲಂಬೊದಲ್ಲಿ ನಡೆಯಲಿವೆ. ಒಂದು ವೇಳೆ ಪಾಕಿಸ್ತಾನ ತಂಡ ಸೆಮಿಫೈನಲ್​ ಮತ್ತು ಫೈನಲ್​ಗೆ ಪ್ರವೇಶ ಪಡೆದರೆ ಈ ಎರಡು ಮಹತ್ವದ ಪಂದ್ಯಗಳನ್ನು ಕೊಲಂಬೊದಲ್ಲೇ ನಡೆಸಲಾಗುತ್ತದೆ ಎಂದು ತಿಳಿಸಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ