/newsfirstlive-kannada/media/post_attachments/wp-content/uploads/2024/02/Darshan_Star.jpg)
ಬೆಂಗಳೂರು: ಸ್ಯಾಂಡಲ್​ವುಡ್​ ನಟ ದರ್ಶನ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಮಹಿಳಾ ಸಂಘಟನೆಯಿಂದ ಕಾವೇರಿ ಭವನದಲ್ಲಿರೋ ಮಹಿಳಾ ಆಯೋಗದಲ್ಲಿ ದೂರು ದಾಖಲಾಗಿದೆ.
[caption id="attachment_48791" align="alignnone" width="800"]
ಗೌಡತಿಗರ ಸೇನೆ[/caption]
ಶ್ರೀರಂಗಪಟ್ಟಣದಲ್ಲಿ ಇತ್ತೀಚೆಗೆ ನಡೆದ ‘ದರ್ಶನ್ ಬೆಳ್ಳಿ ಪರ್ವ’ ಕಾರ್ಯಕ್ರಮದಲ್ಲಿ ಡಿಬಾಸ್ ಎಡವಟ್ಟು ಮಾಡಿಕೊಂಡಿದ್ದರು. 'ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ.. ಹೋಗ್ರೋ ಇವರಜ್ಜೀನ ಬಡಿಯಾ' ಎಂದು ದರ್ಶನ್ ಹೇಳಿದ್ದರು. ಈ ವಿಚಾರ ಮಹಿಳೆಯರ ಕೋಪಕ್ಕೆ ಕಾರಣವಾಗಿದ್ದು, ಗೌಡತಿಗರ ಸೇನೆ ಸೇರಿಕೊಂಡು ದೂರು ನೀಡಿದ್ದಾರೆ. ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡಿದ್ದ ದರ್ಶನ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
View this post on Instagram
ಕಾಟೇರ ಟೈಟಲ್​ ವಿಚಾರವಾಗಿ ನಿರ್ದೇಶಕ ಉಮಾಪತಿಗೆ ತಗಡು, ಗುಮ್ಮಿಸ್ಕೊತಿಯಾ ಎಂದು ಹೇಳಿಕೆ ನೀಡಿದ್ದ ದರ್ಶನ್​ ವಿರುದ್ಧ ನಿನ್ನೆ ಕರ್ನಾಟಕ ಪ್ರಜಾಪರ ವೇದಿಕೆ ಕೂಡ ದೂರು ನೀಡಿದೆ. ಕರ್ನಾಟಕ ಫಿಲ್ಮ್​ ಚೇಂಬರ್​ನಲ್ಲಿ ದೂರು ಸಲ್ಲಿಸಿದೆ. ರಾಜ್ಯಾಧ್ಯಕ್ಷ ಕನ್ನಡ ಶಫಿ ಅವರಿಂದ ದೂರು ದಾಖಲಾಗಿದೆ. ಮಾತ್ರವಲ್ಲದೆ, ಡಿಬಾಸ್​ ಈ ಹೇಳಿಕೆ ನೀಡಿದ್ದಕ್ಕೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಇದೀಗ ಮಹಿಳೆಯರ ಗೌಡತಿಗರ ಸೇನೆ ಕೂಡ ನಟನ ವಿರುದ್ಧ ತಿರುಗಿ ಬಿದ್ದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us