newsfirstkannada.com

VIDEO: ‘ಎಣ್ಣೆ’ ಬಂದ್ ಮಾಡಿಸಿದ್ರೆ ನೀವು ಹುಟ್ಟಿದ್ದೂ ಸಾರ್ಥಕ ಎಂದ ಮಹಿಳೆಯರು; ಸಿಎಂ ಸಿದ್ದರಾಮಯ್ಯ ಕೊಟ್ಟ ಉತ್ತರವೇನು?

Share :

Published July 25, 2023 at 4:08pm

Update July 25, 2023 at 4:10pm

    ಗಂಡ ಕುಡಿದು, ಕುಡಿದು ಬಸ್‌ ಸ್ಟ್ಯಾಂಡ್‌ ನ್ಯಾಗ ಬೀಳ್ತಾರಿ ಸಾರ್‌..

    ರಾಜ್ಯದಲ್ಲಿ ಸಾರಾಯಿ ಬಂದ್ ಮಾಡಿಸ್ರಿ ಸಾರ್ ಎಂದ ಮಹಿಳೆಯರು

    ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಸಿಎಂ ಕೈ ಹಿಡಿದು ಗೋಗರೆದ ನಾರಿಯರು

ಹಾವೇರಿ: ಗಂಡ ಕುಡಿದು, ಕುಡಿದು ಬಸ್‌ ಸ್ಟ್ಯಾಂಡ್‌ ನ್ಯಾಗ ಬೀಳ್ತಾರಿ ಸಾರ್‌.. ರಾಜ್ಯದಲ್ಲಿ ಎಣ್ಣೆ ಬ್ಯಾನ್ ಮಾಡುವಂತೆ ಮಹಿಳೆಯರು ಸಿಎಂ ಸಿದ್ದರಾಮಯ್ಯರನ್ನು ಗೊಗೆರೆದಿರೋ ಘಟನೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಹಾವೇರಿಗೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ಬಳಿಗೆ ಬಂದ ಮಹಿಳೆಯರು ತಮ್ಮ ಕಷ್ಟಗಳನ್ನು ಹೇಳಿಕೊಂಡರು.

ಜಿಲ್ಲಾಸ್ಪತ್ರೆಯಲ್ಲಿ ಸಿಎಂ ಮಾತನಾಡಿಸಲು ಬಂದ ಮಹಿಳೆಯರು ಸಾರ್.. ಸಾರಾಯಿ ಬಂದ್ ಮಾಡಿಸ್ರಿ ಸಾರ್ ಅಂತಾ ಕೇಳಿಕೊಂಡರು. ಆಗ ಮಧ್ಯಪ್ರವೇಶಿಸಿದ ಉಪಸಭಾಪತಿ ರುದ್ರಪ್ಪ ಲಮಾಣಿ ಅವರು ಓಹೋ.. ಎಣ್ಣೆನಾ ವಿಧಾನಸೌಧದಲ್ಲಿ ಚರ್ಚೆ ಮಾಡ್ತೀವಿ ಬಿಡವ್ವ ಎಂದರು. ಇಷ್ಟಾದರೂ ಸಿಎಂ ಸಿದ್ದರಾಮಯ್ಯರ ಕೈ ಹಿಡಿದು ಗೋಗರೆದ ಮಹಿಳೆಯರು, ಗಂಡ ಕುಡಿದು ಬಸ್ ಸ್ಟ್ಯಾಂಡ್‌ ನ್ಯಾಗ ಬೀಳ್ತಾರ್ರಿ ಸಾರ್‌.. ಹೆಂಡ್ರು, ಮಕ್ಕಳನ್ನು ಕುಡಿದ್ರು ಅಂದ್ರಾ ನೋಡೋದೇ ಇಲ್ಲ ಎಂದರು.

ಇನ್ನು, ರಾಜ್ಯದಲ್ಲಿ ಸಾರಾಯಿ ಬಂದ್ ಮಾಡಿಸಿದ್ರೂ ಅಂದ್ರಾ ನೀವು ಹುಟ್ಟಿದ್ದೂ ಸಾರ್ಥಕ ಆಗುತೈತಿ ನೋಡ್ರಿ ಎಂದು ಮಹಿಳೆಯೊಬ್ಬರು ಹೇಳಿದರು. ಆಗ ಮಹಿಳೆ ಮಾತಿಗೆ ವಾವ್ಹ್ ವಾವ್ಹ್‌ ಎಂದು ಉಪಸಭಾಪತಿ ರುದ್ರಪ್ಪ ಲಮಾಣಿ ಮತ್ತು ಸ್ಥಳಿಯ ಶಾಸಕರು ಕೂಗಿದರು. ಕೊನೆಗೆ ಆಯ್ತು, ಆಯ್ತು ಎನ್ನುತ್ತಲೇ ಮಹಿಳೆಯರಿಂದ ದೂರಾದ ಸಿಎಂ ಸಿದ್ದರಾಮಯ್ಯನವರು ಹೊರ ನಡೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: ‘ಎಣ್ಣೆ’ ಬಂದ್ ಮಾಡಿಸಿದ್ರೆ ನೀವು ಹುಟ್ಟಿದ್ದೂ ಸಾರ್ಥಕ ಎಂದ ಮಹಿಳೆಯರು; ಸಿಎಂ ಸಿದ್ದರಾಮಯ್ಯ ಕೊಟ್ಟ ಉತ್ತರವೇನು?

https://newsfirstlive.com/wp-content/uploads/2023/06/SIDDARAMAIAH-14-1.jpg

Load More