newsfirstkannada.com

‘ಮಹಿಷ ದಸರಾಗೆ ಅದು ಹೇಗೆ ಅವಕಾಶ ಕೊಡ್ತಾರೆ ನೋಡ್ತಿನಿ’.. ಸರ್ಕಾರಕ್ಕೆ ಚಾಲೆಂಜ್ ಮಾಡಿದ ಪ್ರತಾಪ್ ಸಿಂಹ

Share :

Published September 9, 2023 at 1:29pm

    ಚಾಮುಂಡಿದೇವಿಗೆ ಅವಮಾನ ಮಾಡಲು ನಾವು ಬಿಡುವುದಿಲ್ಲ

    ಮಹಿಷ ದಸರಾದಿಂದ ಬಹುಸಂಖ್ಯಾತರ ಭಾವನೆಗೆ ಧಕ್ಕೆ ಆಗುತ್ತೆ

    ಕಳೆದ ನಾಲ್ಕು ವರ್ಷದಿಂದ ಮಹಿಷ ದಸರಾಕ್ಕೆ ಅವಕಾಶ ಕೊಟ್ಟಿಲ್ಲ

ಮೈಸೂರು: ಅದು ಹೇಗೆ ಮಹಿಷ ದಸರಾ ಆಚರಣೆ ಮಾಡಲು ಅವಕಾಶ ಕೊಡುತ್ತಾರೆ ಅಂತ ನೋಡುತ್ತೇನೆ ಎಂದು ಸರ್ಕಾರಕ್ಕೆ ಸಂಸದ ಪ್ರತಾಪ್ ಸಿಂಹ ಅವರು ಚಾಲೆಂಜ್ ಮಾಡಿದ್ದಾರೆ.

ಮಹಿಷ ದಸರಾ ಸಂಬಂಧ ಪಟ್ಟಂತೆ ಮೈಸೂರಿನಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಅವರು, ಅದು ಯಾವ ಸರ್ಕಾರ ಬಂದರೂ ಮಹಿಷ ದಸರಾ ಆಚರಣೆ ಮಾಡುವಂತಿಲ್ಲ. ಅದು ಹೇಗೆ ಮಾಡುತ್ತಾರೆಂದು ನಾನು ನೋಡುತ್ತೇನೆ. ಮಹಿಷ ದಸರಾ ಎನ್ನುವ ಅಸಹ್ಯವನ್ನು, ಅಪದ್ಧವನ್ನು, ಅನಾಚಾರವನ್ನು ಮಾಡಿ ಅವಮಾನ ಮಾಡಲಿಕ್ಕೆ ಹೊರಟಾಗ ಆತ್ಮ ಸಾಕ್ಷಿಗೆ ನೋವಾಗಬೇಕಲ್ವಾ?. ಇದರ ಆಚರಣೆಯಿಂದ ಬಹುಸಂಖ್ಯಾತರ ಭಾವನೆಗೆ ಧಕ್ಕೆಯಾಗುತ್ತದೆ. ಹೀಗಿರುವಾಗ ತಾಯಿಯನ್ನು ತುಚ್ಛವಾಗಿ ಮಾತಾಡುವರಿಗೆ ಇದನ್ನು ಆಚರಣೆ ಮಾಡಲು ಹೇಗೆ ಅವಕಾಶ ನೀಡುತ್ತಾರೆ ಎಂದು ನೋಡುತ್ತೇನೆ ಅಂತ ಸಂಸದರು ಸವಾಲು ಹಾಕಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ

2019ರಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗಿದ್ದ ವೇಳೆ ವಿ.ಸೋಮಣ್ಣ ಹಾಗೂ ನಾವು ಸೇರಿ ಮಹಿಷ ದಸರಾಗೆ ಅನುಮತಿಗೆ ಅವಕಾಶ ಕೊಟ್ಟಿರಲಿಲ್ಲ. ಕಳೆದ 4 ವರ್ಷದಿಂದ ಇದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಮೈಸೂರಿನ ನಿವಾಸಿಗಳು ಈ ವಿಚಾರದಲ್ಲಿ ಒಟ್ಟಾಗಿ ಹೋರಾಡಬೇಕು ಎಂದು ಕರೆ ಕೊಟ್ಟರು.

ಈಗ ಮಹಿಷ ದಸರಾ ಮಾಡುವ 4 ಜನರ ಮನೆಯಲ್ಲಿ ಹೋಗಿ ನೋಡಿ. ಅವರ ಹೆಂಡತಿನೇ ಚಾಮುಂಡಿ ತಾಯಿಯ ಆರಾಧನೆ ಮಾಡುತ್ತಿರುತ್ತಾರೆ. ಇವರಿಗೆ ಕನಿಷ್ಠ ಅವರ ಮನೆಯವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲದವರು ಹೇಗೆ ಬುದ್ಧಿ ಜೀವಿಗಳಾಗುತ್ತಾರೆ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಮಹಿಷ ದಸರಾಗೆ ಅದು ಹೇಗೆ ಅವಕಾಶ ಕೊಡ್ತಾರೆ ನೋಡ್ತಿನಿ’.. ಸರ್ಕಾರಕ್ಕೆ ಚಾಲೆಂಜ್ ಮಾಡಿದ ಪ್ರತಾಪ್ ಸಿಂಹ

https://newsfirstlive.com/wp-content/uploads/2023/09/PRATAP_SIMHA.jpg

Load More