/newsfirstlive-kannada/media/post_attachments/wp-content/uploads/2025/05/PM-Modi-Pakistan-warn.jpg)
ನವದೆಹಲಿ: ಭಾರತದಲ್ಲಿ ಕಳೆದ 12 ವರ್ಷದಲ್ಲಿ ಬಡತನದ ಪ್ರಮಾಣ ಭಾರೀ ಇಳಿಕೆಯಾಗಿದೆ. ವಿಶ್ವ ಬ್ಯಾಂಕ್‌ನಿಂದ ಭಾರತದ ಬಡತನ ಪ್ರಮಾಣದ ಬಗ್ಗೆ ಅಂಕಿ ಅಂಶ ಬಿಡುಗಡೆ ಆಗಿದೆ. ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತದ ಅವಧಿಯಲ್ಲಿ 26 ಕೋಟಿ 7 ಲಕ್ಷ ಜನರು ಬಡತನದಿಂದ ಹೊರ ಬಂದಿದ್ದಾರೆ.
ಭಾರತದಲ್ಲಿ ಈಗ ಬಡತನದ ಪ್ರಮಾಣ ಶೇ. 27.1 ರಿಂದ ಶೇ.5.3ಕ್ಕೆ ಇಳಿಕೆಯಾಗಿದೆ. ಭಾರತದಲ್ಲಿ 2011-12ರಲ್ಲಿ 347 ಮಿಲಿಯನ್ ಜನರು ಬಡತನದಲ್ಲಿದ್ದರು. ಅಂದರೆ 2011-12ರಲ್ಲಿ 34.7 ಕೋಟಿ ಜನರು ಬಡತನದಲ್ಲಿ ಜೀವನ ನಡೆಸುತ್ತಿದ್ದರು. ಕಳೆದ 12 ವರ್ಷದಲ್ಲಿ ಜನರು ಬಡತನ ರೇಖೆಯಿಂದ ಹೊರ ತರುವಲ್ಲಿ ಭಾರತ ಸರ್ಕಾರ ಯಶಸ್ವಿಯಾಗಿದೆ.
ವಿಶ್ವಬ್ಯಾಂಕ್ ಅಂಕಿ-ಅಂಶದ ಪ್ರಕಾರ 2022-23ರ ವೇಳೆಗೆ 7 ಕೋಟಿ 5 ಲಕ್ಷ ಜನರು ಬಡತನದಲ್ಲಿದ್ದಾರೆ. 2011ರಿಂದ 2022-23ರ ವೇಳೆಗೆ 267 ಮಿಲಿಯನ್ ಜನರು ಬಡತನದಿಂದ ಹೊರ ಬಂದಿದ್ದಾರೆ. ಬರೋಬ್ಬರಿ 26.7 ಕೋಟಿ ಜನರು ಭಾರತದಲ್ಲಿ ಬಡತನದಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ.
ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳಲ್ಲೇ ಶೇಕಡಾ 65ರಷ್ಟು ಜನರು ಬಡತನದ ರೇಖೆಗಿಂತ ಕೆಳಗಿದ್ದರು.
2021ರ ಬೆಲೆಗಳ ಆಧಾರದ ಮೇಲೆ ಅಂತಾರಾಷ್ಟ್ರೀಯ ಬಡತನ ರೇಖೆಯಾದ ಪ್ರತಿ ನಿತ್ಯ 3 ಡಾಲರ್‌ಗಿಂತ ಕಡಿಮೆ ಅನುಭೋಗ ಮಾಡುವವರು ಬಡತನ ರೇಖೆಯ ಕೆಳಗಿದ್ದಾರೆ. ಆದರೆ, ಭಾರತದಲ್ಲಿ 11 ವರ್ಷಗಳಲ್ಲಿ ನಗರ, ಗ್ರಾಮೀಣ ಪ್ರದೇಶದಲ್ಲಿ ಬಡವರ ಸಂಖ್ಯೆಯಲ್ಲಿ ಇಳಿಕೆಯಾಗಿದೆ.
ಇದನ್ನೂ ಓದಿ: 7 ವರ್ಷ ಬೆಂಗಳೂರಿನ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದ ಈಕೆ ಟಾಲಿವುಡ್‌ನ ಕ್ರೇಜಿ ಕ್ವೀನ್.. ಯಾರು ಈ ಬ್ಯೂಟಿ!
2017ರಲ್ಲಿ ಅಂತಾರಾಷ್ಟ್ರೀಯ ಬಡತನ ರೇಖೆಯು ನಿತ್ಯ 2.15 ಡಾಲರ್‌ಗಿಂತ ಕಡಿಮೆ ಅನುಭೋಗ ಮಾಡುವವರು ಎಂದಾಗಿತ್ತು. ಇದರ ಆಧಾರದ ಮೇಲೆ ಲೆಕ್ಕ ಹಾಕಿದರೆ ಭಾರತದಲ್ಲಿ ಶೇ. 2.3ರಷ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ.
2011-12ರಲ್ಲಿ ಶೇ. 16ರಷ್ಟು ಜನರು ನಿತ್ಯ 2.15 ಡಾಲರ್‌ಗಿಂತ ಕಡಿಮೆ ಅನುಭೋಗ ಮಾಡುತ್ತಿದ್ದರು. 2022ರಲ್ಲಿ ನಿತ್ಯ 2.15 ಡಾಲರ್‌ಗಿಂತ ಕಡಿಮೆ ಖರ್ಚು ಮಾಡುವವರು ದೇಶದಲ್ಲಿ 3.3 ಕೋಟಿ ಜನರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ