/newsfirstlive-kannada/media/post_attachments/wp-content/uploads/2025/02/WORLD-CANCER-DAY.jpg)
ಕ್ಯಾನ್ಸರ್ ಜಾಗತಿಕವಾಗಿ ಮನುಷ್ಯರ ಸಾವಿಗೆ ಕಾರಣವಾಗುವ ಪ್ರಮುಖವಾದ ರೋಗ. ಪ್ರತಿ ವರ್ಷ ಲಕ್ಷಾಂತರ ಜನ ಈ ಮಾರಕ ಕಾಯಿಲೆಯಿಂದ ಪ್ರಾಣ ಬಿಡುತ್ತಾರೆ. ಅಂತಾರಾಷ್ಟ್ರೀಯ ಕ್ಯಾನ್ಸರ್ನ ಸಂಶೋಧನಾ ಸಂಸ್ಥೆ ಮತ್ತು ವಿರ್ಶವ ಆರೋಗ್ಯ ಸಂಸ್ಥೆಯ ಕ್ಯಾನ್ಸರ್ ಸಂಸ್ಥೆ ಹೇಳುವ ಪ್ರಕಾರ ವಿಶ್ವದಲ್ಲಿ ಒಟ್ಟು 2 ಕೋಟಿಗೂ ಅಧಿಕ ಕ್ಯಾನ್ಸರ್ ರೋಗಿಗಳು ಇದ್ದಾರೆ ಅದರಲ್ಲಿ 90 ಲಕ್ಷಕ್ಕೂ ಅಧಿಕ ಜನರು 2022 ರ ಸಾಲಿನಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಪ್ರತಿ ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್ ದಿನ ಎಂದು ಆಚರಿಸಲಾಗುತ್ತದೆ. 1999ರಲ್ಲಿ ಕ್ಯಾನ್ಸರ್ ವಿರುದ್ಧದ ಹೋರಾಟಕ್ಕಾಗಿ ಪ್ಯಾರಿಸ್ನಲ್ಲಿ ಒಂದು ಸಮಿತಿ ರಚಿಸಲಾಯಿತು. ಆ ದಿನವನ್ನು ವಿಶ್ವ ಕ್ಯಾನ್ಸರ್ ದಿನ ಎಂದು ಗುರುತಿಸಲಾಗುತ್ತದೆ.
ಇದನ್ನೂ ಓದಿ:ಮಂಗನ ಕಾಯಿಲೆ ಕುರಿತು ಆಘಾತಕಾರಿ ಮಾಹಿತಿ; ಸಂಶೋಧನೆಯಲ್ಲಿ ಶಾಕಿಂಗ್ ವಿಚಾರ ರಿವೀಲ್..!
ಕ್ಯಾನ್ಸರ್ ಅಂಟಿದವರು ಅಬ್ಬಬ್ಬಾ ಅಂದ್ರೆ ಐದು ವರ್ಷಗಳ ಕಾಲ ಬದುಕುತ್ತಾರೆ ಎಂಬದು ಕಳೆದ ಐದು ವರ್ಷಗಳಲ್ಲಿ 5 ಕೋಟಿ ಜನರ ಕ್ಯಾನ್ಸರ್ ರೋಗಿಗಳ ವಿಚಾರದಲ್ಲಿ ಇದು ನಿಜವಾಗಿದೆ. ಪ್ರತಿ ಐದು ಜನರಿಗೆ ಒಬ್ಬರಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಪುರುಷರಲ್ಲಿ ಪ್ರತಿ 9 ಜನರಲ್ಲಿ ಒಬ್ಬರಿಗೆ ಮಹಿಳೆಯರಲ್ಲಿ ಪ್ರತಿ 12 ಜನರಲ್ಲಿ ಒಬ್ಬರಿಗೆ ಕ್ಯಾನ್ಸರ್ ಕಂಡು ಬರುತ್ತದೆ
ಪ್ರಮುಖ ಕ್ಯಾನ್ಸರ್ಗಳು ಯಾವುವು?
ಸ್ತನ ಕ್ಯಾನ್ಸರ್: ಸ್ತನ ಕ್ಯಾನ್ಸರ್ ಅತಿಹೆಚ್ಚಾಗಿ ಕಾಡುವಂತಹ ಭೀಕರ ಕಾಯಿಲೆ ಎದೆಭಾರದಲ್ಲಿ ಗಂಟು ಕಾಣಿಸಿಕೊಳ್ಳುವ ಮೂಲಕ ಈ ಕ್ಯಾನ್ಸರ್ ಹರಡಿಕೊಳ್ಳುತ್ತದೆ. ಇದು ಹಾಲು ನಾಳದಲ್ಲಿ ಬೆಳೆಯುವ ಮೂಲಕ ಕಾಣಿಸಿಕೊಳ್ಳುತ್ತದೆ. ಇದರ ಪ್ರಮುಖ ಲಕ್ಷಣಗಳು ಅಂದ್ರೆ ಸ್ತನದ ಬಳಿ ಗಂಟುಗಳು ಕಾಣಿಸಿಕೊಳ್ಳುವುದು, ಸ್ತನಗಳ ಗಾತ್ರದಲ್ಲಿ ಬದಲಾವಣೆ, ಎದೆಭಾರದ ತೊಟ್ಟುಗಳಲ್ಲಿ ಸಮಸ್ಯೆ, ಎದೆಭಾರದಲ್ಲಿ ಸಹಿಸಲಾಗದ ನೋವು. ಇಂತಹ ಗುಣಲಕ್ಷಣಗಳು ಕಂಡು ಬರುತ್ತವೆ. ಇದು ಸ್ತ್ರೀಯರಲ್ಲಿ ಸಾಮಾನ್ಯವಾಗಿ ಮತ್ತು ಹೆಚ್ಚಾಗಿ ಕಂಡು ಬರುವಂತಹ ಕ್ಯಾನ್ಸರ್. ಜಾಗತಿಕವಾಗಿ 2022ರ ಲೆಕ್ಕದ ಪ್ರಕಾರ ಒಟ್ಟು 6 ಲಕ್ಷ 70 ಸಾವಿರ ಮಹಿಳೆಯರು ಈ ಸ್ತನ ಕ್ಯಾನ್ಸರ್ನಿಂದ ಜೀವ ಬಿಟ್ಟಿದ್ದಾರೆ. ಆಗಾಗ ಸ್ಕ್ಯಾನಿಂಗ್ ಮಾಡಿಸುವುದು ಮತ್ತು ಸ್ವಯಂ ಪರೀಕ್ಷೆ ಮಾಡಿಕೊಳ್ಳುವುದರ ಮೂಲಕ ಈ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು.
ಶ್ವಾಸಕೋಶದ ಕ್ಯಾನ್ಸರ್: ಕ್ಯಾನ್ಸರ್ ವಿಧಗಳಲ್ಲಿ ಅತಿಹೆಚ್ಚು ಕಂಡು ಬರುವ ಕ್ಯಾನ್ಸರ್ಗಳಲ್ಲಿ ಮತ್ತೊಂದು ಅಂದ್ರೆ ಅದು ಲಂಗ್ಸ್ ಕ್ಯಾನ್ಸರ್. ಶ್ವಾಸಕೋಶದಲ್ಲಿ ಅಬ್ನಾರ್ಮಲ್ ಸೆಲ್ಗಳ ಬೆಳವಣಿಗಳು ಆಗುವುದರಿಂದ ಈ ಶ್ವಾಸಕೋಶ ಕ್ಯಾನ್ಸರ್ ಬರುತ್ತದೆ. ಇದರ ಮೊದಲ ಗುಣಲಕ್ಷಣ ಅಂದ್ರೆ ಎಂದಿಗೂ ಗುಣವಾಗದ ಕಫ. ವಿಪರೀತ ಎನಿಸುವಷ್ಟು ಏಕಾಏಕಿ ತೂಕ ಇಳಿಕೆ. ಶ್ವಾಸಕೋಶದ ಸೋಂಕು ಇವು ಸಾಮಾನ್ಯ ಲಕ್ಷಣಗಳು. ಶ್ವಾಸಕೋಶ ಕ್ಯಾನ್ಸರ್ ಹೆಚ್ಚು ಕಂಡು ಬರುವುದು ಸಿಗರೇಟ್ ಸೇವನೆಯಿಂದ. ಸಿಗರೇಟ್ ಸೇದದವರಲ್ಲೂ ಕೂಡ ಇದು ಕಂಡು ಬರುತ್ತದೆ. ಅಂದರೆ ಸಿಗರೇಟ್ ಹೊಗೆಯನ್ನು ಪರೋಕ್ಷವಾಗಿ ಸೇವಿಸುವವರಿಗೆ ಅಂದ್ರೆ ಸೇದುವವರ ಪಕ್ಕದಲ್ಲಿ ಕೂರುವುದರಿಂದ ಕ್ಯಾನ್ಸರ್ ಬರುವ ಸಂಭವ ಇರುತ್ತದೆ. ಇವರನ್ನು ಸೆಕೆಂಡ್ ಹ್ಯಾಂಡ್ ಸ್ಮೂಕಿಂಗ್ ಎಂದು ಕರೆಯಲಾಗುತ್ತದೆ. ಮತ್ತು ವಾಯು ಮಾಲಿನ್ಯದಿಂದಲೂ ಕೂಡ ಈ ಕ್ಯಾನ್ಸರ್ ಬರುವ ಸಂಭವ ಇದೆ.
ಕೊಲೊರೆಕ್ಟಲ್ ಕ್ಯಾನ್ಸರ್ : ಇದನ್ನು ಸಿಆರ್ಸಿ ಎಂದು ಕರೆಯುತ್ತಾರೆ. ಇದು ದೊಡ್ಡ ಕರುಳಿಗೆ ಸಂಬಂಧಿಸಿದ ಒಂದು ಕ್ಯಾನ್ಸರ್ ಆಗಿದೆ ಗುದನಾಳ ಅಥವಾ ಕೊಲೊನ್ನಿಂದ ಹುಟ್ಟುವ ಕ್ಯಾನ್ಸರ್ ಇದಾಗಿದೆ. ಇದರ ಸಾಮಾನ್ಯ ಗುಣಲಕ್ಷಣಗಳು ಎಂದರೆ ಹೊಟ್ಟಗೆ ಸಂಬಂಧಿಸಿದ ಸಮಸ್ಯೆಗಳು, ಅತಿಸಾರ, ಅತಿಯಾದ ಆಯಾಸ ಮಲ ವಿಸರ್ಜನೆಯಲ್ಲಿ ರಕ್ತ ಹೋಗುವುದು ಹಾಗೂ ಹೊಟ್ಟೆಯಲ್ಲಿ ವಿಪರೀತ ನೋವು.
ಗರ್ಭಕೋಶದ ಕ್ಯಾನ್ಸರ್: ಇದು ನಾಲ್ಕನೇ ಅತಿ ಸಾಮಾನ್ಯವಾಗಿ ಕಂಡು ಬರುವ ಕ್ಯಾನ್ಸರ್ನಲ್ಲಿ ಒಂದು.ಹೆಚ್ಪಿವಿ ಎಂಬ ದೊಡ್ಡ ವಯರಸ್ ಇದಕ್ಕೆ ಕಾರಣ ಎಂದು ಹೇಳಲಗುತ್ತದೆ. ಇದರ ಗುಣಲಕ್ಷಣಗಳು ಯೋನಿಯಲ್ಲಿ ವಿಪರೀತ ರಕ್ತಸ್ರಾವ, ಹೊಟ್ಟೆಯ ಕೆಳಭಾಗದಲ್ಲಿ ವಿಪರೀತ ನೋವು. ಕಾಲು ನೋವು. ಮಿಲನದ ವೇಳೆಯಲ್ಲಿ ವಿಪರೀತ ನೋವು ಕಾಣುವುದು ಇದರ ಸಾಮಾನ್ಯ ಗುಣಲಕ್ಷಣಗಳಾಗಿವೆ.
ಬಾಯಿಯ ಕ್ಯಾನ್ಸರ್: ಭಾರತದಲ್ಲಿ ಅತಿ ಹೆಚ್ಚು ಬೆಳೆಯುತ್ತಿರುವ ಕ್ಯಾನ್ಸರ್ಗಳಲ್ಲಿ ಈ ಬಾಯಿಯ ಅಥವಾ ಓರಲ್ ಕ್ಯಾನ್ಸರ್ ಒಂದು. ಕೈನಿ, ಗುಟ್ಕಾ ವಿಪರೀತ ತಿನ್ನುವುದರಿಂದ ಈ ಕ್ಯಾನ್ಸರ್ ಬರುತ್ತದು. ಅಲ್ಸರ್, ಬಾಯಿಯಲ್ಲಿ ಕೆಂಪು ತೇಪೆಗಳು, ಬಾಯಿಯಲ್ಲಿನ ಬಣ್ಣದಲ್ಲಿ ಬದಲಾವಣೆ ಇವು ಒರಲ್ ಕ್ಯಾನ್ಸರ್ನ ಪ್ರಮುಖ ಲಕ್ಷಣಗಳು.
2025ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ ಸುಮಾರು ಮೂರು ಕೋಟಿಗೂ ಅಧಿಕ ಹೊಸ ಕ್ಯಾನ್ಸರ್ ರೋಗಿಗಳು ಹುಟ್ಟಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇದನ್ನು ಹೋಗಲಾಡಿಸಲು ಅದರ ಬಗೆಗಿನ ಜಾಗೃತಿ ಅಗತ್ಯ. ಅವುಗಳ ಬಗ್ಗೆ ಮಾಹಿತಿ ನೀಡುವುದು. ಅದರ ಲಕ್ಷಣ ಗುಣಲಕ್ಷಣಗಳ ಬಗ್ಗೆ ತಿಳುವಳಿಕೆ ಮೂಡಿಸಿ ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯುವುದು ಒಳ್ಳೆಯದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ