newsfirstkannada.com

ಬೂಮ್ರಾ ಸೆನ್ಸೇಷನ್.. ವಿಶ್ವಕಪ್​​ನಲ್ಲಿ ಹೆಚ್ಚು ವಿಕೆಟ್ ಪಡೆಯದಿದ್ರೂ ಸರಣಿ ಶ್ರೇಷ್ಠ ಕಿರೀಟ ಕೊಟ್ಟಿದ್ಯಾಕೆ ಗೊತ್ತಾ..?

Share :

Published July 1, 2024 at 9:58am

    ಟೀಮ್​ ಇಂಡಿಯಾಗೆ ಚುಟುಕು ವಿಶ್ವಕಪ್​ ಕಿರೀಟ

    ಫೈನಲ್​ ಫೈಟ್​ನಲ್ಲಿ ಬೂಮ್ರಾ ಬೊಂಬಾಟ್​ ದಾಳಿ

    ಇಂಡಿಯಾ ಗೆಲುವಿನ ಸೀಕ್ರೆಟ್​ ವೆಪನ್ ಬೂಮ್ರಾ

ಒಂದೇ ಒಂದು ಟ್ರೋಫಿ ಗೆಲುವು ಇಡೀ ಭಾರತವನ್ನೇ ಸಂಭ್ರಮದಲ್ಲಿ ತೇಲಾಡುವಂತೆ ಮಾಡಿದೆ. ಅಸಂಖ್ಯ ಅಭಿಮಾನಿಗಳ ಮನದಲ್ಲಿ ಟೀಮ್​ ಇಂಡಿಯಾದ ಬಗ್ಗೆ ಹೆಮ್ಮೆಯ ಭಾವ ಮೂಡಿದೆ. ಎಲ್ಲೇ ಹೋದ್ರೂ, ಚುಟುಕು ವಿಶ್ವಕಪ್​ ಗೆದ್ದು ಹೊಸ ಅಧ್ಯಾಯ ಶುರು ಮಾಡಿರುವ ಭಾರತ ತಂಡದ್ದೇ ಚರ್ಚೆ. ಅದ್ರಲ್ಲೂ ಯಾರ್ಕರ್​ ಸ್ಪೆಷಲಿಸ್ಟ್​ ಬೂಮ್ರಾರ ಆರಾಧನೆ ನಡೀತಿದೆ. ಬೆಂಕಿ ಎಸೆತಗಳಿಂದ ಬಿರುಗಾಳಿ ಎಬ್ಬಿಸಿದ ಬೂಮ್ರಾ ಸದ್ಯ ಸೆನ್ಸೇಷನ್ ಸೃಷ್ಟಿಸಿದ್ದಾರೆ.

ಚುಟುಕು ವಿಶ್ವಕಪ್​ ಕಿರೀಟಕ್ಕೆ ಟೀಮ್​ ಇಂಡಿಯಾ ಮುತ್ತಿಕ್ಕಿ ಒಂದು ದಿನವೇ ಕಳೀತು. ಆ ಗೆಲುವಿನ ಸಂಭ್ರಮ ಇಡೀ ದೇಶದಲ್ಲಿ ಕಮ್ಮಿಯಾಗಿಲ್ಲ. 11 ವರ್ಷಗಳ ನೋವು, ಹತಾಶೆ, ಕೊರಗಿಗೆ ಫುಲ್​ ಸ್ಟಾಫ್​ ಬಿದ್ದ ಸಂಭ್ರಮದಲ್ಲಿ ಭಾರತವೇ ತೇಲಾಡ್ತಿದೆ. ಕ್ರಿಕೆಟ್​ ಅಭಿಮಾನಿಗಳ ಸಂಭ್ರಮಕ್ಕಂತೂ ಫುಲ್​ಸ್ಟಾಫ್​ ಬಿದ್ದೇ ಇಲ್ಲ. ಸದ್ಯಕ್ಕೆ ಬೀಳೋದು ಇಲ್ಲ.

ಇದನ್ನೂ ಓದಿ:ಟಿ20 ವಿಶ್ವಕಪ್ ತಂಡ ಪ್ರಕಟಿಸಿದ ಐಸಿಸಿ.. 6 ಭಾರತೀಯ ಆಟಗಾರರಿಗೆ ಸ್ಥಾನ..!

ಚುಟುಕು ವಿಶ್ವಕಪ್​​ ಗೆಲುವಿನಲ್ಲಿ ಟೀಮ್​ ಇಂಡಿಯಾದ ಪ್ರತಿಯೊಬ್ಬರ ಕಾಂಟ್ರಿಬ್ಯೂಶನ್​ ಇದೆ. ಆನ್​ಫೀಲ್ಡ್​ನಲ್ಲಿ ಎಲ್ಲಾ ಆಟಗಾರರು ಕೆಚ್ಚೆದೆಯ ಹೋರಾಟ ನಡೆಸಿದ್ರ ಫಲವೇ ಭಾರತ ತಂಡ ಚುಟುಕು ಚಾಂಪಿಯನ್​ ಆಗಿದೆ. ಲೀಗ್​ ಹಂತದ ಮೊದಲ ಪಂದ್ಯದಿಂದ ಅಂತಿಮ ಪಂದ್ಯದವರೆಗೆ ಒಬ್ಬೊಬ್ಬರು ಮ್ಯಾಚ್​ ವಿನ್ನರ್​ಗಳು ತಂಡವನ್ನ ಗೆಲ್ಲಿಸಿದ್ದಾರೆ. ಎಲ್ಲಾ ಪಂದ್ಯಗಳಲ್ಲೂ ಕನ್ಸಿಸ್ಟೆಂಟ್​ ಪರ್ಫಾಮೆನ್ಸ್​ ನೀಡಿದ್ದು ಒಬ್ಬನೇ.. ಅದೇ ಜಸ್​ಪ್ರಿತ್​ ಬೂಮ್ರಾ.

ಫೈನಲ್​ ಫೈಟ್​ನಲ್ಲಿ ಬೂಮ್ರಾ ಬೊಂಬಾಟ್​ ದಾಳಿ
ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಅಕ್ಷರ್​ ಪಟೇಲ್​ ಹಾಕಿದ 15ನೇ ಓವರ್​ನಲ್ಲಿ ಹೆನ್ರಿಚ್​ ಕ್ಲಾಸೆನ್​ ಬರೋಬ್ಬರಿ 24 ರನ್​ ಚಚ್ಚಿದ್ರು. ಈ ವೇಳೆ ಪಂದ್ಯ ಟೀಮ್​ ಇಂಡಿಯಾ ಕೈ ಜಾರಿತು ಅಂತಲೇ ಎಲ್ಲರೂ ಭಾವಿಸಿದ್ರು. ನಂತರದ ಓವರ್​ನಲ್ಲೇ ದಾಳಿಗಿಳಿದ ಬೂಮ್ರಾ ಆಫ್ರಿಕನ್ನರ ಎದೆಯಲ್ಲಿ ನಡುಕ ಹುಟ್ಟಿಸಿದ್ರು. 16ನೇ ಓವರ್​ನಲ್ಲಿ ಜಸ್ಟ್​ 4 ರನ್​ ನೀಡಿದ್ರು. ಬಳಿಕ ಹಾಕಿದ 18ನೇ ಓವರ್​ನಲ್ಲಿ ಜಸ್ಟ್​ 2 ರನ್​ ನೀಡಿದ್ರು. ಈ ಎರಡು ಟೈಟ್​ ಓವರ್​ಗಳು ಸೌತ್​ ಆಫ್ರಿಕಾವನ್ನು ಸೋಲಿನ ದಾರಿಗೆ ಎಳೆದವು.

ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಗುಡ್​​ನ್ಯೂಸ್​.. ಸಿಲಿಂಡರ್ ಬೆಲೆಯಲ್ಲಿ ಮತ್ತೆ ಇಳಿಕೆ..!

ವಿಶ್ವಕಪ್​ ಅಖಾಡದಲ್ಲಿ ಬೂಮ್ರಾ ಬಿರುಗಾಳಿ..!
ಫೈನಲ್​ ಪಂದ್ಯ ಮಾತ್ರವಲ್ಲ.. ಈ ಬಾರಿಯ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ವೇಗಿ ಜಸ್​​ಪ್ರಿತ್​ ಬೂಮ್ರಾ ಬೆಂಕಿಯುಂಡೆಗಳನ್ನೇ ಉಗುಳಿದ್ರು. ಬೂಮ್ರಾ ಸುನಾಮಿಗೆ ಸಿಕ್ಕ ಬ್ಯಾಟ್ಸ್​ಮನ್​ಗಳು ಕಕ್ಕಾಬಿಕ್ಕಿಯಾಗಿ ಪೆವಿಲಿಯನ್​ ಸೇರಿದ್ರು. ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾ ಒಟ್ಟು 8 ಪಂದ್ಯವನ್ನಾಡಿತು. ಈ ಎಂಟೂ ಎದುರಾಳಿಗೆ ಸಿಕ್ಕಾಪಟ್ಟೆ ಕಾಟ ಕೊಟ್ಟಿದ್ದು ಯಾರ್ಕರ್​ ಸ್ಪೆಷಲಿಸ್ಟ್ ಬೂಮ್ರಾ ಮಾತ್ರ.

ವೆಸ್ಟ್​ಇಂಡೀಸ್​​ ಯುಎಸ್​ಎನಲ್ಲಿ ನಡೆದ ಚುಟುಕು ವಿಶ್ವಕಪ್​ನಲ್ಲಿ ಜಸ್​ಪ್ರಿತ್​ ಬೂಮ್ರಾ ನೀಡಿದ ಪರ್ಫಾಮೆನ್ಸ್​ನ ಹೈಲೆಟ್ಸ್​ ಇದು. ಟೂರ್ನಿಯಲ್ಲಿ ಒಟ್ಟಾರೆ 8 ಪಂದ್ಯಗಳನ್ನಾಡಿದ ಬೂಮ್ರಾ 29.4 ಓವರ್​ ಬೌಲಿಂಗ್​ ಮಾಡಿದ್ರು. ಬ್ಯಾಟ್ಸ್​ಮನ್​ಗಳ ಗೇಮ್​ ಅನ್ನಿಸಿಕೊಳ್ಳೋ ಟಿ20 ಫಾರ್ಮೆಟ್​ನಲ್ಲಿ ಕೇವಲ 4.18ರ ಎಕಾನಮಿಯಲ್ಲಿ ರನ್​ ಬಿಟ್ಟುಕೊಟ್ಟು15 ವಿಕೆಟ್​ ಬೇಟೆಯಾಡಿದ್ರು. ಟೀಮ್​ ಇಂಡಿಯಾ ಅಜೇಯ ಓಟದ ಹಿಂದಿನ ಮೇನ್​ ರೀಸನ್​ ಇದೇ ಬೂಮ್ರಾ.

ಇದನ್ನೂ ಓದಿ:ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಟೀಂ ಇಂಡಿಯಾಗೆ ಸಂಕಷ್ಟ.. ಅಯ್ಯೋ ಏನಾಯ್ತು..?

ಬೂಮ್ರಾ ಮುಡಿಗೆ ಸರಣಿ ಶ್ರೇಷ್ಟ ಕಿರೀಟ
ಟೂರ್ನಿಯೂದ್ದಕ್ಕೂ ಪಕ್ಕಾ ಲೈನ್​ ಅಂಡ್ ಲೆಂಥ್​ನಲ್ಲಿ ಬೌಲಿಂಗ್​ ಮಾಡಿದ ಜಸ್​ಪ್ರಿತ್​ ಬೂಮ್ರಾ ಎದುರಾಳಿ ಬ್ಯಾಟರ್​​ಗಳನ್ನ ಬಿಟ್ಟೂ ಬಿಡದೇ ಕಾಡಿದ್ರು. ಬೂಮ್ರಾ ಬೆಂಕಿ ಎಸೆತಗಳನ್ನು ಹಾಕ್ತಿದ್ರೆ ಬ್ಯಾಟ್ಸ್​ಮನ್​ಗಳ ರನ್​ಗಳಿಸೋದು ಸೆಕೆಂಡರಿ, ವಿಕೆಟ್​ ಉಳಿಸಿಕೊಳ್ಳೋಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಈ ಟೂರ್ನಿಯಲ್ಲಿ ಬೂಮ್ರಾ ಹೈಯೆಸ್ಟ್​ ವಿಕೆಟ್​ ತೆಗೆಯದೇ ಇರಬಹುದು ಆದ್ರೆ 399.49ರ ಇಂಪ್ಯಾಕ್ಟ್​​ ಪಾಯಿಂಟ್ಸ್​ ಹೊಂದಿದ್ದಾರೆ. ಉಳಿದೆಲ್ಲಾ ಬೌಲರ್​ಗಳಿಗಿಂದ ಬೂಮ್ರಾ ಬೆಸ್ಟ್​ ಎನಿಸಿದ್ದಾರೆ. ಈ ಪರ್ಫಾಮೆನ್ಸ್​ನ ಕಾರಣಕ್ಕೆ ಟೂರ್ನಿಯ ಸರಣಿ ಶ್ರೇಷ್ಟ ಗೌರವಕ್ಕೂ ಪಾತ್ರರಾಗಿದ್ದಾರೆ.

ಇದನ್ನೂ ಓದಿ:‘ಆಟದ ನಂತರ ನಾನು ಅಳುವುದಿಲ್ಲ, ಆದರೆ ಇವತ್ತು..’ ಬೂಮ್ರಾ ಹೇಳಿದ್ದೇನು..?

ಬ್ಯಾಟ್ಸ್​ಮನ್​ಗಳ ಗೇಮ್​ನಲ್ಲಿ ಬೌಲರ್​ ಬೂಮ್ರಾ ಸದಾ ಸಖತ್​ ಸದ್ದು ಮಾಡ್ತಾರೆ. ಈ ಬಾರಿಯ ವಿಶ್ವಕಪ್​​ ಟೂರ್ನಿಯಲ್ಲೂ ಅದ್ಭುತ ಆಟವಾಡೋ ಮೂಲಕ ಬೂಮ್ರಾ ತಾನೆಂಥ ಶ್ರೇಷ್ಠ ಬೌಲರ್​​ ಅನ್ನೋದನ್ನ ಮತ್ತೊಮ್ಮೆ ನಿರೂಪಿಸಿದ್ದಾರೆ. ಕೆಚ್ಚೆದೆಯ ಹೋರಾಟ ನಡೆಸ್ತಾ ಟೀಮ್​ ಇಂಡಿಯಾ ಗೆಲುವಿನ ಸೀಕ್ರೆಟ್​ ವೆಪನ್​ ಆಗಿ ಮಾರ್ಪಟ್ಟಿರೋ ಬೂಮ್ರಾ, ಮುಂದೆಯೂ ಇದೇ ಖದರ್​ನಲ್ಲಿ ಪರ್ಫಾಮೆನ್ಸ್​ ಮುಂದುವರೆಸಲಿ ಅನ್ನೋದೆ ಎಲ್ಲರ ಆಶಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೂಮ್ರಾ ಸೆನ್ಸೇಷನ್.. ವಿಶ್ವಕಪ್​​ನಲ್ಲಿ ಹೆಚ್ಚು ವಿಕೆಟ್ ಪಡೆಯದಿದ್ರೂ ಸರಣಿ ಶ್ರೇಷ್ಠ ಕಿರೀಟ ಕೊಟ್ಟಿದ್ಯಾಕೆ ಗೊತ್ತಾ..?

https://newsfirstlive.com/wp-content/uploads/2024/07/Bhumrah-3.jpg

Load More