Advertisment

ವಿಶ್ವ ಚೆಸ್ ಚಾಂಪಿಯನ್ ಗುಕೇಶ್​ ಬಳಿ ಇರುವ ಆಸ್ತಿ ಎಷ್ಟು? 18 ವರ್ಷದ ಈ ಚದುರಂಗ ಕಿಲಾಡಿಯ ಇಂಟ್ರೆಸ್ಟಿಂಗ್ ಮಾಹಿತಿ

author-image
Gopal Kulkarni
Updated On
ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಇತಿಹಾಸ.. ಚಾಂಪಿಯನ್ D ಗುಕೇಶ್ ಬಗ್ಗೆ ನಿಮಗೆ ಎಷ್ಟು ಗೊತ್ತು?
Advertisment
  • ವಿಶ್ವ ಚೆಸ್ ಚಾಂಪಿಯನ್​ ಈ ಮಟ್ಟಕ್ಕೆ ಬೆಳೆಯಲು ಯಾರು ಕಾರಣ ಅಂತ ಗೊತ್ತಾ?
  • 7ನೇ ವಯಸ್ಸಿನಲ್ಲಿ ಚದುರಂಗದಾಟಕ್ಕೆ ಇಳಿದ ಗುಕೇಶ್​ ಸಾಧನೆಯ ದಾರಿ ಹೇಗಿದೆ
  • 2015ರಿಂದ ಇಲ್ಲಿಯವರೆಗೂ ಗುಕೇಶ್ ಗೆದ್ದಿರುವ ಪ್ರಶಸ್ತಿಗಳೆಷ್ಟು? ಇರುವ ಆಸ್ತಿ ಎಷ್ಟು?

ಡಿ.ಗುಕೇಶ್ ಈ ಒಂದು ಹೆಸರು ಈಗ ಎಲ್ಲಾ ಭಾರತೀಯರ ಹೆಮ್ಮೆಯಾಗಿ ಮಾರ್ಪಾಡಾಗಿದೆ. ಇಷ್ಟು ಕಿರಿಯ ವಯಸ್ಸಿನ ಚೇತನ ಮಾಡಿದ ಸಾಧನೆಗೆ ಈಗ ಎಲ್ಲರೂ ತಲೆದೂಗುತ್ತಿದ್ದಾರೆ. ಗುಕೇಶ್​ನ ಶಿಸ್ತು ಹಾಗೂ ಶ್ರದ್ಧೆಗಳ ಬಗ್ಗೆ ಇಡೀ ವಿಶ್ವವೇ ಮೆಚ್ಚುಗೆಯ ಮಾತುಗಳನ್ನಾಡುತ್ತಿದೆ. ಈ ಗುಕೇಶ್​ ಬಗ್ಗೆ ಕೆಲವೊಂದಿಷ್ಟು ಇಂಟ್ರೆಸ್ಟಿಂಗ್​ ಮಾಹಿತಿಗಳನ್ನು ನಾವು ನಿಮ್ಮ ಮುಂದೆ ತೆರೆದಿಡಲಿದ್ದೇವೆ.

Advertisment

ಗುಕೇಶ್ ಚೆನ್ನೈನಲ್ಲಿ ಮೇ 29, 2006ರಲ್ಲಿ ಜನಿಸಿದರು. ತಂದೆ ರಜಿನಿಕಾಂತ್​, ಇಎನ್​​ಟಿ ಸರ್ಜನ್, ತಾಯಿ ಡಾ ಪದ್ಮಾ ಮೈಕ್ರೋಬಯಾಲಜಿಸ್ಟ್. ಈ ಒಂದು ಮನೆಯ ವಾತಾವರಣವೇ ಗುಕೇಶ್​ ಬದುಕಿಗೆ ಒಂದು ಬಲಿಷ್ಠ ಬುನಾದಿಯಾಗಿ ಮಾರ್ಪಟ್ಟಿತು. ಗುಕೇಶ್​ನ ಚೆಸ್​ ಪ್ರಯಾಣ ಆತನ 7ನೇ ವಯಸ್ಸಿನಿಂದಲೇ ಶುರುವಾಯ್ತು. ಗುಕೇಶ್ ಬಾಲ್ಯದಲ್ಲಿಯೇ ಅಳವಡಿಸಿಕೊಂಡ ಶಿಸ್ತು ಹಾಗೂ ತನ್ನ ಆಟದ ಬಗೆಗಿನ ಶ್ರದ್ಧೆ ಅವರ ಅದಮ್ಯ ಸಾಧನೆಗೆ ದಾರಿದೀಪವಾಯ್ತು.

ಇದನ್ನೂ ಓದಿ:ಆಪ್ತಮಿತ್ರನ ಆಪತ್ತಿನ ಕಾಲಕ್ಕೆ ಆಗದ ಸಚಿನ್​; ಬಾಲ್ಯ ಸ್ನೇಹಿತ ತೆಂಡೂಲ್ಕರ್ ಬಗ್ಗೆ ಕಾಂಬ್ಳಿ​ ಏನಂದ್ರು?

2015ರಲ್ಲಿ ಚೆಸ್​ ಮಾಂತ್ರಿಕ ಏಷಿಯನ್ ಸ್ಕೂಲ್ ಚೆಸ್ ಚಾಂಪಿಯನ್​ಶಿಪ್​ನ್ನು ಗೆದ್ದುಕೊಳ್ಳುವ ಮೂಲಕ ಮುಂದೆ ವಿಶ್ವ ಚಾಂಪಿಯನ್ ಆಗಲಿದ್ದೇನೆ ನಾನು ಎಂಬ ನೇರ ಸಂದೇಶವನ್ನು ನೀಡಿದ್ದ. ಇದಾದ ಮೂರು ವರ್ಷಗಳ ಬಳಿಕ 2018ರಲ್ಲಿ ವರ್ಲ್ಡ್​ ಯುತ್ ಚಾಂಪಿಯನ್​ಶಿಪ್​ನಲ್ಲಿ ಒಟ್ಟು 5 ಗೋಲ್ಡ್ ಮೆಡಲ್​ಗಳನ್ನು ತನ್ನದಾಗಿಸಿಕೊಂಡಿದ್ದ.
ಗುಕೇಶ್​ ಬದುಕಿನಲ್ಲಿ ದೊಡ್ಡ ತಿರುವು ಸಿಕ್ಕಿದ್ದು 2023ರಲ್ಲಿ, ಆಗ ಆತನ ವಯಸ್ಸು ಜಸ್ಟ್ 17, ಇದೇ ವಯಸ್ಸಿನಲ್ಲಿ ಗುಕೇಶ್​ 2750 Elo ದಾಟಿದ ಅತ್ಯಂತ ಕಿರಿಯ ಚೆಸ್​ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. ಅಷ್ಟು ಮಾತ್ರವಲ್ಲ ಭಾರತದ ಚೆಸ್​ ಮಾಂತ್ರಿಕ ವಿಶ್ವನಾಥ್ ಆನಂದರ ದಾಖಲೆಯನ್ನೇ ಪುಡಿ ಪುಡಿ ಮಾಡಿದರು. ಮೊನ್ನೆಯಷ್ಟೇ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಗೆಲುವು ದಾಖಲಿಸುವ ಮೂಲಕ ಎಲಾನ್ ಮಸ್ಕ್​ರಿಂದಲೇ ಶ್ಲಾಘನೆ ಪಡೆದಿದ್ದಾರೆ

Advertisment

2024ರಲ್ಲಿ ಬಂದಿರುವ ವರದಿಯ ಪ್ರಕಾರ ಗುಕೇಶ್​ ಬಳಿ ಇರುವ ಒಟ್ಟು ಆಸ್ತಿ 8.26 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಅತಿಹೆಚ್ಚು ಹಣ ಆತನಿಗೆ ಹರಿದು ಬಂದಿದ್ದ ಚೆಸ್ ಪಂದ್ಯಾವಳಿಯಲ್ಲಿ ಗೆಲ್ಲುವ ಮೂಲಕವೆ. ಬಳಿಕ ರಾಷ್ಟ್ರೀಯ ಅಂತಾರಾಷ್ಟ್ರೀಯ ಬ್ರ್ಯಾಂಡ್​ಗಳು ಕೂಡ ಇವನ ಸಂಪತ್ತಿಗೆ ಕೊಡುಗೆಗಳನ್ನು ಕೊಟ್ಟಿವೆ. ಈತ ಗೆದ್ದಾಗಲೆಲ್ಲಾ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೂಡ ಆರ್ಥಿಕ ಸಹಾಯಕ್ಕೆ ಮುಂದಾಗಿವೆ. ಈ ಮೂಲಕ ಗುಕೇಶ್ ಒಟ್ಟು 8.26 ಕೋಟಿ ರೂಪಾಯಿಯ ಒಡೆಯನಾಗಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment