newsfirstkannada.com

World Cup 2023: ಟೀಂ ಇಂಡಿಯಾ ವಿಶ್ವಕಪ್​ ಗೆದ್ದರೆ ಝಣ ಝಣ ಝಣ ಜೇಬು ತುಂಬಾ ಹಣ.. ಎಷ್ಟು ಕೋಟಿ ಸಿಗುತ್ತೆ ಗೊತ್ತಾ?

Share :

Published November 19, 2023 at 6:38am

Update November 19, 2023 at 6:55am

    ಇಂದು ಎಲ್ಲರ ಕಣ್ಣು ಟೀಂ ಇಂಡಿಯಾದ ಮೇಲೆ

    ಕಪ್​ ಗೆಲ್ಲೋ ಕನಸಿನಲ್ಲಿ ಟೀಂ ಇಂಡಿಯಾದ ಆಟಗಾರರು

    ವಿಶ್ವಕಪ್​ ಗೆದ್ದರೆ ಆಟಗಾರರಿಗೆ ಝಣ ಝಣ ಹಣ

1983ರಲ್ಲಿ ಕಪಿಲ್​ ದೇವ್​ ನಾಯಕತ್ವದಲ್ಲಿ ಟೀಂ ಇಂಡಿಯಾ ವಿಶ್ವಕಪ್​ ಗೆದ್ದಾಗ ಕ್ರಿಕೆಟ್​ ಅಭಿಮಾನಿಯಾದ ಲತಾ ಮಂಗೇಶ್ಕರ್​ ಅವರು ತಂಡದ ಆಟಗಾರರಿಗೆ ತಲಾ 1 ಲಕ್ಷ ರೂಪಾಯಿ ಬಹುಮಾನ ನೀಡುವಂತೆ ಕೇಳಿಕೊಂಡರು. 2011ರಲ್ಲಿ ಧೋನಿ ನಾಯಕತ್ವದಲ್ಲೂ ಟೀಂ ಇಂಡಿಯಾ ಗೆದ್ದಾಗ ಹಣ ಸುರಿಮಳೆಯನ್ನೇ ಸುರಿಸಲಾಗಿದೆ. ಆದರೆ ಈ ಬಾರಿಯ ವಿಶ್ವಕಪ್​ ಗೆದ್ದರೆ ಎಷ್ಟು ಮೊತ್ತದ ಬಹುಮಾನ ಸಿಗಲಿದೆ ಗೊತ್ತಾ? ಈ ಸ್ಟೋರಿ ಓದಿ.

ಕಪಿಲ್​ ದೇವ್​ ನಾಯಕತ್ವದಲ್ಲಿ ಟೀಂ ಇಂಡಿಯಾ ವಿಶ್ವಕಪ್​ ಗೆದ್ದಾಗ ಪ್ರತಿ ಪಂದ್ಯಕ್ಕೆ 50 ಪೌಂಡ್​ಗಳನ್ನ ದೈನಂದಿನ ಭತ್ಯೆಯಾಗಿ ನೀಡಿದರು.

1983ರಲ್ಲಿ ವಿಕೆಟ್​ ಕೀಪರ್​ ಆಗಿದ್ದ ಸೈಯದ್‌ ಕಿರ್ಮಾನಿ ಈ ಬಗ್ಗೆ ಸಂದರ್ಶನವೊಂದರಲ್ಲೂ ಹೇಳಿಕೊಂಡಿದ್ದರು. ‘ನಾವು ಪ್ರತಿದಿನ 50 ಪೌಂಡ್‌ಗಳನ್ನು ದೈನಂದಿನ ಭತ್ಯೆಯಾಗಿ ಪಡೆಯುತ್ತಿದ್ದೆವು. ಈ ಮೊತ್ತವನ್ನು ರಾತ್ರಿ ಊಟಕ್ಕೆ, ಬಟ್ಟೆಗೆ ಬಳಸಿದ್ದೇವೆ. ಇಡೀ ಪ್ರವಾಸಕ್ಕೆ 15 ಸಾವಿರ ರೂಪಾಯಿ ಬೋನಸ್​ ಪಡೆದಿದ್ದೇವೆ. ಇದನ್ನ ಟ್ರೋಫಿ ಗೆದ್ದು ಭಾರತಕ್ಕೆ ಹಿಂತಿರುಗಿದ ಬಳಿಕ ನೀಡಲಾಯಿತು’’ ಎಂದು ಹೇಳಿದ್ದರು.

ಇನ್ನು ಧೋನಿ ನಾಯಕತ್ವದಲ್ಲಿ ವಿಶ್ವಕಪ್​ ಗೆದ್ದ ಆಟಗಾರರಿಗೆ ತಲಾ 2 ಕೋಟಿ ರೂಪಾಯಿ ಬಹುಮಾನ ಸಿಕ್ಕಿತು. ಅಲ್ಲದೆ, ವಿವಿಧ ರಾಜ್ಯಗಳು ಆಯಾಯ ಆಟಗಾರರಿಗೆ ಬಹುಮಾನ ನೀಡಿತು. ಆದರೀಗ ಇಂದು ನಡೆಯುವ ವಿಶ್ವಕಪ್​ನಲ್ಲಿ ಭಾರತ ಜಯಭೇರಿಯಾದರೆ ಎಷ್ಟು ಹಣ ಸಿಗಲಿದೆ ಗೊತ್ತಾ?

ವಿಶ್ವಕಪ್​ನಲ್ಲಿ ಚಾಂಪಿಯನ್​ ತಂಡ ಐಸಿಸಿಯಿಂದ 33.17 ಕೋಟಿ ಬಹುಮಾನ ಪಡೆಯಲಿದೆ. ಆದರೆ ರನ್ನರ್​ ಅಪ್​ ಆದರೆ 16 ಕೋಟಿಯಷ್ಟು ಹಣ ಸಿಗಲಿದೆ. ಇನ್ನು ಸೆಮಿಫೈನಲ್​ನಲ್ಲಿ ಸೋತ ತಂಡಗಳಿಗೆ 6.63 ಕೋಟಿ ಹಣ ಸಿಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

World Cup 2023: ಟೀಂ ಇಂಡಿಯಾ ವಿಶ್ವಕಪ್​ ಗೆದ್ದರೆ ಝಣ ಝಣ ಝಣ ಜೇಬು ತುಂಬಾ ಹಣ.. ಎಷ್ಟು ಕೋಟಿ ಸಿಗುತ್ತೆ ಗೊತ್ತಾ?

https://newsfirstlive.com/wp-content/uploads/2023/11/2023-match-6.jpg

Load More