/newsfirstlive-kannada/media/post_attachments/wp-content/uploads/2023/10/Pak-vs-NED.jpg)
ಏಕದಿನ ವಿಶ್ವಕಪ್ ಟೂರ್ನಿಯ 2ನೇ ಪಂದ್ಯದಲ್ಲಿ ಇವತ್ತು ಪಾಕಿಸ್ತಾನ ಮತ್ತು ನೆದರ್ಲೆಂಡ್ಸ್ ಮುಖಾಮುಖಿಯಾಗಲಿವೆ. ವೆಸ್ಟ್ ಇಂಡೀಸ್ ತಂಡಕ್ಕೆ ಶಾಕ್ ಕೊಟ್ಟು ಏಕದಿನ ವಿಶ್ವಕಪ್‌ಗೆ ಎಂಟ್ರಿ ಕೊಟ್ಟ ನೆದರ್ಲೆಂಡ್ಸ್ ತಂಡ ಈಗ ಬಲಿಷ್ಠ ಪಾಕಿಸ್ತಾನಕ್ಕೆ ಸವಾಲೆಸೆಯಲು ಸಿದ್ಧವಾಗಿದೆ.
ಹೈದ್ರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ನೆದರ್ಲೆಂಡ್ಸ್ ತಂಡವು ಆಡಬೇಕಿದ್ದ ಎರಡು ವಿಶ್ವಕಪ್ ಅಭ್ಯಾಸ ಪಂದ್ಯಗಳು ಮಳೆಯಿಂದಾಗಿ ರದ್ದಾಗಿತ್ತು. ಇತ್ತ ಪಾಕಿಸ್ತಾನ ತಂಡವು ಇದೇ ಹೈದರಾಬಾದ್ ಮೈದಾನದಲ್ಲಿ ಎರಡು ಅಭ್ಯಾಸ ಪಂದ್ಯಗಳನ್ನ ಆಡಿದೆ. ಈ ಎರಡೂ ಪಂದ್ಯಗಳಲ್ಲಿ ಸೋಲನುಭವಿಸಿದೆ.
ಇದನ್ನು ಓದಿ:ENGvsNZ: ವಿಶ್ವಕಪ್ ಮಹಾ ಮೇಳಕ್ಕೆ ಚಾಲನೆ.. ಟಾಸ್ ಗೆದ್ದು ಬೌಲಿಂಗ್ ಆಯ್ದು ಕೊಂಡ ನ್ಯೂಜಿಲೆಂಡ್
ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೋತರೆ, ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿದೆ. ಇದೀಗ ಸತತ ಮೂರನೇ ಬಾರಿ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಆಡುತ್ತಿರುವ ಬಾಬರ್ ಬಳಗ ಡಚ್ಚರ ವಿರುದ್ಧ ಗೆಲ್ಲುವ ವಿಶ್ವಾಸದಲ್ಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ