newsfirstkannada.com

ಶ್ರೇಯಸ್​, ಶುಭ್​ಮನ್​ ಗಿಲ್​ ಅಬ್ಬರದ ಬ್ಯಾಟಿಂಗ್​.. ಟೆನ್ಷನ್​ನಿಂದ ಫ್ರೀ ಆದ್ರಾ ಕ್ಯಾಪ್ಟನ್ ರೋಹಿತ್, ದ್ರಾವಿಡ್?

Share :

Published November 4, 2023 at 2:34pm

    ಫಾರ್ಮ್​ ಕಂಡುಕೊಂಡ ಶುಭ್​​​ಮನ್ ಗಿಲ್​ ಹಾಗೂ ಶ್ರೇಯಸ್ ಅಯ್ಯರ್

    ತಂಡದ ಬ್ಯಾಟಿಂಗ್, ಬೌಲಿಂಗ್​​​, ಫೀಲ್ಡಿಂಗ್​ ಬಗ್ಗೆ ಬೆಸ್ಟ್​ ಕಾಂಪ್ಲಿಮೆಂಟ್

    ಶ್ರೇಯಸ್​ ಅಯ್ಯರ್​​​- ಗಿಲ್​​​​​ ಬ್ಯಾಕ್ ವಿತ್​​​ ಬ್ಯಾಂಗ್​, ಹಿರಿಯರು ಸಂತಸ

ಈ ವಿಶ್ವಕಪ್​​ನಲ್ಲಿ ಭಾರತಕ್ಕೆ ಅನ್​​ಸ್ಟೇಬಲ್​ ಅನ್ನೋ ಟ್ಯಾಗ್​​ಲೈನ್​ ಇದೆ. ಆದ್ರೆ ಸತತವಾಗಿ ಗೆದ್ರೂ ಆ ಕೊರಗು ಮಾತ್ರ ನೀಗಿರ್ಲಿಲ್ಲ. ಇನ್ಯಾಗಪ್ಪಾ ಅದಕ್ಕೆ ಪುಲ್​ಸ್ಟಾಪ್​​​​​ ಬೀಳುತ್ತೆ ಕಾಯೋದೆ ಆಗಿತ್ತು. ಕೊನೆಗೀಗ ಆ ಕೊರಗು ನೀಗಿದೆ. ಕ್ಯಾಪ್ಟನ್ ರೋಹಿತ್​​​​​​-ಹೆಡ್​ಕೋಚ್​ ದ್ರಾವಿಡ್​​​​ ಟೆನ್ಷನ್​​ ಫ್ರೀ ಆಗಿದ್ದಾರೆ.

ಒನ್ಡೆ ವಿಶ್ವಕಪ್​​ನಲ್ಲಿ 9 ತಂಡಗಳ ಕಥೆ ಒಂದಾದ್ರೆ ಟೀಮ್ ಇಂಡಿಯಾದ್ದೇ ಭಿನ್ನ. ಇಲ್ಲಿ ತನಕ ಸೋಲನ್ನೇ ಕಂಡಿಲ್ಲ. ಸತತ 7 ಪಂದ್ಯ ಗೆದ್ದು ಸೆಮಿಫೈನಲ್​​ಗೆ ಎಂಟ್ರಿಕೊಟ್ಟಿದೆ. ಬ್ಯಾಟಿಂಗ್​​​​​, ಬೌಲಿಂಗ್​​​ ಹಾಗೂ ಫೀಲ್ಡಿಂಗ್​ ಬಗ್ಗೆ ಬೆಸ್ಟ್​ ಕಾಂಪ್ಲಿಮೆಂಟ್​​ ಸಿಗ್ತಿದೆ. ಇಷ್ಟಾದ್ರು ಕ್ಯಾಪ್ಟನ್-ಕೋಚ್​​​ಗೆ ಖುಷಿ ಇರ್ಲಿಲ್ಲ. ಆ ಇಬ್ಬರ ಅನ್​​ಕನ್ಸಿಸ್ಟನ್ಸಿ ಫಾರ್ಮ್​ ಬಿಗ್​ ಹೆಡ್​​ಹೆಕ್​ ಆಗಿತ್ತು.

ರೋಹಿತ್ ಮತ್ತು ಕೋಚ್ ದ್ರಾವಿಡ್

ರೋಹಿತ್​​​​​-ದ್ರಾವಿಡ್​ ಟೆನ್ಷನ್​ ಫ್ರೀ..ಬಂತು ಆನೆಬಲ..

ಇಲ್ಲಿತನಕ ಟೀಮ್ ಇಂಡಿಯಾಗಿದ್ದಿದ್ದು ಒಂದೇ ಚಿಂತೆ. ಅದು ಯಂಗ್​ಗನ್​​​ ಶುಭ್​​ಮನ್​​ ಗಿಲ್​ ಹಾಗೂ ಶ್ರೇಯಸ್ ಅಯ್ಯರ್​​ ಬ್ಯಾಡ್​ಫಾರ್ಮ್​. ಎಲ್ಲ ಪ್ಲೇಯರ್ಸ್​ ಸಾಲಿಡ್ ಟಚ್​​ ಮಧ್ಯೆ ಇವರ ಅಸ್ಥಿರ ಪ್ರದರ್ಶನ ಕ್ಯಾಪ್ಟನ್ ರೋಹಿತ್​​​​ಗೆ ಟೆನ್ಷನ್​​​ ತಂದೊಡ್ಡಿತ್ತು. ಆದ್ರೀಗ ಕ್ರೂಷಿಯಲ್​​​ ಪಂದ್ಯಕ್ಕೂ ಮುನ್ನವೇ ಇಬ್ಬರು ಬ್ಯಾಕ್ ವಿತ್ ಬ್ಯಾಂಗ್ ಮಾಡಿದ್ದಾರೆ.

ಲಂಕಾ ವಿರುದ್ಧ ಶ್ರೇಯಸ್​​​​-ಗಿಲ್ ರನ್ ಶಿಕಾರಿ

ವಾಂಖೆಡೆಯಲ್ಲಿ 302 ರನ್​​ಗಳ ಬಿಗ್​​ ವಿಕ್ಟರಿ ದಾಖಲಿಸ್ತು. ಈ ಬಿಗ್ ಮಾರ್ಜಿನ್​​ ಹಿಂದಿನ ರಿಯಲ್ ಹೀರೋಗಳೆಂದ್ರೆ ಗಿಲ್​ ಮತ್ತು ಶ್ರೇಯಸ್​​​​. ಹೌದು, ಲಂಕಾ ವಿರುದ್ಧ ಆರ್ಭಟಿಸಿದ ಯಂಗ್​ಸ್ಟರ್ಸ್​ ಅಂಟಿದ್ದ ಬ್ಯಾಡ್​​ಫಾರ್ಮ್​ ಹಣೆಪಟ್ಟಿಯನ್ನ ಕಳಚಿಟ್ರು.

ಲಂಕಾ ವಿರುದ್ಧ ಗಿಲ್​​​-ಶ್ರೇಯಸ್​​​

ಶ್ರೀಲಂಕಾ ವಿರುದ್ಧ ಆರಂಭಿಕನಾಗಿ ಆರ್ಭಟಿಸಿದ ಗಿಲ್​​ 92 ಎಸೆತಗಳಲ್ಲಿ 92 ರನ್​ ಗಳಿಸಿದ್ರು. 100ರ ಸ್ಟ್ರೈಕ್​ರೇಟ್​​ನಲ್ಲಿ 11 ಬೌಂಡ್ರಿ ಹಾಗೂ 2 ಸಿಕ್ಸರ್​ಗಳನ್ನ ಸಿಡಿಸಿದ್ರು. ಇನ್ನು ಅಬ್ಬರಿಸಿ ಬೊಬ್ಬಿರಿದ ಶ್ರೇಯಸ್​​ 146.42 ರ ಸ್ಟ್ರೈಕ್​ರೇಟ್​​ನಲ್ಲಿ 88 ರನ್​ ಬಾರಿಸಿದರು. ಇವರ ಇನ್ನಿಂಗ್ಸ್​​ನಲ್ಲಿ 3 ಬೌಂಡ್ರಿ ಹಾಗೂ 6 ಮನಮೋಹಕ ಸಿಕ್ಸರ್​​​ ಸೇರಿಕೊಂಡಿದ್ವು.

ಇನ್ಮುಂದೆ ಭಾರತವನ್ನ ಟಚ್​​​ ಮಾಡೋದೆ ಕಷ್ಟ..!

ಸದ್ಯ ಶುಭ್​​​ಮನ್ ಗಿಲ್​ ಹಾಗೂ ಶ್ರೇಯಸ್ ಅಯ್ಯರ್​ ಫಾರ್ಮ್​ ಕಂಡುಕೊಳ್ಳುವ ಮೂಲಕ ಎಲ್ಲ ಬ್ಯಾಟ್ಸ್​​ಮನ್​ಗಳು ಲಯಕ್ಕೆ ಮರಳಿದಂತಾಗಿದೆ. ರೋಹಿತ್​ ಶರ್ಮಾ, ಗಿಲ್​​, ಕಿಂಗ್ ಕೊಹ್ಲಿ, ಶ್ರೇಯಸ್​​​, ರಾಹುಲ್​​ ಹಾಗೂ ಸೂರ್ಯಕುಮಾರ್​​ ರನ್ ಭರಾಟೆ ನಡೆಸ್ತಿದ್ದು, ಇನ್ಮುಂದೆ ಟೀಮ್ ಇಂಡಿಯಾವನ್ನ ಕಟ್ಟಿಹಾಕೋದು ಕಠಿಣವೇ ಸೈ.

ರೋಹಿತ್ ಮತ್ತು ಕೋಚ್ ದ್ರಾವಿಡ್

ವಿಶ್ವಕಪ್​ನಲ್ಲಿ ಇಂಡಿಯನ್​​ ಬ್ಯಾಟ್ಸ್​​ಮನ್​ಗಳು

ಪ್ರಸಕ್ತ ವಿಶ್ವಕಪ್​​ನಲ್ಲಿ ವಿರಾಟ್ ಕೊಹ್ಲಿ 442 ರನ್​ ಹೊಡೆದ್ರೆ ಕ್ಯಾಪ್ಟನ್ ರೋಹಿತ್​ ಶರ್ಮಾ 402 ರನ್​ ಗಳಿಸಿದ್ದಾರೆ. ಇನ್ನು ಕನ್ನಡಿಗ ರಾಹುಲ್​ 237 ರನ್ ಬಾರಿಸಿದ್ರೆ ಶ್ರೇಯಸ್​ ಅಯ್ಯರ್​ 216 ರನ್​ ಹೊಡೆದಿದ್ದಾರೆ. ಗಿಲ್​​​ 196 ಹಾಗೂ ಸೂರ್ಯಕುಮಾರ್​ ಯಾದವ್​​ ಆಡಿದ ಮೂರೇ ಪಂದ್ಯಗಳಿಂದ 63 ರನ್​​ ಬಾರಿಸಿದ್ದಾರೆ.

ಏನೇ ಹೇಳಿ ಶ್ರೇಯಸ್ ಅಯ್ಯರ್​ ಹಾಗೂ ಶುಭ್​​ಮನ್​​​ ಗಿಲ್ ಫಾರ್ಮ್​ ಮರಳಿರೋದ್ರಿಂದ ಭಾರತಕ್ಕೆ ನೂರಾನೆಬಲ ಬಂದಂತಾಗಿದೆ. ಜೊತೆ ಉಳಿದ ಬ್ಯಾಟ್ಸ್​​ಮನ್​ಗಳು ಸಾಲಿಡ್​ ಟಚ್​​​ನಲ್ಲಿದ್ದಾರೆ. ಇನ್ನುಂದೆ ಭಾರತವನ್ನ ಕಟ್ಟಿಹಾಕೋದು ಎದುರಾಳಿಗೆ ಕಬ್ಬಿಣದ ಕಡಲೆಯಾಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಶ್ರೇಯಸ್​, ಶುಭ್​ಮನ್​ ಗಿಲ್​ ಅಬ್ಬರದ ಬ್ಯಾಟಿಂಗ್​.. ಟೆನ್ಷನ್​ನಿಂದ ಫ್ರೀ ಆದ್ರಾ ಕ್ಯಾಪ್ಟನ್ ರೋಹಿತ್, ದ್ರಾವಿಡ್?

https://newsfirstlive.com/wp-content/uploads/2023/11/ROHIT_SHARMA_GILL_IYER.jpg

Load More