/newsfirstlive-kannada/media/post_attachments/wp-content/uploads/2025/01/IND-vs-PAK-News.jpg)
ಲಾಹೋರ್: ಭ್ರಷ್ಟಾಚಾರ ಕೇಸ್ವೊಂದರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಹಾಗೂ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ 14 ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ. ಹಾಗೆಯೇ ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿ ಅವರಿಗೂ 7 ವರ್ಷ ಶಿಕ್ಷೆ ವಿಧಿಸಿದೆ.
ಜೈಲು ಶಿಕ್ಷೆ ಮಾತ್ರವಲ್ಲದೇ ಇಮ್ರಾನ್ ಖಾನ್‌ಗೆ 10 ಲಕ್ಷ ಹಾಗೂ ಪತ್ನಿ ಬುಶ್ರಾ ಬೀಬಿಗೆ 5 ಲಕ್ಷ ದಂಡ ವಿಧಿಸಲಾಗಿದೆ. ಒಂದು ವೇಳೆ ಈ ದಂಡ ಕಟ್ಟದಿದ್ರೆ ಇಮ್ರಾನ್ ಖಾನ್ ಅವರಿಗೆ 6 ತಿಂಗಳು, ಪತ್ನಿಗೆ 3 ತಿಂಗಳು ಜೈಲು ಶಿಕ್ಷೆ ವಿಸ್ತರಿಸಲಾಗುವುದು ಎಂದು ಪಾಕಿಸ್ತಾನದ ಕೋರ್ಟ್ ತಿಳಿಸಿದೆ.
ಏನಿದು ಆರೋಪ?
ಅಲ್-ಖಾದಿರ್ ಟ್ರಸ್ಟ್ ಅನ್ನೋ ಕೇಸ್ನಲ್ಲಿ ಇಮ್ರಾನ್ ಖಾನ್ ಮತ್ತವರ ಪತ್ನಿಯರ ವಿರುದ್ಧ ಪಾಕಿಸ್ತಾನದ ಎನ್‌ಐಬಿ ಪ್ರಕರಣ ದಾಖಲಿಸಿತ್ತು. ಈ ಕೇಸ್ನಲ್ಲಿ ಭ್ರಷ್ಟಾಚಾರ ವಿರೋಧಿ ನ್ಯಾಯಾಲಯದ ನ್ಯಾಯಾಧೀಶ ನಾಸಿರ್ ಜಾವೇದ್ ರಾಣಾ ಅವರು ಮಹತ್ವದ ತೀರ್ಪು ಕೊಟ್ಟಿದ್ದಾರೆ. ತೀರ್ಪು ಪ್ರಕಟ ಆಗುತ್ತಿದ್ದಂತೆಯೇ ಕೋರ್ಟ್ ಹಾಲ್‌ನಲ್ಲೇ ಇದ್ದ ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿಯನ್ನು ಪೊಲೀಸರು ವಶಕ್ಕೆ ಪಡೆದರು. ಇಮ್ರಾನ್ ಖಾನ್ ಅಧಿಕಾರ ದುರುಪಯೋಗದ ಆರೋಪ ಹಾಗೂ ಪತ್ನಿ ಕಾನೂನು ಬಾಹೀರ ಚಟುವಟಿಕೆಯಲ್ಲಿ ಭಾಗಿಯಾಗಿದ್ದು ಸಾಬೀತಾಗಿದೆ.
ಏನಿದು ಟ್ರಸ್ಟ್?
ಇಮ್ರಾನ್ ಖಾನ್ ಪ್ರಧಾನಿಯಾಗಿದ್ದಾಗ ಪತ್ನಿ ಬುಶ್ರಾ ರಾಜಕೀಯ ನಾಯಕರೊಂದಿಗೆ ಸೇರಿ ಅಲ್ ಖಾದಿರ್ ವಿಶ್ವವಿದ್ಯಾಲಯ ಯೋಜನಾ ಟ್ರಸ್ಟ್ ರಚಿಸಿದರು ಅನ್ನೋ ಆರೋಪ ಕೇಳಿ ಬಂದಿದೆ. ಪಂಜಾಬ್ ಪ್ರಾಂತ್ಯದಲ್ಲಿ ಗುಣ ಮಟ್ಟದ ಶಿಕ್ಷಣ ನೀಡುವುದು ಈ ಟ್ರಸ್ಟ್ ಗುರಿ ಆಗಿತ್ತು. ಆದರೆ, ವಿಶ್ವವಿದ್ಯಾಲಯಕ್ಕಾಗಿ ನೀಡಿದ್ದ ಭೂಮಿಯನ್ನು ಇವರು ಅಕ್ರಮವಾಗಿ ಬಳಸಿದ್ದಾರೆ ಎಂದು ದೂರಿನಲ್ಲಿ ದಾಖಲು ಮಾಡಲಾಗಿದೆ.
ಇದನ್ನೂ ಓದಿ:ಕನ್ನಡಿಗ KL ರಾಹುಲ್ಗೆ ಭಾರೀ ಅವಮಾನ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್; ಅಸಲಿಗೆ ಆಗಿದ್ದೇನು?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ