ವಿಶ್ವದ ಕಣ್ಣು ಡೊನಾಲ್ಡ್ ಟ್ರಂಪ್ ಮೇಲೆ.. ಅಧಿಕಾರ ಸ್ವೀಕರಿಸ್ತಿದ್ದಂತೆ ಮೊದಲ ಅಜೆಂಡಾ ಏನು ಗೊತ್ತಾ?

author-image
Ganesh
Updated On
ಪಾಕಿಸ್ತಾನಕ್ಕೆ ಟ್ರಂಪ್ ದೊಡ್ಡ ಆಘಾತ.. 41 ದೇಶದ ಜನರಿಗೆ ಅಮೆರಿಕಾ ಎಂಟ್ರಿ ಬ್ಯಾನ್; ಲಿಸ್ಟ್ ಇಲ್ಲಿದೆ!
Advertisment
  • ಅಮೆರಿಕ ಅಧ್ಯಕ್ಷರಾಗಿ ಇಂದು ಟ್ರಂಪ್ ಅಧಿಕಾರ ಸ್ವೀಕಾರ
  • ಟ್ರಂಪ್ ಮೇಲೆ ಜಗತ್ತುಗಳು ಇಟ್ಟ ನಿರೀಕ್ಷೆಗಳು ಏನೇನು?
  • ಎರಡನೇ ಬಾರಿಗೆ ಅಧ್ಯಕ್ಷರಾಗುತ್ತಿರುವ ಡೊನಾಲ್ಡ್ ಟ್ರಂಪ್

ಇಡೀ ವಿಶ್ವದ ಕಣ್ಣು ಇವತ್ತು ಡೊನಾಲ್ಡ್ ಟ್ರಂಪ್ ಮೇಲೆ ಗಮನಹರಿಸಿದೆ. ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಟ್ರಂಪ್, ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕಾರ ಮಾಡ್ತಿದ್ದಾರೆ.

47ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಟ್ರಂಪ್​​ಗೆ ಒಂದಷ್ಟು ಸವಾಲುಗಳು ಕೂಡ ಇವೆ. ಜೊತೆಗೆ ಅಧಿಕಾರವಾವಧಿಯಲ್ಲಿ ಏನೆಲ್ಲ ಸುಧಾರಣೆ ತರುತ್ತಾರೆ ಅನ್ನೋ ಕುತೂಹಲವೂ ಹೆಚ್ಚಾಗಿದೆ. ಇನ್ನು ಟ್ರಂಪ್ ಅವರ ಮುಖ್ಯ ಅಜೆಂಡಾಗಳು ಏನು ಅನ್ನೋದ್ರ ವಿವರ ಇಲ್ಲಿದೆ.

ಮುಖ್ಯ ಅಜೆಂಡಾಗಳು..!

ಅಕ್ರಮ ವಲಸಿಗರ ಗಡಿಪಾರು: ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಬಗ್ಗೆ ಟ್ರಂಪ್ ಚುನಾವಣೆಯಲ್ಲಿ ಘೋಷಿಸಿದ್ದರು. ಇದು ಅವರ ದೊಡ್ಡ ಅಜೆಂಡಾಗಳಲ್ಲಿ ಒಂದಾಗಿದೆ. ಮೊದಲ ವಾರದಲ್ಲಿಯೇ ಈ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಅಕ್ರಮ ವಲಸಿಗರನ್ನು ಗಡಿಪಾರು ಮಾಡಿ, ಅಮೆರಿಕವನ್ನು ಸುರಕ್ಷಿತವಾಗಿಡುತ್ತೇವೆ ಎಂದು ಭರವಸೆ ನೀಡಿದ್ದರು.

ಇದನ್ನೂ ಓದಿ: ಅಮೆರಿಕದಲ್ಲಿ ಟ್ರಂಪ್‌ ಹೋಟೆಲ್‌ ಮುಂದೆ ಟೆಸ್ಲಾ ಸೈಬರ್‌ ಟ್ರಕ್ ಸ್ಫೋಟ; ಅಸಲಿಗೆ ಆಗಿದ್ದೇನು?

publive-image

ಲಾಸ್ ಏಂಜಲೀಸ್​​ಗೆ ಬೆಂಕಿ..

ಇತ್ತೀಚೆಗೆ ಲಾಸ್ ಏಂಜಲೀಸ್​​ನಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಭಾರೀ ಬೆಂಕಿಯಿಂದ ಅಪಾರ ಪ್ರಮಾಣದ ಹಾನಿಯಾಗಿದೆ. ಹೀಗಾಗಿ ಲಾಸ್ ಏಂಜಲೀಸ್‌ಗೆ ಟ್ರಂಪ್ ತಕ್ಷಣ ಭೇಟಿ ನೀಡಬಹುದು.

ಚುನಾವಣೆ ಸಂದರ್ಭದಲ್ಲಿ ರಷ್ಯಾ-ಉಕ್ರೇನ್ ನಡುವಿನ ಯುದ್ಧ ನಿಲ್ಲಿಸುವುದಾಗಿ ಹೇಳಿದ್ದರು. ಈ ವಿಚಾರ ಅಷ್ಟು ಸುಲಭವಾಗಿಲ್ಲ. ಸದ್ಯದಲ್ಲೇ ಟ್ರಂಪ್-ಪುಟಿನ್ ಭೇಟಿ ಆಗಬಹುದು ಎಂದು ಹೇಳಲಾಗಿದೆ. ಇಬ್ಬರು ನಾಯಕರ ಭೇಟಿ ನಂರ ಸ್ಪಷ್ಟ ಮಾಹಿತಿ ಸಿಗಲಿದೆ.

ಇದನ್ನೂ ಓದಿ: ವಿಶ್ವದ ಅತಿ ದೊಡ್ಡ ಪದಗ್ರಹಣ.. ಡೊನಾಲ್ಡ್​ ಟ್ರಂಪ್ ಅಧಿಕಾರ ಸ್ವೀಕಾರ ಹೇಗೆ ನಡೆಯಲಿದೆ? ಯಾರೆಲ್ಲಾ ಬರಲಿದ್ದಾರೆ?

publive-image

ಟ್ರಂಪ್ ಅಧಿಕಾರಕ್ಕೆ ಬರುವ ಮುನ್ನವೇ ಇಸ್ರೇಲ್ ಮತ್ತು ಹಮಾಸ್ ಕದನಕ್ಕೆ ಫುಲ್​ಸ್ಟಾಪ್ ಬಿದ್ದಿದೆ. ಯುದ್ಧ ನಿಲ್ಲದಿದ್ದರೆ ಹಮಾಸ್ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಟ್ರಂಪ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಒಂದು ದಿನ ಬಾಕಿ ಇರುವಾಗಲೇ ಕದನ ವಿರಾಮ ಘೋಷಣೆಯಾಗಿದೆ.

ಜೊತೆಗೆ ಅಮೆರಿಕದ ಆರ್ಥಿಕತೆಯನ್ನು ಹಳಿಗೆ ತರುವ ಕೆಲಸ ಮಾಡಬೇಕಿದೆ. ಟ್ರಂಪ್ ಅಮೆರಿಕದಲ್ಲಿ ಉದ್ಯೋಗಾವಕಾಶ ಹೇಗೆ ಹೆಚ್ಚಿಸುತ್ತಾರೆ ಅನ್ನೋ ಕುತೂಹಲ ಕೂಡ ಹೆಚ್ಚಾಗಿದೆ. ಜೊತೆಗೆ ಆಫೀಸ್ ಪಾಲಿಸಿಯನ್ನು ಘೋಷಣೆ ಮಾಡಲಿದ್ದಾರೆ.

ಇದನ್ನೂ ಓದಿ: ಟ್ರಂಪ್ ಸಮಾರಂಭಕ್ಕೆ ಭಾರತದ ಪ್ರತಿನಿಧಿಯಾಗಿ ಹೋಗ್ತಿರೋದು ಯಾರು..? ಅಂಬಾನಿ ಫೋಟೋ ವೈರಲ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment