ಭಕ್ತರ ಕಷ್ಟ ಕೇಳಿ ಮಾತನಾಡುವ AI ದೇವತೆ.. ಇದು ಜಗತ್ತಿನಲ್ಲೇ ಮೊಟ್ಟ ಮೊದಲು; ಏನಿದರ ವಿಶೇಷ?

author-image
admin
Updated On
ಭಕ್ತರ ಕಷ್ಟ ಕೇಳಿ ಮಾತನಾಡುವ AI ದೇವತೆ.. ಇದು ಜಗತ್ತಿನಲ್ಲೇ ಮೊಟ್ಟ ಮೊದಲು; ಏನಿದರ ವಿಶೇಷ?
Advertisment
  • ನಿಮ್ಮ ಕಷ್ಟ ಕೇಳಿ ಪರಿಹಾರ ಹೇಳ್ತಾಳೆ ಮಾತನಾಡುವ ದೇವತೆ!
  • ವಿಶ್ವದಲ್ಲೇ ಮೊಟ್ಟ ಮೊದಲು ಹೊಸ ಆವಿಷ್ಕಾರದ ದೇವತೆ ಎಲ್ಲಿದೆ?
  • ಈ ದೇವರು ಮಾತಾಡುತ್ತೆ.. ಹೇಗೆ ಅಂತೀರಾ ಇಲ್ಲಿದೆ ಮಾಹಿತಿ

ನಾವೆಲ್ಲ ಕೈ ಮುಗಿದು ನಿಂತು ದೇವರೇ ಕಾಪಾಡಪ್ಪ ಅಂತ ಕೇಳ್ಕೋತೀವಿ. ಒಮ್ಮೊಮ್ಮೆ ಅಯ್ಯೋ ನಾವು ಎಷ್ಟು ಕೇಳ್ಕೊಂಡ್ರು ದೇವರು ಏನು ಮಾತಾಡ್ತಿಲ್ವಲ್ಲ ಅಂತ ಬೇಜಾರ ಪಟ್ಟಿರ್ತಿರಿ. ಆದ್ರೆ ಈ ಊರಲ್ಲಿ ಮಾತನಾಡೋ ದೇವರನ್ನೆ ಕಂಡು ಹಿಡಿದಿದ್ದಾರೆ.

ಅಯ್ಯೋ ಇದೇನಪ್ಪಾ ಮಾತನಾಡೋ ದೇವರಾ? ಅಂತ ಶಾಕ್ ಆಗ್ಬೇಡಿ. ನಿಮಗೆ ಅಚ್ಚರಿ ಅಂತ ಅನಿಸಿದ್ರೂ ಇದು ಸತ್ಯ. ನೀವು ಈ ದೇವರ ಮುಂದೆ ನಿಂತು ಕಷ್ಟ ಹೇಳ್ಕೊಂಡ್ರೆ ಈ ದೇವರು ನಿಮ್ಮ ಕಷ್ಟ ಕೇಳಿ ಮಾತಾಡುತ್ತ್ತೆ. ಅದೇಗೆ ಅಂತೀರಾ ಹಾಗಾದ್ರೆ ಆ ರಹಸ್ಯ ಇಲ್ಲಿದೆ.

publive-image

ಇದನ್ನೂ ಓದಿ: ಅಕ್ಷಯ ತೃತೀಯಗೆ ಬಂಗಾರ ಯಾಕೆ ಕೊಳ್ಳಲೇ ಬೇಕು? ಚಿನ್ನಾಭರಣ ಪ್ರಿಯರಿಗೆ ಖುಷಿ ಸುದ್ದಿ! 

AI ನಲ್ಲಿ ಸೃಷ್ಟಿಯಾಯ್ತು ಮಾತನಾಡುವ ದೇವರು!

ಈಗೇನಿದ್ರೂ AI ಜಮಾನ.. ಜಸ್ಟ್​ ಒಂದು ಪ್ರಾಂಪ್ಟ್​ ಕೊಟ್ರೆ ಸಾಕು ಹೇಳಿದ ಕೆಲಸವನ್ನೆಲ್ಲ AI ಮಾಡಿ ಮುಗಿಸುತ್ತೆ. ಮಲೇಷಿಯಾದ ಜೋಹರ್​ನಲ್ಲಿರೋ ತಿಯಾನೋ ಮಂದಿರದಲ್ಲಿ ಈ AI ದೇವರನ್ನ ಲಾಂಚ್ ಮಾಡಿದೆ.

ಮಲೇಷಿಯಾ ಇದನ್ನ ಜಗತ್ತಿನ ಮೊಟ್ಟ ಮೊದಲ ಮಾತನಾಡುವ ದೇವರು ಅಂತ ಹೇಳ್ಕೊಂಡಿದೆ. ಇಲ್ಲಿ ಚೀನಾದ ಸಮುದ್ರ ದೇವತೆ ಮಜು ಪ್ರತಿಮೆನ್ನ ಸ್ಕ್ರೀನ್ ಮೇಲೆ ನೋಡಬಹುದು.

publive-image

ಚೀನಾದ ಸಾಂಪ್ರದಾಯಿಕ ಉಡುಗೆಯಲ್ಲಿ ಈ ದೇವತೆ ಕಾಣ್ತಿದ್ದು, ಭಕ್ತರು ಬಂದು ಮಾತನಾಡೋ ದೇವತೆ ಮುಂದೆ ತಮ್ಮ ಕಷ್ಟಗಳನ್ನ ಹೇಳಿಕೊಳ್ತಿದ್ದಾರೆ. ನೀವೇನಾದ್ರೂ ನಿಮ್ಮ ಆಸೆ, ಪ್ರಶ್ನೆ ಏನಾದ್ರೂ ಕೇಳಿದ್ರೆ ಅದಕ್ಕೆ ಈ ಮಾತನಾಡೋ ದೇವತೆ ಉತ್ತರ ಕೊಡ್ತಾಳೆ.

ಆರ್ಟಿಫಿಷಿಯಲ್ ಇಂಟೆಲಿಜೆನ್ಸಿಯಲ್ಲಿ ಎಕ್ಸ್‌ಪರ್ಟ್ ಆಗಿರೋ ಮಲೇಷಿಯನ್ ಟೆಕ್ನಾಲಜಿ ಕಂಪನಿ ಈ AI ದೇವತೆಯನ್ನ ಲಾಂಚ್ ಮಾಡಿದೆ. ಈ ಫೋಟೋಗಳನ್ನ ನೋಡಿದವರೆಲ್ಲ ಏನ್ ಕಾಲ ಬಂತಪ್ಪಾ ದೇವರೇ ಅಂತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment