/newsfirstlive-kannada/media/post_attachments/wp-content/uploads/2024/05/Head-To-head.jpg)
ಪ್ರಸ್ತುತ ವೈದ್ಯಕೀಯ ಜಗತ್ತಿನಲ್ಲಿ ಹೃದಯ, ಕಣ್ಣು, ರಕ್ತ, ಚರ್ಮ, ಅಷ್ಟೇ ಏಕೆ ಮೆದುಳನ್ನು ಕೂಡ ಟ್ರಾನ್ಫರ್​ ಮಾಡಬಹುದಾದ ಸೌಲಭ್ಯಗಳಿಗೆ. ಈಗಾಗಲೇ ಅನೇಕರು ಈ ಕಸಿಯನ್ನು ಮಾಡಿಸಿಕೊಂಡು ಸಕ್ಸಸ್​ ಆದವರು ಇದ್ದಾರೆ. ಅಷ್ಟರ ಮಟ್ಟಿಗೆ ವೈದ್ಯಕೀಯ ಬೆಳವಣಿಗೆಯನ್ನು ಪ್ರಪಂಚದಲ್ಲಿ ಕಾಣಬಹುದಾಗಿದೆ. ಆದರೆ ಇಡೀ ತಲೆಯನ್ನೇ ಬೇರೊಬ್ಬ ವ್ಯಕ್ತಿಗೆ ಟ್ರಾನ್ಫರ್​ ಮಾಡಬಹುದಾದ ವಿಚಾರ ಗೊತ್ತಿದ್ಯಾ?. ಇಂತಹದೊಂದು ವೈದ್ಯಕೀಯ ಅಚ್ಚರಿಯ ಸಂಗತಿ ಬಗ್ಗೆ ಮಾಹಿತಿ ಇಲ್ಲಿದೆ.
ಕಾಲ ಬದಲಾಗಿದೆ. ರೋಬೋಟ್​ ಬಂದ ಮೇಲಂತೂ ಮನುಷ್ಯದ ಕೆಲಸಗಳು ಸುಲಭವಾಗಿ ಹೋಗಿದೆ. ಅದರಂತೆಯೇ ಅಮೆರಿಕಾ ಮೂಲದ ಸ್ಟಾರ್ಟಪ್​ವೊಂದು ಬ್ರೈನ್​ಬ್ರಿಡ್ಜ್​ ಎಂಬ ಸಾಹಸಕ್ಕೆ ಕೈ ಹಾಕಿದೆ. ಈಗಾಗಲೇ ಅದರ ಕುರಿತಾಗಿ AI ವಿಡಿಯೋ ಬಿಡುಗಡೆ ಮಾಡಿದೆ.
ಅಂದಹಾಗೆಯೇ ಇದು ನ್ಯೋರೋಸೈನ್​ ಮತ್ತು ಬಯೋಮೆಡಿಕಲ್​​ ಇಂಜಿನಿಯರಿಂಗ್​ ಸ್ಟಾರ್ಟಪ್​ ಆಗಿದೆ. ಇದು ವಿಶ್ವದಲ್ಲಿ ತಲೆಯನ್ನು ಟ್ರಾನ್ಸ್​ಫರ್​ ಮಾಡುವ ಬಗ್ಗೆ ಕೆಲಸ ಮಾಡುತ್ತಿದೆ. ವ್ಯಕ್ತಿಯಿಂದ ವ್ಯಕ್ತಿಗೆ ಇಡೀ ತಲೆಯನ್ನ ಟ್ರಾನ್ಸ್​ಫರ್​ ಮಾಡುವ ಬಗ್ಗೆ ಕೆಲಸ ಮಾಡುತ್ತಿದೆ.
ಬ್ರೈನ್​ ಬ್ರಿಡ್ಸ್​ ಎಂಬ ಪರಿಕಲ್ಪನೆಯು 4ನೇ ಹಂತದಲ್ಲಿರುವ ಕ್ಯಾನ್ಸರ್​ ರೋಗಿಗೆ, ನ್ಯೂರೊ ಡಿಜೆನೆರೆಟಿವ್ ಕಾಯಿಲೆಗಳಂತಹ ಗಂಭೀರ ಪರಿಸ್ಥಿತಿಯಲ್ಲಿ ಹೋರಾಡುವ ರೋಗಿಗಳಿಗೆ ಇಂದು ಭರವಸೆಯನ್ನು ನೀಡುತ್ತಿದೆ.
ಇದನ್ನೂ ಓದಿ: ADHD ಕಾಯಿಲೆಯಿಂದ ಬಳಲುತ್ತಿರುವ ಫಾಹದ್ ಫಾಸಿಲ್.. ಅಭಿಮಾನಿಗಳಿಗೆ ಶಾಕಿಂಗ್​ ಸುದ್ದಿ ಕೊಟ್ಟ ನಟ
ಮೆದುಳು ಹಾನಿಯಾದ ವ್ಯಕ್ತಿಗೆ ಮೃತ ದಾನಿಯ ತಲೆಯನ್ನೇ ಕಸಿ ಮಾಡುವ ಕಲ್ಪನೆ ಇದಾಗಿದೆ. ಪಾರ್ಶ್ವವಾಯು, ಅಲ್ಝೈಮರ್ಸ್​, ಪಾರ್ಕಿನ್ಸನ್​ನಂತಹ ಗುಣಪಡಿಸಲಾಗದ ರೋಗಗಳಿಂದ ಬಳುತ್ತಿರುವ ರೋಗಿಗಳಿಗೆ ಈ ಸ್ಟಾರ್ಟ್​ಅಪ್​‘ ಸಹಾಯ ಮಾಡಲು ಕೆಲಸ ಮಾಡುತ್ತಿದೆ.‘
? BrainBridge, the first head transplant system, uses robotics and AI for head and face transplants, offering hope to those with severe conditions like stage-4 cancer and neurodegenerative diseases… pic.twitter.com/7qBYtdlVOo
— Tansu Yegen (@TansuYegen)
🤖 BrainBridge, the first head transplant system, uses robotics and AI for head and face transplants, offering hope to those with severe conditions like stage-4 cancer and neurodegenerative diseases… pic.twitter.com/7qBYtdlVOo
— Tansu Yegen (@TansuYegen) May 21, 2024
">May 21, 2024
ಇದನ್ನೂ ಓದಿ: ಕಾಲುವೆಗೆ ಉರುಳಿ ಬಿದ್ದ ಕಾರು; 6 ಜನರು ಸಾವು, ಓರ್ವ ಮಹಿಳೆ ಗಂಭೀರ
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ಮಿಲಿಯನ್​ಗಟ್ಟಲೆ ಜನರು ಈ ವಿಡಿಯೋವನ್ನ ವೀಕ್ಷಣೆ ಮಾಡಿದ್ದಾರೆ. ಅನೇಕರು ಹೊಸ ಕಲ್ಪನೆಗೆ ಅಚ್ಚರಿಯನ್ನು ವ್ಯಕ್ತಪಡಿಸಿದಲ್ಲದೆ, ಕಾಮೆಂಟ್​ ಕೂಡ ಮಾಡುತ್ತಿದ್ದಾರೆ.
ಅನುಮಾನಕ್ಕೆ ಕಾರಣವಾದ ವಿಡಿಯೋ
ಇನ್ನು ಈ ದೃಶ್ಯ ಕಂಡವರು, ಪ್ರಸ್ತುತ ಜಗತ್ತಿನಲ್ಲಿ ವೈದ್ಯಕೀಯ ಲೋಕದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿರೋದು ನಿಜ. ಆದರೆ ಕಾಲ್ಪನಿಕ ಚಿತ್ರದಲ್ಲಿ ಕಂಡಷ್ಟು ಪ್ರಗತಿ ಸಾಧಿಸುವುದು ಅಷ್ಟು ಸುಲಭವಲ್ಲ ಎಂದು ಕೆಲವರು ಕಾಮೆಂಟ್​ ಮೂಲಕ ಹೇಳುತ್ತಿದ್ದಾರೆ. ಅದರಲ್ಲೊಬ್ಬ ವ್ಯಕ್ತಿ ಬೆನ್ನುಮೂಳೆ ಮತ್ತು ತಲೆಗೆ ಹೇಗೆ ಜೋಡಿಸುತ್ತಾರೆ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಮತ್ತೋರ್ವ 8 ವರ್ಷದಲ್ಲಿ ಈ ಪರಿಕಲ್ಪನೆ ಬರಲಿದೆ ಎಂದರೆ, ಮಗದೊಬ್ಬ ದೇವರ ಸೃಷ್ಟಿಯಂತೆ ಎಲ್ಲವನ್ನೂ ಮರು ಜೋಡಿಸಲಾಗಲ್ಲ ಎಂದು ಬರೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us