/newsfirstlive-kannada/media/post_attachments/wp-content/uploads/2025/07/ravi_shankar_GURUJI.jpg)
ಬೆಂಗಳೂರು: ಕ್ರೀಡೆಗಳಲ್ಲಿ ದಾಖಲೆ, ಚರಿತ್ರೆ ಸೃಷ್ಟಿಸಲು ನೈತಿಕ ಉಲ್ಲಂಘನೆಗಳು ನಡೆಯುತ್ತಿರುವುದು ಇತ್ತೀಚಿನ ದಿನಗಳಲ್ಲಿ ಗಂಭೀರವಾಗಿ ಚಿಂತಿಸುವಂತೆ ಮಾಡಿದೆ. ಇವು ಆಗಾಗ್ಗೆ ಪರಿಶೀಲನೆಗೆ ಒಳಪಡುತ್ತಿದ್ದು, ಅಭಿಮಾನಿಗಳ ನಂಬಿಕೆಯನ್ನು ಕುಗ್ಗಿಸುತ್ತಿವೆ. ಇದು ಕ್ರೀಡಾ ಮನೋಭಾವ, ಕ್ರೀಡೆಯಲ್ಲಿ ಶ್ರೇಷ್ಠತೆ ಮತ್ತು ನೈತಿಕತೆಯು ಆಟದಲ್ಲಿ ಹುರುಪನ್ನು ಹೇಗೆ ಹೆಚ್ಚಿಸುತ್ತದೆ?. ಇಡೀ ಪೀಳಿಗೆಯನ್ನು ಹೇಗೆ ಒಗ್ಗೂಡಿಸುತ್ತದೆ, ಪ್ರೇರೇಪಿಸುತ್ತದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ.
ವರ್ಲ್ಡ್ ಫೋರಮ್ ಫಾರ್ ಎಥಿಕ್ಸ್ ಇನ್ ಬಿಸಿನೆಸ್ ಆಯೋಜಿಸಿದ್ದ ಕ್ರೀಡೆಯಲ್ಲಿ ನೀತಿ ಮತ್ತು ನಾಯಕತ್ವದ ಕುರಿತಾದ 7ನೇ ವಿಶ್ವ ಶೃಂಗಸಭೆ ನಡೆಯಿತು. ಇದರಲ್ಲಿ ಕ್ರೀಡೆ, ರಾಜಕೀಯ, ವ್ಯವಹಾರ, ಶೈಕ್ಷಣಿಕ, ಎನ್‌ಜಿಒಗಳು ಹಾಗೂ ಚಿಂತಕರು ಭಾಗವಹಿಸಿದ್ದರು. ಸಭೆಯಲ್ಲಿ ಮೌಲ್ಯಗಳನ್ನು ರಾಜಿ ಮಾಡಿಕೊಂಡು ಯಶಸ್ಸನ್ನು ಕಾಪಾಡಿಕೊಳ್ಳಲು ನಿಜವಾಗಿಯೂ ಸಾಧ್ಯವಿದೆಯೇ?. ಹೆಚ್ಚಿನ ಒತ್ತಡವಿರುವ ಈ ಜಗತ್ತಿನಲ್ಲಿ ಸಮಗ್ರತೆ ಕಾಪಾಡಿಕೊಂಡು ಯಶಸ್ಸು ಸಾಧಿಸುವುದು ಹೇಗೆ ಎಂಬುದರ ಕುರಿತು ಚಿಂತನಶೀಲ ವಿಚಾರ-ವಿನಿಮಯ ನಡೆಸಲಾಯಿತು.
/newsfirstlive-kannada/media/post_attachments/wp-content/uploads/2025/07/olympics.jpg)
ಶಾಂತಿ ನಿರ್ಮಾಣ, ಲಿಂಗ ಸಮಾನತೆ, ಮಾನಸಿಕ ಆರೋಗ್ಯ, ಅತ್ಯುತ್ತಮ ಮಟ್ಟದ ಕಾರ್ಯಕ್ಷಮತೆ ಮತ್ತು ದೀರ್ಘಾಯುಷ್ಯಗಳಿಗಾಗಿ ಕ್ರೀಡೆಯನ್ನು ಒಂದು ಸಾಧನವನ್ನಾಗಿ ಹೇಗೆ ಬಳಸಬಹುದು?. ಕ್ರೀಡೆಯಲ್ಲಿ ಮಾತ್ರವಲ್ಲದೆ ಜೀವನ ಮತ್ತು ನಾಯಕತ್ವದಲ್ಲಿಯೂ ಉತ್ಕೃಷ್ಟತೆಯನ್ನು ಹೇಗೆ ಸಾಧಿಸುವುದು?. ಈ ಬಗ್ಗೆ ಶೃಂಗಸಭೆಯು ಗಹನವಾದ ಚರ್ಚೆ ನಡೆಸಿತು. ಆಟದ ಮೈದಾನದಲ್ಲಿ ಕಲಿಯುವಂತಹ ನ್ಯಾಯಯುತ ಆಟ, ತಂಡದ ಮನೋಭಾವ ಮತ್ತು ಸಹಿಷ್ಣುತೆಯಂತಹ ಪಾಠಗಳು, ರಾಜಕೀಯ ಮತ್ತು ವ್ಯವಹಾರದಲ್ಲಿ ನೈತಿಕ ನಾಯಕತ್ವವನ್ನು ಹೇಗೆ ರೂಪಿಸಬಹುದು ಎಂಬುದರ ಬಗ್ಗೆ ಸಭೆಯಲ್ಲಿ ವಿಶ್ಲೇಷಣೆ ಮಾಡಲಾಯಿತು.
ಕ್ರೀಡೆಯಲ್ಲಿ ಗೆಲ್ಲುತ್ತೀರಿ ಅಥವಾ ಇತರರು ಗೆಲ್ಲುವಂತೆ ಮಾಡುತ್ತೀರಿ. ನಾವು ಎರಡನ್ನೂ ಆಚರಿಸಲು ಕಲಿಯಬೇಕು. ಆಡುವ ಕ್ರಿಯೆಯೇ ಸಂತೋಷವನ್ನು ತರುತ್ತದೆ. ನಾವು ಇದನ್ನು ಅರ್ಥಮಾಡಿಕೊಂಡಾಗ, ನಾವು ಕ್ರೀಡೆಗಳಲ್ಲಿ ಸ್ವಾಭಾವಿಕವಾಗಿಯೇ ನೈತಿಕತೆಯಿಂದಿರುತ್ತೇವೆ. ಇಲ್ಲದಿದ್ದರೆ, ಕ್ರೀಡಾ ಮೈದಾನಗಳು ಹಿಂಸಾತ್ಮಕವಾಗಿ ಬದಲಾಗುವುದನ್ನು ನಾವು ಕಾಣುತ್ತೇವೆ ಎಂದು ಗುರುದೇವರು ಶ್ರೀ ಶ್ರೀ ರವಿ ಶಂಕರ್ ಗುರೂಜಿ ಅವರು ಹೇಳಿದ್ದಾರೆ.
ಕ್ರೀಡೆ ಇದ್ರೆ ಯುದ್ಧ, ಬೇಗುದಿ ಇರಲ್ಲ
ಒಂದು ಮಗುವು ನಡೆಯಲು ಪ್ರಾರಂಭಿಸುವ ಮೊದಲೇ ಆಟವಾಡಲು ಪ್ರಾರಂಭಿಸುತ್ತದೆ. ಕ್ರೀಡೆ ನಮಗೆ ಅಷ್ಟೊಂದು ಸ್ವಾಭಾವಿಕವಾಗಿರುವಾಗ, ಇಂದು ನಾವು ಎಲ್ಲಿ ಎಡವಿದ್ದೇವೆ?. ಕ್ರೀಡೆಯನ್ನ ಸ್ವೀಕರಿಸಿದರೆ, ಜಗತ್ತಿನಲ್ಲಿ ಯಾವುದೇ ಯುದ್ಧ, ಬೇಗುದಿ ಮತ್ತು ಅಪನಂಬಿಕೆ ಇರಲ್ಲ. ಕ್ರೀಡೆ ಮತ್ತು ಸಂಗೀತದ ಹೊರತಾಗಿಯೂ, ವಿಶ್ವದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಒಂಟಿತನ, ಖಿನ್ನತೆ ಮತ್ತು ಅತೃಪ್ತಿಯನ್ನು ಅನುಭವಿಸುತ್ತಿದ್ದಾರೆ ಎಂಬುದನ್ನ ಮನದಟ್ಟು ಮಾಡಿದರು.
ಇದನ್ನೂ ಓದಿ: ಅಣ್ಣನ 2 ಮಕ್ಕಳ ಜೀವ ತೆಗೆದ ತಮ್ಮ, ಇನ್ನೊಬ್ಬನ ಸ್ಥಿತಿ ಗಂಭೀರ.. ಮನೆಯಲ್ಲಿ ಯಾರು ಇಲ್ಲದಾಗ ಏನಾಯಿತು?
/newsfirstlive-kannada/media/post_attachments/wp-content/uploads/2025/07/olympics_1.jpg)
ಕಾರ್ಯಕ್ರಮದಲ್ಲಿ 7 ಖಂಡಗಳ ಅತ್ಯುನ್ನತ ಶಿಖರ ಏರಿದ ಪರ್ವತಾರೋಹಣ ಪ್ರತಿಭೆ ಕಾಮ್ಯ ಕಾರ್ತಿಕೇಯನ್ (17), ಒಲಿಂಪಿಕ್ ಚಿನ್ನದ ಪದಕ ವಿಜೇತ ಮತ್ತು 400 ಮೀಟರ್ ಹರ್ಡಲ್ಸ್‌ನಲ್ಲಿ ವಿಶ್ವ ದಾಖಲೆ ಹೊಂದಿದ ಕೆವಿನ್ ಯಂಗ್, ಉಕ್ರೇನ್‌ನ ಸಂಸತ್ ಸದಸ್ಯೆ ಗೌರವಾನ್ವಿತ ಸ್ವ್ಯಾಟೋಸ್ಲಾವ್ ಯುರಾಶ್, ಪ್ಯಾಲೆಸ್ಟೀನಿಯನ್ ಫುಟ್‌ಬಾಲ್ ಪ್ರವರ್ತಕ ಹನಿ ಥಾಲ್ಜೀಹ್, ಯುರೋ 96 ಚಾಂಪಿಯನ್ ಮತ್ತು ಟಿವಿ ವ್ಯಕ್ತಿತ್ವ ಥಾಮಸ್ ಹೆಲ್ಮರ್, ಮತ್ತು ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳಾ ಕುದುರೆ ಸವಾರರಾದ ದಿವ್ಯಕೃತಿ ಸಿಂಗ್ ಭಾಗಿಯಾಗಿದ್ದರು. https://ethicsinsports.org/program/
ಪ್ಯಾಲೆಸ್ಟೀನಿಯನ್ ಮಹಿಳಾ ಫುಟ್‌ಬಾಲ್ ತಂಡದ ಮೊದಲ ನಾಯಕಿ ಹನಿ ಥಾಲ್ಜೀಹ್ ಮಾತನಾಡಿ, ಅಡೆತಡೆ ಮುರಿಯುವಲ್ಲಿ ಮತ್ತು ಅಂಚಿನಲ್ಲಿರುವ ಸಮುದಾಯಗಳನ್ನು ಸಬಲೀಕರಣಗೊಳಿಸುವಲ್ಲಿ ಕ್ರೀಡೆಗಳು ವಹಿಸಬಹುದಾದ ಪಾತ್ರದ ಬಗ್ಗೆ ಗಮನ ಸೆಳೆದರು. ನಿಜವಾದ ಯಶಸ್ಸೆಂದರೆ ಬರೀ ಟ್ರೋಫಿಗಳನ್ನು ಎತ್ತುವುದಲ್ಲ, ಬದಲಾಗಿ ದಾರಿಯುದ್ದಕ್ಕೂ ನಾವು ಮೇಲೆತ್ತುವ ಜೀವನಗಳ ಬಗ್ಗೆ ಇರುವಂಥದ್ದು. ಏಕೆಂದರೆ ಕ್ರೀಡೆಯು ಪ್ರತ್ಯೇಕವಾಗಿ ಇರುವಂಥದ್ದಲ್ಲ. ಅದು ಸಮಾಜವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
/newsfirstlive-kannada/media/post_attachments/wp-content/uploads/2025/07/ravi_shankar_GURUJI_1.jpg)
ಪ್ರಶಸ್ತಿ ಪ್ರದಾನ ಮಾಡಲಾಯಿತು
ಕ್ರೀಡಾ ಮನೋಭಾವ ಮತ್ತು ನೈತಿಕತೆಯಲ್ಲಿ ಮಾನದಂಡ ನಿಗದಿಪಡಿಸುವ ಪ್ರದರ್ಶನಗಳನ್ನು ಎಥಿಕ್ಸ್ ಇನ್ ಸ್ಪೋರ್ಟ್ಸ್ ಪ್ರಶಸ್ತಿಗಳು ಗುರುತಿಸಿವೆ. ಅಂತರರಾಷ್ಟ್ರೀಯ ಫುಟ್ಬಾಲ್ ತಾರೆ ಝೆರ್ಡಾನ್ ಶಕಿರಿ ಅವರಿಗೆ, 'ಕ್ರೀಡೆಯ ಮೂಲಕ ಏಕೀಕರಣ, ನ್ಯಾಯಸಮ್ಮತತೆ ಮತ್ತು ಅಂತರಸಾಂಸ್ಕೃತಿಕ ಸಂವಾದಕ್ಕೆ ಅವರ ದೀರ್ಘಕಾಲದ ಬದ್ಧತೆ'ಗಾಗಿ ಅತ್ಯುತ್ತಮ ವ್ಯಕ್ತಿಗತ ಪ್ರಶಸ್ತಿ ನೀಡಲಾಯಿತು.
ಇನ್ನು ‘ಕ್ರೀಡೆಯಲ್ಲಿ ಮಾನಸಿಕ ಆರೋಗ್ಯಕ್ಕೆ ಅತ್ಯುತ್ತಮ ಕೊಡುಗೆ’ಯನ್ನು ಸ್ವಿಸ್ ರೋವರ್ ಆಗಿರುವ ಜೀನೈನ್ ಗ್ಮೆಲಿನ್ ಅವರಿಗೆ, ಮಾನಸಿಕ ಆರೋಗ್ಯ, ಕ್ರೀಡೆಯಲ್ಲಿ ನ್ಯಾಯಸಮ್ಮತತೆ ಮತ್ತು ಯುವ ಮಹಿಳಾ ಕ್ರೀಡಾಪಟುಗಳಿಗೆ ಬೆಂಬಲದ ಪ್ರತಿಪಾದನೆಗಾಗಿ ನೀಡಲಾಯಿತು.
ವಿಶ್ವಸಂಸ್ಥೆಯಲ್ಲಿ ವಿಶೇಷ ಸಲಹಾ ಸ್ಥಾನಮಾನ ಹೊಂದಿರುವ, ವ್ಯವಹಾರದಲ್ಲಿ ನೈತಿಕತೆಗಾಗಿ ವಿಶ್ವ ವೇದಿಕೆಯು (ವರ್ಲ್ಡ್ ಫೋರಮ್ ಫಾರ್ ಎಥಿಕ್ಸ್ ಇನ್ ಬಿಸಿನೆಸ್) ಎರಡು ದಶಕಗಳಿಗೂ ಹೆಚ್ಚು ಕಾಲ ನೈತಿಕ ವಕಾಲತ್ತುಗಳಲ್ಲಿ ಮುಂಚೂಣಿಯಲ್ಲಿದೆ. ಗುರುದೇವ್ ಶ್ರೀ ಶ್ರೀ ರವಿ ಶಂಕರ್ ರವರ ದೃಷ್ಟಿಕೋನದಡಿಯಲ್ಲಿ, ಮೌಲ್ಯಗಳು ಮತ್ತು ಕಾರ್ಯಕ್ಷಮತೆ ವಿರುದ್ಧವಾದುದಲ್ಲ. ಅವುಗಳು ಅವಿಭಾಜ್ಯ ಸಹಯೋಗಿಗಳು ಎಂಬ ಸಂದೇಶ ಪ್ರಚಾರ ಮಾಡಲು WFEB ಯು ಯುರೋಪಿಯನ್ ಪಾರ್ಲಿಮೆಂಟ್, FIFA, ಮ್ಯಾಕ್ಸ್ ಪ್ಲಾಂಕ್ ಸಂಸ್ಥೆ ಮತ್ತು ಜಿನೀವಾದಲ್ಲಿ UN ನಂತಹ ಜಾಗತಿಕ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us