newsfirstkannada.com

ಇಂದು ವಿಶ್ವ ಕಬಾಬ್​ ದಿನ! ತಿನ್ನೋ ಮುಂಚೆ ಇತಿಹಾಸ ಮತ್ತು ವಿಶೇಷತೆ ತಿಳಿದುಕೊಳ್ಳಿ.. ಪ್ಲೀಸ್​​

Share :

Published July 12, 2024 at 9:25am

Update July 12, 2024 at 9:28am

    ಕಬಾಬ್​​ ಭಾರತದ ಮೂಲದ್ದಲ್ಲ.. ಹಾಗಿದ್ರೆ ಎಲ್ಲಿಯದ್ದು ಗೊತ್ತಾ?

    ಡೋನರ್​ ಕಬಾಬ್​​ ಅತ್ಯಂತ ರುಚಿಕರವಾದ ಬೀದಿ ಬದಿಯ ಆಹಾರ

    ಬೆಳ್ಳುಳ್ಳಿ​, ಮಲೈ, ತಂದೂರಿ ಕಬಾಬ್​ ಸೇವಿಸುವ ಮುನ್ನ ಇತಿಹಾಸ ಮರೆಯಬೇಡಿ

ಕಬಾಬ್​ ಎಂದರೆ ಸಾಕು ಮಾಂಸಹಾರಿಗಳ ಬಾಯಲ್ಲಿ ನಿರೂರುತ್ತೆ. ಸದ್ಯ ಭಾರತದಲ್ಲೇ ನಾನಾ ತರಹದ ರೆಸಿಪಿಗಳಲ್ಲಿ ಕಬಾಬ್​ಗಳನ್ನು ತಯಾರಿಸಲಾಗುತ್ತಿದೆ. ಅದರೆ ಚಿಕನ್​ ಕಬಾಬ್​ಗೆ ಭಾರತದಲ್ಲಿ ಭಾರೀ ಡಿಮ್ಯಾಂಡ್​ ಇದೆ. ಚಿಕನ್​ ಬಳಸಿಕೊಂಡು ವಿವಿಧ ರೀತಿಯ ಕಬಾಬ್​ ತಯಾರಿಸುತ್ತಾರೆ. ಇತ್ತೀಚೆಗೆ ಬೆಂಗಳೂರಲ್ಲಂತೂ ಬೆಳ್ಳುಳ್ಳಿ ಕಬಾಬ್​ ಫೇಮಸ್​ ಆಗಿಬಿಟ್ಟಿದೆ.

ಬಹುತೇಕ ಜನರಿಗೆ ರುಚಿಕರವಾದ ಕಬಾಬ್​ ಸೇವಿಸೋದು ಗೊತ್ತು. ಇನ್ನು ಕೆಲವರಿಗೆ ರುಚಿಕರವಾದ ಕಬಾಬ್​​ ತಯಾರಿಸಲು ಗೊತ್ತು. ಆದರೆ ಈ ದಿನದ ವಿಶೇಷ ಬಹುತೇಕರಿಗೆ ತಿಳಿದಿಲ್ಲ. ಇಂದು ಜುಲೈ 12. ವಿಶ್ವ ಕಬಾಬ್​ ದಿನ ಎಂದು ಗೊತ್ತಿದ್ಯಾ?.

ಹೌದು. ಇಂದು ವಿಶ್ವ ಕಬಾಬ್​ ದಿನ. ಕಬಾಬ್​ ಸೇವಿಸುವ ಜನರಿಗೆ ಈ ಆಹಾರದ ವಿಶೇಷತೆ, ಇತಿಹಾಸ ಬಗ್ಗೆ ಗೊತ್ತಿಲ್ಲ. ಆದರೆ ಅದರ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. ಇನ್ಮುಂದೆ ಕಬಾಬ್​ ಸೇವಿಸುವ ಮುನ್ನ ಅದರ ಇತಿಹಾಸವನ್ನು ನೆನಪಿಸಿಕೊಂಡು ಸೇವಿಸಿ.

ಕಬಾಬ್​​ ಮಧ್ಯಪ್ರಾಚ್ಯದ ಆಹಾರ. ಟರ್ಕಿಯಲ್ಲಿ ಕಬಾಬ್ ಅನ್ನು ತಯಾರಿಸಲಾಯಿತು.​ ಮಾಂಸಗಳ ತುಂಡನ್ನು ಗ್ರಿಲ್​ ಮಾಡಿ ಬೇಯಿಸಿ ತಯಾರಿಸಲಾಗುತ್ತಿತ್ತು. ಆ ಬಳಿಕ ಕಬಾಬ್​ ಇರಾನ್​, ಭಾರತದಲ್ಲೂ ಭಾರೀ ಜನಪ್ರಿಯತೆ ಪಡೆಯಿತು. ಅಂದಹಾಗೆಯೇ ಕಬಾಬ್​ ಎಂದರೆ ಟರ್ಕಿ ಭಾಷೆಯಲ್ಲಿ ‘‘ಬೇಯಿಸಿದ ಮಾಂಸ’’ವೆಂದು ಅರ್ಥ.

19ನೇ ಶತಮಾನದ ಇತಿಹಾಸ

ಮೊದಲ ಹೇಳಿದಂತೆ ಕಬಾಬ್​ 19ನೇ ಶತಮಾನದಲ್ಲಿ (1800) ಮಧ್ಯಪ್ರಾಚ್ಯದಲ್ಲಿ ಕಾಣಿಸಿಕೊಂಡಿತು. ಟರ್ಕಿ ಮತ್ತು ಪರ್ಷಿಯಾ ಜನರು ಕಬಾಬ್​ ಅನ್ನು ಹೆಚ್ಚಾಗಿ ತಯಾರಿಸುತ್ತಿದ್ದರು.

ಅಂತರಾಷ್ಟ್ರೀಯ ಖಾದ್ಯವಾಯಿತು

1900ರ ವೇಳೆಗೆ ಕಬಾಬ್​​ ಎಂಬ ಆಹಾರ ಜಾಗತಿಕವಾಗಿ ಪಸರಿಸಿತು. ಬಳಿಕ ದೇಶ ದೇಶಕ್ಕೆ ಪಸರಿಸಿದಂತೆ ರೆಸಿಪಿಗಳು ಬದಲಾಗತೊಡಗಿದವು. ಗ್ರೀಕ್​​ ಸೌವ್ಲಾಕಿ, ಇಂಡಿಯನ್​ ಟಿಕ್ಕಾದಂತೆ ಬದಲಾದವು. 20ನೇ ಶತಮಾನದಲ್ಲಿ ಕಬಾಬ್​ ಅಂತರಾಷ್ಟ್ರೀಯ ಖಾದ್ಯವಾಯಿತು.

2015ರಲ್ಲಿ ಮೊದಲ ಕಬಾಬ್​ ದಿನವನ್ನು ಆಚರಿಸಲಾಯಿತು. ಅಂದಿನಿಂದ ಜುಲೈ 12ರಂದು ವಿಶ್ವ ಕಬಾಬ್​ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ರುಚಿಕರವಾದ ಕಬಾಬ್​ ಯಾವುದು?

ಪ್ರಪಂಚದಲ್ಲಿ ನಾನಾ ತರಹದ ಕಬಾಬ್​ಗಳಿವೆ. ಆದರೆ ​ಡೋನರ್​ ಕಬಾಬ್​​ ಅಂತ್ಯತ ರುಚಿಕರವಾದ ಬೀದಿ ಬದಿಯ ಆಹಾರವಾಗಿದೆ. ಇದು ಟರ್ಕಿಯಲ್ಲಿ ಹುಟ್ಟಿಕೊಂಡಿದೆ. ಡೋನರ್​ ಕಬಾಬ್​ ಗ್ರೀಕ್​ ಗೈರೋ ಅಥವಾ ಅರಬ್​ ಷವರ್ಮಾವನ್ನು ಹೋಲುವ ಟರ್ಕಿಶ್​​ ಖಾದ್ಯವಾಗಿದೆ.

ಭಾರತದಲ್ಲಿ ವಿವಿಧ ರೀತಿಯ ಕಬಾಬ್​!

ಭಾರತದಲ್ಲಿ ನಾನಾ ರೀತಿಯ ಆಹಾರಗಳಿವೆ. ಅದರಲ್ಲಿ ವಿದೇಶದಿಂದ ಬಂದ ಕಬಾಬ್​ಗಳು ಮತ್ತು ಅವುಗಳ ರೂಪಾಂತರ ರೆಸಿಪಿಗಳು ಇವೆ. ಅದರಲ್ಲೂ ಸಾಮಾನ್ಯ ಚಿಕನ್​ ಕಬಾಬ್​ ಒಂದೆಡೆಯಾದರೆ, ತಂದೂರಿ ಚಿಕನ್​ ಕಬಾಬ್​, ಸೀಖ್​ ಕಬಾಬ್, ಮಲೈ ಚಿಕನ್​ ಕಬಾಬ್​, ಚಾಪ್ಲಿ ಕಬಾಬ್​​, ಕಲ್ಮಿ ಕಬಾಬ್​, ಗಲೌಟಿ ಕಬಾಬ್​, ಶಮಿ, ಬೆಳ್ಳುಳ್ಳಿ ಕಬಾಬ್​, ಪನೀರ್​ ಟಿಕ್ಕಾ, ಬೀಟ್ರೂಟ್​​ ಕಬಾಬ್​ ಕೂಡ ಜನಪ್ರಿಯತೆ ಪಡೆದ ಖಾದ್ಯವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ವಿಶ್ವ ಕಬಾಬ್​ ದಿನ! ತಿನ್ನೋ ಮುಂಚೆ ಇತಿಹಾಸ ಮತ್ತು ವಿಶೇಷತೆ ತಿಳಿದುಕೊಳ್ಳಿ.. ಪ್ಲೀಸ್​​

https://newsfirstlive.com/wp-content/uploads/2024/07/kabab.jpg

Load More