ಇದು ವಿಶ್ವದ ಅತ್ಯಂತ ದುಬಾರಿ ಉಪ್ಪು. ಇದರ ಬೆಲೆ ಕೇಳಿದ್ರೆ ಒಂದು ಕ್ಷಣ ದಂಗಾಗಿ ಹೋಗ್ತೀರಿ!

author-image
Gopal Kulkarni
Updated On
ಇದು ವಿಶ್ವದ ಅತ್ಯಂತ ದುಬಾರಿ ಉಪ್ಪು. ಇದರ ಬೆಲೆ ಕೇಳಿದ್ರೆ ಒಂದು ಕ್ಷಣ ದಂಗಾಗಿ ಹೋಗ್ತೀರಿ!
Advertisment
  • ಇದು ವಿಶ್ವದಲ್ಲಿಯೇ ಅತ್ಯಂತ ದುಬಾರಿ ಬೆಲೆಗೆ ಬಿಕರಿಯಾಗುವ ಉಪ್ಪು
  • ಈ ಉಪ್ಪಿನ ಕಾಲು ಕೆಜಿಯ ಬೆಲೆ ಎಷ್ಟು ಅಂತ ಗೊತ್ತಾದ್ರೆ ಪಕ್ಕಾ ಶಾಕ್
  • ಇಷ್ಟೊಂದು ದುಬಾರಿ ಉಪ್ಪಿಗೂ ವಿಶ್ವದೆಲ್ಲೆಡೆ ಇದೆ ಭಾರೀ ಬೇಡಿಕೆ ಗೊತ್ತಾ?

ಉಪ್ಪು, ಅದಿಲ್ಲದೇ ಅಡುಗೆ ಎಂಬುದುನ್ನು ಊಹಿಸಲು ಕೂಡ ಆಗುವುದಿಲ್ಲ. ಉಪ್ಪಿಲ್ಲದಿದ್ದರೆ ಅಡುಗೆಯ ರುಚಿಯನ್ನು ಸವಿಯಲು ಸಾಧ್ಯವಿಲ್ಲ. ಅಡುಗೆ ರುಚಿಯಾಗಿ ಇರಬೇಕು ಅಂದ್ರೆ, ರುಚಿಗೆ ತಕ್ಕಷ್ಟು ಉಪ್ಪು ಇರಲೇಬೇಕು. ಉಪ್ಪು ಅತಿಯಾದರೂ ಕೂಡ ಸಮಸ್ಯೆಯೇ. ಹೀಗಾಗಿ ಹದ ತಪ್ಪದ ಅಳತೆಯಲ್ಲಿ ಉಪ್ಪನ್ನು ಅಡುಗೆಯಲ್ಲಿ ಉಪಯೋಗಿವಾಗಬೇಕು. ವಿಶ್ವದಲ್ಲಿ ಒಟ್ಟು 13 ಬಗೆಯ ಉಪ್ಪುಗಳು ನಮಗೆ ಕಾಣ ಸಿಗುತ್ತವೆ. ಆದ್ರೆ ವಿಶ್ವದಲ್ಲಿಯೇ ಅತಿಹೆಚ್ಚು ದುಬಾರಿ ಉಪ್ಪು ಯಾವುದು ಅಂತ ನಿಮಗೆ ಗೊತ್ತಾ?

ನಾವು 20 ರೂಪಾಯಿಯೋ ಇಲ್ಲ 30 ರೂಪಾಯಿಯೋ ಕೊಟ್ಟು ಹರಳುಪ್ಪು, ಸಣ್ಣುಪ್ಪು ತಂದು ಅಡುಗೆಗೆ ಉಪಯೋಗಿಸುತ್ತೇವೆ. ಆದ್ರೆ ಜಗತ್ತಿನಲ್ಲಿ ಅತಿ ದುಬಾರಿಯಾದ ಉಪ್ಪಿನ ಬೆಲೆ ಗೊತ್ತಾದರೆ ನೀವು ಹೌಹಾರಿ ಹೋಗುತ್ತೀರಿ ಯಾಕಂದ್ರೆ ಆ ಉಪ್ಪಿನ ಬೆಲೆ ಇರುವುದೇ ಅಷ್ಟು ದುಬಾರಿ.

ಇದನ್ನೂ ಓದಿ:ಅಂದು ಜೈ ಮಾರುತಿ.. ಇಂದು ಮಂಕಿ ಮಹಾತ್ಮೆ; ಒಂದು ಕೋತಿ ಮಾಡಿದ ಕಿತಾಪತಿಗೆ ಶ್ರೀಲಂಕಾ ಕಂಗಾಲಾಗಿ ಹೋಯ್ತು!

ಕೊರಿಯನ್ ರಾಷ್ಟ್ರಗಳ ಬ್ಯಾಂಬೂ ಉಪ್ಪನ್ನು ಜಗತ್ತಿನ ಅತ್ಯಂತ ದುಬಾರಿ ಉಪ್ಪು ಎಂದು ಗುರುತಿಸಲಾಗಿದೆ. ಇದರ ಬೆಲೆ 100 ಗ್ರಾಂಗೆನೇ ಅದೆಷ್ಟೋ ಸಾವಿರ ರೂಪಾಯಿ ಆಗುತ್ತದೆ. ಈ ಒಂದು ಉಪ್ಪನ್ನು ನೀವು ಕಾಲು ಕೆಜಿ ಅಂದ್ರೆ 250 ಗ್ರಾಂ ಖರೀದಿಸಬೇಕು ಅಂದ್ರೆ ಸುಮಾರು 100 ಡಾಲರ್ ನೀಡಬೇಕು ಅಂದ್ರೆ ಭಾರತೀಯ ರೂಪಾಯಿಯಲ್ಲಿ ಸುಮಾರು 8500 ರೂಪಾಯಿ ಎಂದು ಹೇಳಲಾಗುತ್ತದೆ. ಈ ಉಪ್ಪಿಗೆ ಚಿನ್ನದ ಬೆಲೆ ಇದೆ ಎಂದು ಹೇಳಲಾಗುತ್ತದೆ.

ಸಮುದ್ರದಲ್ಲಿ ಸಿಗುವ ಉಪ್ಪನ್ನು ಬಿದಿರಿನ ಟೊಳ್ಳಾದ ಭಾಗದಲ್ಲಿ ತುಂಬಿ 9 ಬಾರಿ ತೀವ್ರ ತಾಪಮಾನದಲ್ಲಿ ಅದನ್ನು ರೋಸ್ಟ್ ಮಾಡಿ ತಯಾರಿಸಲಾಗುತ್ತದೆ. ಹೀಗೆ ಬಟ್ಟಿ ಇಳಿಸಿ ತಯಾರಿಸಿದ ಉಪ್ಪಿನಲ್ಲಿ ಬಹಳಷ್ಟು ಪೋಷಕಾಂಶಗಳು ಹಾಗೂ ಮಿನರಲ್ಸ್​ಗಳು ಇರುತ್ತವೆ. ಹೀಗಾಗಿ ಈ ಉಪ್ಪನ್ನು ಉಳಿದ ಉಪ್ಪಿಗಿಂತ ವಿಶೇಷ ಎಂದು ಬಣ್ಣಿಸಲಾಗುತ್ತದೆ.

publive-image

ಈ ಉಪ್ಪಿನಲ್ಲಿ ಹೇರಳವಾಗಿ ಆ್ಯಂಟಿಆಕ್ಸಿಡೆಂಟ್ ಅಂಶಗಳು ನಮಗೆ ಸಿಗುತ್ತವೆ. ಇದು ಪಚನಕ್ರಿಯೆಗೆ, ಡಿಟಾಕ್ಸಿನ್​ ಹಾಗೂ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಅತ್ಯತ್ತಮ ಪಾತ್ರವನ್ನು ನಿರ್ವಹಿಸುತ್ತದೆ ಎಂದು ಹೇಳಲಾಗಿದೆ. ಕೊರಿಯಾದಲ್ಲಿ ಇದನ್ನು ಔಷಧೀಯ ಗುಣವಿರುವ ಉಪ್ಪು ಎಂದೇ ಪರಿಗಣಿಸಲಾಗುತ್ತದೆ. ಮತ್ತು ಅನೇಕ ಆಯುರ್ವೇದ ಔಷಧಿಗಳಲ್ಲಿ ಈ ಉಪ್ಪನ್ನು ಉಪಯೋಗಿಸಲಾಗುತ್ತದೆ.

ಇದನ್ನೂ ಓದಿ: ಈ 10 ದೇಶಗಳಲ್ಲಿ ಒಂದೇ ಒಂದು ನದಿ ಕೂಡ ಇಲ್ಲ.. ಜೀವಜಲ ಕಾಣದ ಆ ನೆಲಗಳು ಯಾವುವು?

ಈ ಉಪ್ಪು ಇಷ್ಟೊಂದು ದುಬಾರಿಯಾಗಿದ್ದರೂ ಕೂಡ ವಿಶ್ವಪ್ರಸಿದ್ಧಿಯನ್ನು ಪಡೆದಿದೆ. ಇದನ್ನು ಸುಮಾರು ಜನರು ಸಾವಿರಾರೂ ರೂಪಾಯಿ ನೀಡಿ ಖರೀದಿಸುತ್ತಾರೆ. ಅಷ್ಟೊಂದು ಪ್ರಸಿದ್ಧಿಯನ್ನು ಈ ಉಪ್ಪು ಪಡೆದಿದೆ. ಕೇವಲ ಕೊರಿಯಾ ಮಾತ್ರವಲ್ಲ ವಿಶ್ವದ ಹಲವು ದೇಶಗಳಲ್ಲಿ ಈ ಉಪ್ಪನ್ನು ಖರೀದಿಸಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment