newsfirstkannada.com

ವಿಶ್ವದ ಶ್ರೀಮಂತ ಕುಟುಂಬ! 4000 ಕೋಟಿ ಮೌಲ್ಯದ ಅರಮನೆ, 700 ಕಾರುಗಳು, 8 ವಿಮಾನಗಳು..!

Share :

Published January 27, 2024 at 2:04pm

Update January 27, 2024 at 2:27pm

    ಈ ಕುಟುಂಬದ ಬಳಿ ಇನ್ನೂ ಏನೇನು ಇದೆ ಗೊತ್ತಾ..?

    ವಿಶ್ವದ ಶ್ರೀಮಂತ ಕುಟುಂಬದ ಐಷಾರಾಮಿ ಬದುಕು

    ದೇಶ ಮಾತ್ರವಲ್ಲ ವಿದೇಶಗಳಲ್ಲೂ ಆಸ್ತಿ, ಪಾಸ್ತಿ ಇದೆ

2023ರಲ್ಲಿನ ವಿಶ್ವದ ಶ್ರೀಮಂತ ಕುಟುಂಬಗಳ ಪಟ್ಟಿ ರಿಲೀಸ್ ಆಗಿದೆ. UAE ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಕುಟುಂಬ ಶ್ರೀಮಂತ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಇವರ ಬಳಿ ಏನೇನಿದೆ..?

700 ಐಷಾರಾಮಿ ಕಾರುಗಳು, 8 ಖಾಸಗಿ ಜೆಟ್​ಗಳು ಸೇರಿ ಒಟ್ಟು 4 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಮನೆಯನ್ನು ಈ ಕುಟುಂಬ ಹೊಂದಿದೆ. ಶೇಖ್ ಮೊಹಮ್ಮದ್ ಅಭುದಾಬಿಯ 17ನೇ ಆಡಳಿತಗಾರ. ಬ್ಲೂಮ್ ಬರ್ಗ್​ ಮಾಡಿರುವ ವರದಿ ಪ್ರಕಾರ, ಈ ರಾಜ ಮನೆತನದ ಒಟ್ಟು ಸಂಪತ್ತು 305 ಶತಕೋಟಿ ಡಾಲರ್​​ಗಿಂತ ಹೆಚ್ಚು (25 ಲಕ್ಷ ಕೋಟಿ ರೂಪಾಯಿ) ಇದೆ. ನಹ್ಯಾನ್ ಅವರು ಫುಟ್ಬಾಲ್ ಕ್ಲಬ್ ಮತ್ತು ಆಟೋ ಮೊಬೈಲ್ ಕಂಪನಿಗಳಲ್ಲಿ ಪಾಲುದಾರರಾಗಿದ್ದಾರೆ.

4000 ಕೋಟಿ ಮೌಲ್ಯದ ಮನೆ

ಈ ರಾಯಲ್ ಫ್ಯಾಮಿಲಿಯು 4078 ಕೋಟಿ ಮೌಲ್ಯದ ಐಷಾರಾಮಿ ಅರಮನೆಯನ್ನು ಹೊಂದಿದೆ. ಅದರ ಮುಖ್ಯಸ್ಥರು ಎಂಬಿಝೆಡ್​ (ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್). ಇವರು 18 ಸಹೋದರರು ಮತ್ತು 11 ಸಹೋದರಿಯರನ್ನು ಹೊಂದಿದ್ದಾರೆ. ಯುಎಇ ಹೊರತುಪಡಿಸಿ ಈ ಕುಟುಂಬವು ಲಂಡನ್ ಮತ್ತು ಪ್ಯಾರಿಸ್​ನಲ್ಲಿ ಆಸ್ತಿಯನ್ನು ಹೊಂದಿದೆ.

700 ಕಾರುಗಳ ಸಂಗ್ರಹ

ಈ ಕುಟುಂಬ ಒಟ್ಟು 700 ಕಾರುಗಳನ್ನು ಹೊಂದಿದೆ. ಅವರು ಕೂಡ ಕಾಂಜಾಪೀಂಜಿ ಕಾರುಗಳಲ್ಲ. ಎಲ್ಲವೂ ಕೂಡ ಐಷಾರಾಮಿ ಕಾರುಗಳಾಗಿವೆ. ವಿಶ್ವದ ತೈಲ ನಿಕ್ಷೇಪಗಳಲ್ಲಿ ಪ್ರತಿಶತ 6ರಷ್ಟು ಪಾಲನ್ನು ಇವರ ಕುಟುಂಬ ಪಡೆಯುತ್ತಿದೆ. ಮಾತ್ರವ ಕೆಲವು ದೊಡ್ಡ ದೊಡ್ಡ ಕಂಪನಿಗಳಲ್ಲೂ ಭಾಗವಹಿಸಿದ್ದಾರೆ. ಇವರು ಮ್ಯಾಂಚೆಸ್ಟರ್​ ಸಿಟಿ ಫುಟ್ಬಾಲ್ ಕ್ಲಬ್ ಹೊಂದಿದ್ದಾರೆ. ಇದನ್ನು ಅಬುಧಾಬಿ ಯುನೈಟೆಡ್ ಗ್ರೂಪ್ 2008ರಲ್ಲಿ 2122 ಕೋಟಿಗೆ ಖರೀದಿ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಶ್ವದ ಶ್ರೀಮಂತ ಕುಟುಂಬ! 4000 ಕೋಟಿ ಮೌಲ್ಯದ ಅರಮನೆ, 700 ಕಾರುಗಳು, 8 ವಿಮಾನಗಳು..!

https://newsfirstlive.com/wp-content/uploads/2024/01/RICHEST-FAMILY.jpg

Load More