newsfirstkannada.com

ವಿಶ್ವದ ಅತ್ಯಂತ ಶ್ರೀಮಂತ ಕುಟುಂಬ ಇದು! ಬೆರಗು ಗೊಳಿಸ್ತಿದೆ ಇವರ ಅದ್ಧೂರಿ ಜೀವನ..!

Share :

Published January 20, 2024 at 6:16am

    305 ಶತಕೋಟಿ ಮೌಲ್ಯದ ಆಸ್ತಿ ಹೊಂದಿರುವ ಎಮಿರೇಟ್​​ ಪ್ಯಾಮಿಲಿ

    ಸುಮಾರು ₹176 ಮಿಲಿಯನ್ ಡಾಲರ್​​ ಮೌಲ್ಯದ ಖಾಸಗಿ ವಿಮಾನ

    ಒಂದಲ್ಲಾ ಎರಡಲ್ಲಾ ಬರೋಬ್ಬರಿ ₹4,078 ಕೋಟಿ ಮೌಲ್ಯದ ಅರಮನೆ

ನಮ್ಮ ದೇಶದಲ್ಲಿ ಅತಿ ಶ್ರೀಮಂತ ವ್ಯಕ್ತಿ ಅಥವಾ ಕುಟುಂಬ ಅಂತ ಕೇಳಿದರೆ ನಮ್ಮ ಬಾಯಲ್ಲಿ ಮೊದಲು ಬರೋದು ಅಂಬಾನಿ ಅಥವಾ ಅದಾನಿ ಹೆಸರು. ಆದ್ರೆ ವಿಶ್ವದ ಶ್ರೀಮಂತ ಕುಟುಂಬದ ಪಟ್ಟಿ ತೆಗೆದು ನೋಡಿದರೆ ಮೊದಲು ಸಿಗೋದೆ ದುಬೈನ ರಾಜಮನೆತನ. ವಿಶ್ವದ ಅತ್ಯಂತ ಶ್ರೀಮಂತ ಕುಟುಂಬವಾಗಿರುವ ಈ ಕುಟುಂಬ, ಏನೆಲ್ಲಾ ಐಶಾರಾಮಿ ವಸ್ತುಗಳನ್ನ ಹೊಂದಿದೆ ಅನ್ನೋದನ್ನ ನೋಡಿದರೆ ನಿಬ್ಬೆರಗಾಗುತ್ತೀರಾ.

ಹೌದು, ಪ್ರಪಂಚದ ಅತ್ಯಂತ ಶ್ರೀಮಂತರ ಹೆಸರನ್ನು ನೀವು ಅನೇಕ ಬಾರಿ ಕೇಳಿರ್ತೀರಿ. ಇತ್ತೀಚಿನ ದಿನಗಳಲ್ಲಿ ವಿಶ್ವದ ಶ್ರೀಮಂತ ವ್ಯಕ್ತಿ ಯಾರು ಅಂದ್ರೆ ಮೊದಲ ಹೆಸರು ಬರೋದೆ ಎಲಾನ್​ ಮಸ್ಕ್​​, ಆದ್ರೆ ದುಬೈನ ಈ ಕುಟುಂಬ ವಿಶ್ವದ ಶ್ರೀಮಂತ ಕುಟುಂಬವೊಂದರ ಅದ್ಧೂರಿತನ ನೋಡಿದ್ರೆ, ವಿಶ್ವದ ಎಲ್ಲಾ ಸಂಪತ್ತಿನ ಸರದಾರರನ್ನೇ ಮೀರಿಸುವಂತಿದೆ. ವಿಶ್ವದ ಅತ್ಯಂತ ಶ್ರೀಮಂತ ಕುಟುಂಬ ಅಂದ್ರೆ ಅದು ದುಬೈನ ಅಲ್​​ ನಹ್ಯಾನ್​​​ ಕುಟುಂಬ. ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಈ ಕುಟುಂಬದ ಮುಖ್ಯಸ್ಥರಾಗಿದ್ದು, ಸುಮಾರು 305 ಶತಕೋಟಿ ಮೌಲ್ಯದ ಆಸ್ತಿಯನ್ನ ಹೊಂದಿದ್ದಾರೆ ಎಂದು ಅಂದಾಜಿಸಲಾಗಿದೆ. ಕೆಲವು ವರ್ಷಗಳ ಹಿಂದಷ್ಟೇ ಈ ಕುಟುಂಬ ತನ್ನ ಆಸ್ತಿ ವಿವರವನ್ನ ಮೊದಲ ಬಾರಿಗೆ ಹಂಚಿಕೊಂಡಿದ್ದು, ಅಂದಿನಿಂದಲೂ ವಿಶ್ವದ ಶ್ರೀಮಂತ ಕುಟುಂಬದ ಪಟ್ಟಿಯಲ್ಲಿ ಮೊದಲ ಸ್ಥಾನವನ್ನ ಭದ್ರ ಪಡಿಸಿಕೊಂಡಿದೆ.

56 ಮಂದಿಯನ್ನ ಹೊಂದಿರುವ ರಾಜಮನೆತನ!
ತೈಲ ನಿಕ್ಷೇಪಗಳೇ ರಾಜಮನೆತನದ ಮೂಲ ಆದಾಯ

ಎಮಿರೇಟ್‌ ಫ್ಯಾಮಿಲಿ ಎಂದು ಕರೆಸಿಕೊಳ್ಳುವ ಈ ರಾಜಮನೆತನವು ಸುಮಾರು 56 ಮಂದಿ ಸದಸ್ಯರನ್ನು ಒಳಗೊಂಡಿದೆ. ಕುಟುಂಬದ ಮುಖ್ಯಸ್ಥರಾಗಿರುವ ಅಲ್​​ ನಹ್ಯಾನ್​ ಅವರಿಗೆ ಸುಮಾರು 18 ಸಹೋದರರು, 11 ಸಹೋದರಿಯರು ಸೇರಿದಂತೆ ಒಂಬತ್ತು ಮಕ್ಕಳು, 18 ಮೊಮ್ಮಕ್ಕಳನ್ನ ಹೊಂದಿದ್ದಾರೆ. ತೈಲ ನಿಕ್ಷೇಪಗಳೇ ಈ ಕುಟುಂಬದ ಮೂಲ ಆದಾಯವಾಗಿದ್ದು, ವಿಶ್ವದ ಶೇಕಡ 6ರಷ್ಟು ತೈಲ ನಿಕ್ಷೇಪ ಇವರದ್ದೇ ಒಡೆತನದಲ್ಲಿವೆ.

ಶ್ರೀಮಂತ ಕುಟುಂಬದಲ್ಲಿ ಏನೆಲ್ಲ ಇದೆ ಗೊತ್ತಾ?

ವಿಶ್ವದ ಅತ್ಯಂತ ಶ್ರೀಮಂತ ಕುಟುಂಬವು ಬರೋಬ್ಬರಿ 4.078 ಕೋಟಿ ಮೌಲ್ಯದ ಭವ್ಯ ಅರಮನೆಯನ್ನ ಹೊಂದಿದ್ದು. ಸುಮಾರು 700 ಐಶಾರಾಮಿ ಕಾರುಗಳು ಸೇತರಿದಂತೆ 8 ಖಾಸಗಿ ಜೆಟ್​​ಜಗಳನ್ನ ಹೊಂದಿದೆ. ಅಲ್ಲದೇ 176 ಮಿಲಿಯನ್​ ಡಾಲರ್​ ಮೌಲ್ಯದ ಬೋಯಿಂಗ್​​ ವಿಮಾನವನ್ನ ಹೊಂದಿದ್ದಾರೆ. ಜೊತೆಗೆ ಕ್ರೀಡೆಯಲ್ಲೂ ಆಸಕ್ತಿಯನ್ನ ಹೊಂದಿದ್ದು, ಪ್ರಸಿದ್ಧ ಪುಟ್​ಬಾಲ್​​ ಕ್ಲಬ್​ ಆಗಿರುವ ಮ್ಯಾಂಚೆಸ್ಟರ್​​​​ ಸಿಟಿ ಕ್ಲಬ್​​​ನ ಮಾಲೀಕತ್ವವನ್ನ ಹೊಂದಿದ್ದಾರೆ.

ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್​​ ಮಸ್ಕ್​​​​ ಒಡೆತನದ ಸ್ಪೇಸ್​​​​ಎಕ್ಸ್​​​ನಲ್ಲೂ ಹೂಡಿಕೆ ಮಾಡಿದ್ದು, ಜೊತೆಗೆ ಸೌಂದರ್ಯ ವರ್ಧಕಗಳು ಮತ್ತು ಫ್ಯಾಷನ್​​​ ಜಗತ್ತಿನಲ್ಲಿ ಪಾಲು ಹೊಂದಿದ್ದು, ಪ್ಯಾರಿಸ್​​​, ಲಂಡನ್​​ ಸೇರಿದಂತೆ ವಿಶ್ವದ ಹಲವಡೆ ಆಸ್ತಿಯನ್ನ ಖರೀದಿಸಿದ್ದಾರೆ.
ಒಟ್ಟಾರೆ, ವಿಶ್ವದ ಅತಿ ಅಗರ್ಭ ಶ್ರೀಮಂತ ಕುಟುಂಬವಾಗಿರುವ ದುಬೈನ ರಾಜಮನೆತನ, ಬರೀ ತಾವೊಂದೇ ಶ್ರೀಮಂತರಾಗದೇ ಇಡೀ ದುಬೈ ಅನ್ನು ಸಹ ಶ್ರೀಮಂತಗೊಳಿಸಿದ್ದಾರೆ. ಮತ್ತು ಸಾವಿರಾರು ಉದ್ಯೋಗ್ಯಗಳನ್ನು ಸೃಷ್ಟಿಸಿದ್ದಾರೆ. ಶ್ರೀಮಂತಿಕೆಯ ಜೊತೆಗೆ ಈ ಕುಟುಂಬದ ಅದ್ದೂರಿ ಜೀವನ ಜಗತ್ತನ್ನ ನಿಬ್ಬೆರಗಾಗಿಸುವಂತಿದೆ ಅನ್ನೋದು ಸುಳ್ಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಶ್ವದ ಅತ್ಯಂತ ಶ್ರೀಮಂತ ಕುಟುಂಬ ಇದು! ಬೆರಗು ಗೊಳಿಸ್ತಿದೆ ಇವರ ಅದ್ಧೂರಿ ಜೀವನ..!

https://newsfirstlive.com/wp-content/uploads/2024/01/Al-Nahyan-FAMILY.jpg

Load More