/newsfirstlive-kannada/media/post_attachments/wp-content/uploads/2025/04/TRUMP.jpg)
ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹೂಡಿದ ಸುಂಕಾಸ್ತ್ರ ತಿರುಗುಬಾಣವಾಗೋ ಸೂಚನೆ ನೀಡಿದೆ. ಟ್ರಂಪ್​ ಸುಂಕ ಸಮರದಿಂದ ಜಗತ್ತಿನ ಅಗ್ರ 500 ಶ್ರೀಮಂತರ ಜೇಬಿಗೆ ಕತ್ತರಿ ಬಿದ್ದಿದೆ. ಟ್ರಂಪ್ ನೂತನ ಸುಂಕ ಸಮರ ಘೋಷಿಸುತ್ತಿದ್ದಂತೆ ಜಗತ್ತಿನಾದ್ಯಂತ ದಶಕದಲ್ಲೇ ಅತೀ ದೊಡ್ಡ ಮಟ್ಟದಲ್ಲಿ ಷೇರು ಮಾರುಕಟ್ಟೆ ಚಿತಲ್​ ಪತಲ್​ ಆಗಿದೆ.
ವಿಶ್ವದ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್ ಇತ್ತೀಚೆಗೆ ಸುಂಕ ಸಮರ ಸಾರಿದ್ರು. ಮೊನ್ನೆ ಏಪ್ರಿಲ್ 2ರಂದು ಟ್ರಂಪ್ ತಮ್ಮ ಸರ್ಕಾರದ ಸುಂಕ ನೀತಿಯನ್ನು ಘೋಷಿಸಿದ್ರು.. ಯುಎಸ್ ಲಿಬರೇಷನ್ ಡೇ ಅಂಗವಾಗಿ ಅಮೆರಿಕದೊಂದಿಗೆ ವ್ಯವಹರಿಸುವ ದೇಶಗಳ ಮೇಲೆ ಟ್ರಂಪ್ ಹೆಚ್ಚುವರಿ ಸುಂಕ ಹೇರಿಯೇಬಿಟ್ರು. ಟ್ರಂಪ್ ಸುಂಕ ಸಮರ ಘೋಷಿಸುತ್ತಿದ್ದಂತೆ ಜಗತ್ತಿನಾದ್ಯಂತ ದಶಕದಲ್ಲೇ ಅತೀ ದೊಡ್ಡ ಮಟ್ಟದಲ್ಲಿ ಷೇರು ಮಾರುಕಟ್ಟೆ ಕುಸಿದಿದೆ. ಜಗತ್ತಿನ ಅಗ್ರ 500 ಶ್ರೀಮಂತರ ಜೇಬಿಗೆ ಕತ್ತರಿ ಬಿದ್ದಿದೆ.
ಇದನ್ನೂ ಓದಿ: ಪಾಂಡ್ಯಗೆ ಟಕ್ಕರ್ ಕೊಟ್ಟ ರಿಷಭ್​ ಪಂತ್.. ರೋಚಕ ಗೆಲುವು ಪಡೆದ ಲಕ್ನೋ ಟೀಮ್
/newsfirstlive-kannada/media/post_attachments/wp-content/uploads/2025/03/TRUMP.jpg)
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರಸ್ಪರ ಸುಂಕ ಘೋಷಿಸಿದ ಬಳಿಕ ಒಂದು ದಶಕದಲ್ಲೇ ಷೇರು ಮಾರುಕಟ್ಟೆಯಲ್ಲಿ ಅತೀ ದೊಡ್ಡ ಕುಸಿತ ಕಂಡಿದೆ. ಈ ಮೂಲಕ ವಿಶ್ವದ ಟಾಪ್ 500 ಶ್ರೀಮಂತ ಜನರ ಸಂಪತ್ತಿನಲ್ಲಿ 208 ಶತಕೋಟಿ ಡಾಲರ್​ ಜೇಬಿನಿಂದ ಸೋರಿಕೆಯಾಗಿದೆ. ಟ್ರಂಪ್ ಸ್ನೇಹಿತರಿಂದ ಹಿಡಿದು ಯೂರೋಪ್ ಉದ್ಯಮಿಗಳವರೆಗೂ ನಷ್ಟ ಉಂಟಾಗಿದೆ. ಅಲ್ಲದೇ ಟಾಟಾ ಸ್ಟೀಲ್, ನ್ಯಾಷನಲ್ ಅಲ್ಯೂಮಿನಿಯಂ, ಹಿಂದೂಸ್ತಾನ್ ಕಾಪರ್, ವೇದಾಂತ, ಭಾರತ್ ಫೋರ್ಜ್ ಮದರ್‌ಸನ್ ಕಂಪನಿಗಳ ಷೇರುಗಳ ಮೌಲ್ಯ ಸಹ ಭಾರೀ ಇಳಿಕೆಯಾಗಿವೆ. ಡೋನಾಲ್ಡ್​​ ಟ್ರಂಪ್ ಸುಂಕ ನೀತಿಯಿಂದ ಜಗತ್ತಿನ ಅಗ್ರ 500 ಶ್ರೀಮಂತರು ಸುಮಾರು 208 ಬಿಲಿಯನ್ ಡಾಲರ್ ಅಂದರೆ ಸುಮಾರು 1,70,000 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದ್ದಾರೆ.
ಯಾಱರಿಗೆ? ಎಷ್ಟೆಷ್ಟು ನಷ್ಟ?
- ಶ್ರೀಮಂತ 01: ಮಾರ್ಕ್​ ಜುಕರ್​ ಬರ್ಗ್, 17.9 ಶತಕೋಟಿ ಡಾಲರ್ ನಷ್ಟ
- ಶ್ರೀಮಂತ 02: ಎಲಾನ್ ಮಸ್ಕ್, 11 ಶತಕೋಟಿ ಡಾಲರ್ ನಷ್ಟ
- ಶ್ರೀಮಂತ 03: ಮೈಕೆಲ್ ಡೆಲ್, 9.53 ಶತಕೋಟಿ ಡಾಲರ್ ನಷ್ಟ
- ಶ್ರೀಮಂತ 04: ಲ್ಯಾರಿ ಎಲಿಸನ್ , 8.1 ಶತಕೋಟಿ ಡಾಲರ್ ನಷ್ಟ
- ಶ್ರೀಮಂತ 05: ಜೆನ್ಸನ್ ಹುವಾಂಗ್, 7.36 ಶತಕೋಟಿ ಡಾಲರ್ ನಷ್ಟ
- ಶ್ರೀಮಂತ 06: ಲ್ಯಾರಿ ಪೇಜ್ , 4.79 ಶತಕೋಟಿ ಡಾಲರ್ ನಷ್ಟ
- ಶ್ರೀಮಂತ 06: ಸೆರ್ಗೆ ಬ್ರಿನ್, 4.46 ಶತಕೋಟಿ ಡಾಲರ್ ನಷ್ಟ
- ಶ್ರೀಮಂತ 06 : ಥಾಮಸ್ ಪೀಟರ್ಫಿ, 4.06 ಶತಕೋಟಿ ಡಾಲರ್ ನಷ್ಟ
ಅಮೆರಿಕ ಉತ್ಪನ್ನಗಳ ಮೇಲಿನ ಸುಂಕ ಹೆಚ್ಚಳ!
ಚೀನಾ ಕೂಡ ಡೊನಾಲ್ಡ್​​ ಟ್ರಂಪ್​ ಸುಂಕ ನೀತಿಗೆ ಸಡ್ಡು ಹೊಡೆದು ನಿಂತಿದೆ.. ವಿದೇಶ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರಕ್ಕೆ ಚೀನಾ ಸರ್ಕಾರ ಕೂಡ ತಿರುಗೇಟು ನೀಡಿದ್ದು, ಅಮೆರಿಕ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಶೇ.34ಕ್ಕೆ ಏರಿಕೆ ಮಾಡಿದೆ.. ಈ ಮೂಲಕ ಚೀನಾ ಅಮೆರಿಕದ ಬಳಿಕ ತೆರಿಗೆ ಹೆಚ್ಚಳ ಮಾಡಿದ ಮೊದಲ ಪ್ರಮುಖ ದೇಶ ಚೀನಾ ಆಗಿದೆ.
ಒಟ್ನಲ್ಲಿ ಮಾಡಿದುಣ್ಣೊ ಮಾರಾಯಾ ಅನ್ನೋ ಹಾಗೆ ಡೊನಾಲ್ಡ್​ ಟ್ರಂಪ್​ ಹೂಡಿದ ಸುಂಕಾಸ್ತ್ರ ಸದ್ಯ ಅಮೆರಿಕಾಗೆ ತಿರುಗುಬಾಣವಾಗೋ ಸೂಚನೆ ನೀಡಿದೆ.. ಷೇರು ಮಾರುಕಟ್ಟೆಯ ಭಾರೀ ಕುಸಿತ ವಿಶ್ವದ ಟಾಪ್ ಶ್ರೀಮಂತರಿಗೆ ನುಂಗಲಾರದ ತುತ್ತಾಗಿದೆ.. ಈ ಸುಂಕ ಸಮರ ಇನ್ನೂ ಎಂತೆಂತಾ ಸೀನ್​ ಕ್ರಿಯೇಟ್​ ಮಾಡುತ್ತೆ ಅಂತ ಕಾದು ನೋಡಬೇಕಿದೆ.
ಇದನ್ನೂ ಓದಿ: ಪೊನ್ನಣ್ಣ, ಮಂಥರ್‌ಗೌಡ ವಿರುದ್ಧ FIR ಆಗೋವರೆಗೂ ಅಂತ್ಯಕ್ರಿಯೆ ಮಾಡಲ್ಲ -ಪಟ್ಟು ಹಿಡಿದ ವಿನಯ್ ಕುಟುಂಬ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us