/newsfirstlive-kannada/media/post_attachments/wp-content/uploads/2024/12/Nostradamus.jpg)
ಭವಿಷ್ಯ ಎಂದ ಕೂಡಲೇ ನಮಗೆ ಕರ್ನಾಟಕದ ಮಟ್ಟಿನಲ್ಲಿ ನೆನಪಾಗುವುದು ಕೋಡಿಗೆಹಳ್ಳಿ ಶ್ರೀಗಳು, ಮೈಲಾರ ಕಾರ್ಣಿಕ. ಆದ್ರೆ ವಿಶ್ವಮಟ್ಟದಲ್ಲಿ ಭವಿಷ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವುದ ನಾಷ್ಟ್ರಾಡಾಮಸ್ನ ಭವಿಷ್ಯಕ್ಕೆ. ಮನುಷ್ಯ ಶಿಲಾಯುಗದಿಂದ ಕಂಪ್ಯೂಟರ್ ಯುಗಕ್ಕೆ ಕಾಲಿಟ್ಟಾಗಿದೆ. ಅಲ್ಲಿಂದ ಇಲ್ಲಿಯವರೆಗೂ ಪ್ರಕೃತಿಯ ಒಡಲಲ್ಲಿ ಅನೇಕ ರಹಸ್ಯಗಳನ್ನು ಮನುಷ್ಯನು ಬೇಧಿಸಿದ್ದಾನೆ. ಇನ್ನು ಕೆಲವು ಹಾಗೆಯೇ ಉಳಿದಿವೆ. ಸೃಷ್ಟಿಯ ವೈಚಿತ್ರ್ಯಗಳು ಅನೇಕ. ಅವುಗಳನ್ನು ನಾನು ಸಂಪೂರ್ಣ ಅರಿತಿದ್ದೀನಿ ಅಂದ್ರೆ ಅದು ಮನುಷ್ಯನ ಮೂರ್ಖತನವಷ್ಟೇ. ಅದಕ್ಕೆ ಪೂರಕ ಎನ್ನುವಂತಹ ಮತ್ತೊಂದು ವಿಷಯ ಅಂದ್ರೆ 2025ರ 500ಕ್ಕೂ ವರ್ಷಗಳ ಹಿಂದೆ ಅಂದ್ರೆ 15ನೇ ಶತಮಾನದಲ್ಲಿ ನಾಸ್ಟ್ರಾಡಾಮಸ್ ಬರೆದಿಟ್ಟಿರುವ ಭವಿಷ್ಯವಾಣಿ. ಇಂದಿಗೂ ಕೂಡ ಜಾಗತಿಕವಾಗಿ ನಾಸ್ಟ್ರಾಡಾಮಸ್ ಉಕ್ತಿಗಳು ಹಾಗೂ ಭವಿಷ್ಯವಾಣಿಗಳು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತವೆ. ಅಸಲಿಗೆ ಯಾರು ಈ ನಾಸ್ಟ್ರಾಡಾಮಸ್ ಅಂತ ನೋಡುವುದಾದ್ರೆ.
ನಾಷ್ಟ್ರಾಡಾಮಸ್ 1503ರಲ್ಲಿ ಫ್ರಾನ್ಸ್ನಲ್ಲಿ ಜನಿಸಿದವರು. ಜಗತ್ತು ಇವನ ಮಹಾನ್ ಭವಿಷ್ಯವಾಣಿಯಿಂದಲೇ ಗುರುತಿಸುತ್ತದೆ. 1566ರಲ್ಲಿ ಈತ ಅಸುನೀಗಿದ ಬಳಿಕವೂ ಕೂಡ ಈತನ ಭವಿಷ್ಯವಾಣಿ ಇಂದಿಗೂ ಕೂಡ ವಿಶ್ವದಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ. ನಾಷ್ಟ್ರಾಡಾಮಸ್ನ ಅನೇಕ ಭವಿಷ್ಯಗಳು ಸತ್ಯವೂ ಆಗಿವೆ. ಅದೇ ರೀತಿ 2025ರ ವರ್ಷದ ಬಗ್ಗೆಯೂ ಕೂಡ ನಾಷ್ಟ್ರಾಡಾಮಸ್ ಅನೇಕ ಊಹೆಗಳನ್ನು ಮಾಡಿದ್ದಾರೆ. ಅವು ನಿಜಕ್ಕೂ ಕೂಡ ಆತಂಕಕ್ಕೆ ಕಾರಣವಾಗಿವೆ.
ಇದನ್ನೂ ಓದಿ:ನಿತ್ಯ 5 ಸುತ್ತು ಸೂರ್ಯ ನಮಸ್ಕಾರ ಮಾಡುವುದರಿಂದ ಆಗುವ ಪ್ರಯೋಜನಗಳೇನು? ಇದು ನೀವು ಓದಲೇಬೇಕಾದ ಸ್ಟೋರಿ
ನಾಷ್ಟ್ರಾಡಾಮಸ್ ಭವಿಷ್ಯವಾಣಿಯ ಪ್ರಕಾರ 2025ರ ವರ್ಷದಲ್ಲಿ ಜಾಗತಿಕವಾಗಿ ಆರ್ಥಿಕತೆ ಕುಸಿದು ಬೀಳಲಿದೆ. ಇದು ವಿಶ್ವವನ್ನೇ ವ್ಯಾಪಿಸಲಿದೆ. ಈ ಒಂದು ಆರ್ಥಿಕ ಬಿಕ್ಕಟ್ಟು ಪ್ರಮುಖವಾಗಿ ಮೆಕ್ಸಿಕೊ, ಲ್ಯಾಟೀನ್ ಅಮೆರಿಕಾ ದೇಶಗಳು ಹಾಗೂ ಯುರೋಪ್ನ ಹಲವು ಭಾಗಗಳನ್ನು ವಿಪರೀತವಾಗಿ ಕಾಡಲಿವೆ.
ಮತ್ತೊಂದು ಭೀಕರ ಭವಿಷ್ಯವಾಣಿ ಅಂದ್ರೆ ಅದು ಹವಾಮಾನದಲ್ಲಾಗುವ ಬದಲಾವಣೆ. ವಿಪರೀತ ಹವಾ ಮಾಲಿನ್ಯದೊಂದಿಗೆ ಯುರೂಪ್ನಲ್ಲಿ ಹಲವೆಡೆ ಬಿಸಿಗಾಳಿಯ ರಣಭೀಕರವಾಗಿ ಬಂದು ಹೊಡೆಯಲಿದೆ ಎಂದು ನಾಷ್ಟ್ರಾಡಾಮಸ್ ಭವಿಷ್ಯವಾಣಿಯಲ್ಲಿ ಹೇಳಲಾಗಿದೆ. ನಾಷ್ಟ್ರಾಡಾಮಸ್ 2025ರ ಬಗ್ಗೆ ನುಡಿದಿರುವ ಮತ್ತೊಂದು ಭವಿಷ್ಯವೆಂದರೆ ಅದು ಜಾಗತಿಕವಾಗಿ ಆಹಾರ ಭದ್ರತೆ ಕಾಡಲಿದೆ ಎನ್ನುವುದು.ಇದು ಜಗತ್ತಿನ ಅನೇಕ ದೇಶಗಳನ್ನು ಸಂಕಷ್ಟದ ಸ್ಥಿತಿಗೆ ತಂದೊಡ್ಡಲಿದೆಯಂತೆ.
ಇದನ್ನೂ ಓದಿ:ಭಾರತದಲ್ಲಿ ಕಡಿಮೆಯಾಗುತ್ತಿದೆ ಸಂತಾನೋತ್ಪತ್ತಿ ಶಕ್ತಿಯ ಮಟ್ಟ! ಈ ಅಂಕಿ ಅಂಶ ನಿಜಕ್ಕೂ ಆತಂಕಕಾರಿಯಾ?
ನೈಸರ್ಗಿಕ ವಿಕೋಪ ಮುಂಬರುವ ದಿನಗಳಲ್ಲಿ ಉಲ್ಬಣಗೊಳ್ಳಲಿದೆ ಎಂದು ಕೂಡ ಭವಿಷ್ಯವನ್ನು ನುಡಿಯಲಾಗಿದೆ. ಇನ್ನು 2025ರಲ್ಲಿ ಇಡೀ ಮನುಕುಲದ ನಿತ್ಯ ಜೀವನ ಕ್ರಮವನ್ನು ಹಾಗೂ ಅನೇಕ ಕ್ಷೇತ್ರಗಳನ್ನು ತಂತ್ರಜ್ಞಾನಗಳೇ ಮುನ್ನಡೆಸಲಿದೆ ಎಂದು ಕೂಡ ನಾಷ್ಟ್ರಾಡಾಮಸ್ ಭವಿಷ್ಯದಲ್ಲಿ ಉಲ್ಲೇಖವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ