Advertisment

111 ವರ್ಷ ಬದುಕಿ ಗಿನ್ನಿಸ್​ ರೆಕಾರ್ಡ್​​ ಮುಡಿಗೇರಿಸಿಕೊಂಡ ತಾತ.. ಇವರ ದೀರ್ಘಾಯುಷ್ಯದ ಸೀಕ್ರೆಟ್​ ಏನು ಗೊತ್ತಾ?

author-image
AS Harshith
Updated On
111 ವರ್ಷ ಬದುಕಿ ಗಿನ್ನಿಸ್​ ರೆಕಾರ್ಡ್​​ ಮುಡಿಗೇರಿಸಿಕೊಂಡ ತಾತ.. ಇವರ ದೀರ್ಘಾಯುಷ್ಯದ ಸೀಕ್ರೆಟ್​ ಏನು ಗೊತ್ತಾ?
Advertisment
  • ಈ ಅಜ್ಜ ನಿವೃತ್ತ ಅಕೌಂಟೆಂಟ್ ಆದ್ರೂ 111 ವರ್ಷ ಬದುಕಿದ್ದಾರೆ
  • ಜಾನ್​ ಟಿನ್ನಿಸ್ವುಡ್​ ದೀರ್ಘಾಯುಷ್ಯದ ಬಗ್ಗೆ ಅನೇಕರಿಗೆ ಕುತೂಹಲ
  • ಪ್ರತಿ ಶುಕ್ರವಾದ ಈ ಅಜ್ಜ ಏನು ಸೇವಿಸುತ್ತಿದ್ದರಂತೆ ಗೊತ್ತಾ? ಈ ಸ್ಟೋರಿ ಓದಿ

ಪ್ರಸ್ತುತ ಜಗತ್ತಿನಲ್ಲಿ 40, 50, 60 ವರ್ಷ ಬದುಕುವುದೇ ಹೆಚ್ಚು. ಅಂತಹದರಲ್ಲಿ 111 ವರ್ಷ ಬದುಕೋದು ಅಂದ್ರೆ ನಂಬ್ತೀರಾ?. ಬ್ರಿಟನ್​​ ಮೂಲದ ವ್ಯಕ್ತಿಯೊಬ್ಬರು 111 ವರ್ಷ ಬದುಕಿದ್ದಲ್ಲದೆ ಗಿನ್ನಿಸ್​ ವರ್ಲ್ಡ್​​ ರೆಕಾರ್ಡ್​ ಪುಟ ಸೇರಿದ್ದಾರೆ.

Advertisment

ಜಾನ್​ ಟಿನ್ನಿಸ್ವುಡ್​ ಉತ್ತರ ಇಂಗ್ಲೆಂಡ್​​ ಮರ್ಸಿಸೈಡ್​​ನಲ್ಲಿ 1912ರಲ್ಲಿ ಜನಿಸಿದರು. ನಿವೃತ್ತ ಅಕೌಂಟೆಂಟ್​ ಮತ್ತು ಮಾಜಿ ಅಂಚೆ ಸೇವಾ ಕಾರ್ಯಕರ್ತರಾಗಿ ಕೆಲಸ ಮಾಡಿದ್ದರು. ಅಂದಹಾಗೆಯೇ ಜಾನ್​ ಟಿನ್ನಿಸ್ವುಡ್​ 111 ವರ್ಷ 222 ದಿನಗಳು ಬದುಕುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ.

ಜಾನ್​ ಟಿನ್ನಿಸ್ವುಡ್​ ದೀರ್ಘಾಯುಷ್ಯದ ಬಗ್ಗೆ ಅನೇಕರಿಗೆ ಕುತೂಹಲವಿತ್ತು. ಅನೇಕರು ಅವರ ಬಳಿ ದೀರ್ಘಾಯುಷ್ಯದ ಬಗ್ಗೆ ಪ್ರಶ್ನೆಯನ್ನು ಕೇಳಿದ್ದರು. ಅದಕ್ಕೆ ಅವರು ‘ಕೇವಲ ಅದೃಷ್ಟ’ವೆಂದು ಹೇಳುತ್ತಿದ್ದರು. ಇನ್ನು ಜಾನ್​ ಟಿನ್ನಿಸ್ವುಡ್​ ಆಹಾರದಲ್ಲಿ ಪ್ರತಿ ಶುಕ್ರವಾದ ಮೀನು ಮತ್ತು ಚಿಪ್ಸ್ ಸೇವಿಸುತ್ತಿದ್ದರಂತೆ.

‘ನೀವು ಅತಿ ಹೆಚ್ಚು ಕಾಳ ಬದುಕುತ್ತೀರಿ, ಅಥವಾ ಕಡಿಮೆ ವರ್ಷ ಬದುಕುತ್ತೀರಿ ಅಥವಾ ಅದರ ಬಗ್ಗೆ ಮಾತನಾಡಲು ಸಾಧ್ಯವಿಲ್ಲ’ ಎಂದು ಜಾನ್​ ಟಿನ್ನಿಸ್ವುಡ್​ ಹೇಳಿದ್ದರು.

Advertisment

ಇದನ್ನೂ ಓದಿ: Gold Rate: ಹೊಸ ಇತಿಹಾಸ ನಿರ್ಮಿಸಿದ ಚಿನ್ನದ ಬೆಲೆ, ಮೊದಲ ಬಾರಿಗೆ 10 ಗ್ರಾಂ​​ಗೆ 70 ಸಾವಿರ..!

ಇನ್ನು ಜಪಾನ್​ನ ಜಿರೋಮನ್​ ಕುಮುರಾ 116 ವರ್ಷ ಮತ್ತು 54 ದಿನಗಳ ವರೆಗೆ ಬದುಕಿದ್ದರು. ಸ್ಪೇನ್​ನ ಮಾರಿಯಾ ಬ್ರನ್ಯಾಸ್​​ ಮೊರೆರಾ 117 ವರ್ಷ ಬದುಕುವ ಮೂಲಕ ಅಚ್ಚರಿಗೆ ಕಾರಣರಾಗಿದ್ದರು. ಇದೀಗ ಜಾನ್​ ಟಿನ್ನಿಸ್ವುಡ್​ ಕೂಡ ಅದೇ ಸಾಲಿಗೆ ಸೇರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment