ವಿಶ್ವದ ಮೊಟ್ಟ ಮೊದಲ ಮರದ ಉಪಗ್ರಹ ಆಕಾಶಕ್ಕೆ ಜಿಗಿದಿದೆ.. ಇನ್ನೇನಿದ್ದರೂ..

author-image
Ganesh
Updated On
ವಿಶ್ವದ ಮೊಟ್ಟ ಮೊದಲ ಮರದ ಉಪಗ್ರಹ ಆಕಾಶಕ್ಕೆ ಜಿಗಿದಿದೆ.. ಇನ್ನೇನಿದ್ದರೂ..
Advertisment
  • ಚಂದ್ರ, ಮಂಗಳ ಗ್ರಹದ ಮೇಲೆ ಗಿಡ, ಮರ ಬೆಳೆಸುವ ಪ್ಲಾನ್
  • ಮರದ ಸ್ಯಾಟಲೈಟ್​ಗೆ ಎಲಾನ್ ಮಸ್ಕ್​​ ಕಂಪನಿ ಸಾಥ್
  • ಕುತೂಹಲ ಮೂಡಿಸಿದ ಜಪಾನ್ ವಿಜ್ಞಾನಿಗಳ ಈ ಸಾಹಸ

ಜಪಾನ್ ವಿಜ್ಞಾನಿಗಳು ವಿಶ್ವದ ಮೊಟ್ಟ ಮೊದಲ ಮರದ ಉಪಗ್ರಹ (Wooden satellite) ಅಭಿವೃದ್ಧಿಪಡಿಸಿ ಉಡಾವಣೆ ಮಾಡಿದ್ದಾರೆ.
ಗ್ನೋಸ್ಯಾಟ್ (LignoSat) ಹೆಸರಿನ ಉಪಗ್ರಹವನ್ನು ಎಲಾನ್ ಮಸ್ಕ್​ ಅವರ ಸ್ಪೇಸ್‌ಎಕ್ಸ್ ರಾಕೆಟ್‌ನಲ್ಲಿರಿಸಿ ಬಾಹ್ಯಾಕಾಶಕ್ಕೆ ಕಳುಹಿಸಿದ್ದಾರೆ. ಈಗಾಗಲೇ ಅದು ಅಂತಾರಾಷ್ಟ್ರೀಯ ಬ್ಯಾಹ್ಯಾಕಾಶ ಕೇಂದ್ರದಲ್ಲಿ ತಲುಪಿದೆ. ವರದಿಗಳ ಪ್ರಕಾರ.. ಈ ಉಪಗ್ರಹವನ್ನು ಕ್ಯೋಟೋ ವಿಶ್ವವಿದ್ಯಾನಿಲಯದ (Kyoto University) ಸಂಶೋಧಕರು ವಿನ್ಯಾಸಗೊಳಿಸಿದ್ದಾರೆ.

ಏನು ಕೆಲಸ ಮಾಡ್ತದೆ..?
ಆರು ತಿಂಗಳವರೆಗೆ ಬಾಹ್ಯಾಕಾಶದಲ್ಲಿ ಇರಲಿದೆ. ಇದರ ಉದ್ದೇಶವು ಬಾಹ್ಯಾಕಾಶದಲ್ಲಿರುವ ವಾತಾವರಣಕ್ಕೆ ಮರದ ಸ್ಯಾಟಲೈಟ್​ ಹೇಗೆ ಒಗ್ಗಿಕೊಳ್ಳುತ್ತದೆ ಎಂಬುದನ್ನು ತಿಳಿದುಕೊಳ್ಳುವುದಾಗಿದೆ. ಜೊತೆಗೆ ಮುಂದಿನ 50 ವರ್ಷಗಳಲ್ಲಿ ಚಂದ್ರ ಮತ್ತು ಮಂಗಳ ಗ್ರಹದ ಮೇಲೆ ಗಿಡಗಳನ್ನು ನೆಡುವ ಪ್ಲಾನ್​ನ ಭಾಗವಾಗಿದೆ.

ಇದನ್ನೂ ಓದಿ:Aadhaar ಬಳಕೆದಾರರಿಗೆ ಗುಡ್ ನ್ಯೂಸ್.. ಕೇಂದ್ರದಿಂದ ಪ್ರಮುಖ ನಿರ್ಧಾರ, ಹೊಸ ಅಪ್ಡೇಟ್!

publive-image

ಜಪಾನ್​ ಮಾಜಿ ಗಗನಯಾತ್ರಿ ಟಕಾವೊ ಡೋಯಿ (Takao Doi) ಅವರು ಹೇಳುವಂತೆ.. ನಾನು ಕೂಡ ವಿವಿಯ ಸಂಶೋಧನಾ ತಂಡದ ಭಾಗವಾಗಿದ್ದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಮರವನ್ನು ಬಳಸಬಹುದೇ ಅಥವಾ ಇಲ್ಲವೇ ಎಂದು ಕಂಡುಹಿಡಿಯಬೇಕಾಗಿದೆ. ಅದಕ್ಕಾಗಿಯೇ ನಾವು ಈ ಮರದ ಉಪಗ್ರಹವನ್ನು ತಯಾರಿಸಿದ್ದೇವೆ. ಅದಕ್ಕಾಗಿ ಮರವನ್ನು ಬಳಸಲಾಗಿದೆ ಎಂದಿದ್ದಾರೆ. ಅರಣ್ಯ ವಿಜ್ಞಾನ ಪ್ರಾಧ್ಯಾಪಕ ಕೋಜಿ ಮುರಾಟಾ ಪ್ರತಿಕ್ರಿಯಿಸಿ.. ಮರದಿಂದ ಮಾಡಿದ ಸ್ಯಾಟಲೈಟ್​ ಬಾಹ್ಯಾಕಾಶದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಏಕೆಂದರೆ ಅದು ಅಷ್ಟು ಸುಲಭದಲ್ಲಿ ಕೊಳೆಯುವುದಿಲ್ಲ, ಬೆಂಕಿ ಕೂಡ ತಾಗುವುದಿಲ್ಲ. ಉಪಗ್ರಹದಲ್ಲಿ ಬಳಸಲಾದ ಮರವು ಮ್ಯಾಗ್ನೋಲಿಯಾ ಮರದಿಂದ (magnolia tree) ನಿಂದ ಮಾಡಲಾಗಿದೆ. ಆ ಮರವು ತುಂಬಾನೇ ಗಟ್ಟಿಯಾಗಿದೆ. ಅಷ್ಟು ಸುಲಭದಲ್ಲಿ ನಾಶಗೊಳಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಸಂಶೋಧನೆ ಪ್ರಕಾರ.. ಮರದ ಉಪಗ್ರಹಗಳು ಜೀವಿತಾವಧಿಯ ಕೊನೆಯ ಕ್ಷಣದವರೆಗೂ ಪ್ರಯೋಜನಗಳನ್ನು ನೀಡಬಹುದು. ಇದರಿಂದ ಭೂಮಿಯ ವಾತಾವರಣಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಇತರ ಉಪಗ್ರಹಗಳು ಸುಟ್ಟುಹೋದಾಗ ಮಾಲಿನ್ಯಕಾರಕ ಲೋಹದ ಕಣಗಳು ಬಿಡುಗಡೆಯಾಗುತ್ತವೆ.

ಇದನ್ನೂ ಓದಿ:Aadhaar ಬಳಕೆದಾರರಿಗೆ ಗುಡ್ ನ್ಯೂಸ್.. ಕೇಂದ್ರದಿಂದ ಪ್ರಮುಖ ನಿರ್ಧಾರ, ಹೊಸ ಅಪ್ಡೇಟ್!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment