ಅಬ್ಬಾ 17KG.. ತೂಕ ಇಳಿಸಲು ಹೋಗಿ ಸಾವನ್ನಪ್ಪಿದ ವಿಶ್ವದ ಅತಿ ದೊಡ್ಡ ಬೆಕ್ಕು!

author-image
AS Harshith
Updated On
ಅಬ್ಬಾ 17KG.. ತೂಕ ಇಳಿಸಲು ಹೋಗಿ ಸಾವನ್ನಪ್ಪಿದ ವಿಶ್ವದ ಅತಿ ದೊಡ್ಡ ಬೆಕ್ಕು!
Advertisment
  • ವಿಶ್ವದಾದ್ಯಂತ ಗಮನ ಸೆಳೆದಿದ್ದ ಅತಿ ದೊಡ್ಡ ಬೆಕ್ಕು
  • ತೂಕ ನಷ್ಟಕ್ಕೆ ಮುಂದಾಗಿದ್ದ ರಷ್ಯಾದ ಬೆಕ್ಕು ಕ್ರಂಬ್ಸ್
  • 7 ಪೌಂಡ್​​ ತೂಕ ನಷ್ಟಗೊಳಿಸಿ ಗುರುತಿಸಿಕೊಂಡಿದ್ದ ಕ್ರಂಬ್ಸ್​

17 ಕೆಜಿ ತೂಕವನ್ನು ಹೊಂದಿದ ವಿಶ್ವದ ಅತಿ ದೊಡ್ಡ ಬೆಕ್ಕು ಸಾವನ್ನಪ್ಪಿದೆ. ರಷ್ಯಾ ಮೂಲದ ಕ್ರಂಬ್ಸ್​ ತೂಕ ನಷ್ಟ ಮಾಡುವ ಪ್ರಕ್ರಿಯೆಯಲ್ಲಿ ಕೊನೆಯುಸಿರೆಳೆದಿದೆ.

ಕ್ರಂಬ್ಸ್​ ತನ್ನ ತೂಕದ ಮೂಲಕವೇ ವಿಶ್ವದಾದ್ಯಂತ ಗಮನ ಸೆಳೆದಿತ್ತು. ಇತ್ತೀಚೆಗೆ ತೂಕ ನಷ್ಟಗೊಳಿಸುವ ಹಾದಿಯನ್ನು ಹಿಡಿದಿತ್ತು. ಆದರೆ ಚೆನ್ನಾಗಿಯೇ ಇದ್ದ ಕ್ರಂಬ್ಸ್​ ಯಾವುದೇ ರೋಗ ಲಕ್ಷಣ ಕಾಣಿಸದೆ ಸಾವನ್ನಪ್ಪಿದೆ.

ಇದನ್ನೂ ಓದಿ: ದೀಪಾವಳಿ ಆಫರ್​; ಬರೀ 699 ರೂಪಾಯಿಗೆಗೆ ಸಿಗುತ್ತಿದೆ ಇವೆರಡು ಫೋನ್​!

ಕ್ರೋಶಿಕ್​ ಎಂದು ಕರೆಯಲ್ಪಡುತ್ತಿದ್ದ ಕ್ರಂಬ್ಸ್​ 17 ಕೆ.ಜಿ ತೂಕವನ್ನು ಹೊಂದಿತ್ತು. ಸೂಪ್​, ವಿಸ್ಕಿ, ಬಿಸ್ಕೆಟ್​ಗಳನ್ನು ತಿನ್ನುತ್ತಿತ್ತು. ತೂಕ ನಷ್ಟದ ಹಾದಿಯನ್ನು ಹಿಡದಿದ್ದ ಕ್ರಂಬ್ಸ್​ ಏಳು ಪೌಂಡ್ಸ್​ ಕಳೆದುಕೊಳ್ಳುವ ಮೂಲಕ ಯಶಸ್ವಿಯಾಗಿತ್ತು.

ಕ್ರಂಬ್ಸ್​ನಲ್ಲಿ ಮೇಲ್ನೋಟಕ್ಕೆ ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಂಡಿರಲಿಲ್ಲ. ಆದರೆ ಪಶುವೈದ್ಯರು ಹೇಳಿದಂತೆ, ಕ್ಯಾನ್ಸರ್​​ ಗೆಡ್ಡೆ ಮತ್ತು ದೇಹದಲ್ಲಿ ಕೊಬ್ಬು ಇದ್ದ ಕಾರಣ ಅಂಗ ವೈಫಲ್ಯಕ್ಕೆ ತುತ್ತಾಗಿ ಸಾವನ್ನಪ್ಪಿದೆ ಎಂದು ಹೇಳಿದ್ದಾರೆ.

publive-image

ಇದನ್ನೂ ಓದಿ: ಕೋಟಿ, ಕೋಟಿ ಲೆಕ್ಕಾಚಾರ.. ಆರ್​​ಸಿಬಿಯ ಈ ಸ್ಟಾರ್​​ಗೆ ಖುಲಾಯಿಸುತ್ತಾ ಅದೃಷ್ಟ?

ಮನ್ಯುಷ್ಯನಂತೆ ಕ್ರಂಬ್ಸ್ ಕೂಡ ತೂಕ ನಷ್ಟಕ್ಕೆ ಮುಂದಾಗಿತ್ತು. ಅದಕ್ಕೆ ಬೇಕಾದ ಎಲ್ಲಾ ಕೆಲಸವನ್ನು ಕ್ರಂಬ್ಸ್​ ಮಾಡುತ್ತಿತ್ತು. ಬೆಕ್ಕಿನ ಆರೈಕೆದಾರರು ಕ್ರಂಬ್​ ತೂಕ ನಷ್ಟಕ್ಕೆ ಏನೆಲ್ಲಾ ಅನುಸರಿಸುತ್ತಿದ್ದಾನೆ ಎಂಬ ಸಂಗತಿಯನ್ನು ಆನ್​ಲೈನ್​ನಲ್ಲೂ ಹಂಚಿಕೊಂಡಿದ್ದರು.

ಆದರೀಗ ಕ್ರಂಬ್ಸ್​ ಸಾವು ಮನೆ ಮಾಲೀಕರನ್ನು ಬೇಸರ ತರಿಸಿದೆ. ವಿಶ್ವದ ಗಮನ ಸೆಳೆದಿದ್ದ 17 ಕೆಜಿ ತೂಕದ ಬೆಕ್ಕು ಇನ್ನಿಲ್ಲ ಎಂಬುದು ಎಲ್ಲರ ನೋವಿಗೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment