newsfirstkannada.com

ಬರೋಬ್ಬರಿ 500 ಕೆಜಿ ತೂಕ.. ಜಗತ್ತಿನ ಅತಿ ದೊಡ್ಡ ಅನಕೊಂಡ ಹಾವು ಪತ್ತೆ; ಇದರ ಉದ್ದ ಎಷ್ಟು ಗೊತ್ತಾ?

Share :

Published February 21, 2024 at 8:26pm

    ಅಮೆಜಾನ್ ಅರಣ್ಯದಲ್ಲಿ ಪತ್ತೆಯಾದ ದೈತ್ಯ ಅನಕೊಂಡ ಹಾವು

    ನ್ಯಾಷನಲ್ ಜಿಯಾಗ್ರಫಿಕ್ ಸೀರಿಸ್ ಶೂಟ್ ಮಾಡುವಾಗ ಪತ್ತೆ

    ಇಷ್ಟು ದೊಡ್ಡದಾದ ಅನಕೊಂಡ ಹಾವು ಎಲ್ಲಿಯೂ ಪತ್ತೆಯಾಗಿರಲಿಲ್ಲ

ವಿಶ್ವದ ಅತಿ ದೊಡ್ಡ ಕಾಡು ಅಮೆಜಾನ್ ಅರಣ್ಯದಲ್ಲಿ ದೈತ್ಯ ಅನಕೊಂಡ ಹಾವು ಪತ್ತೆಯಾಗಿದೆ. ಇದು ಜಗತ್ತಿನಲ್ಲೇ ಇದುವರೆಗೂ ಕಂಡ ಹಾವುಗಳ ಎಲ್ಲಾ ದಾಖಲೆಗಳನ್ನು ಮುರಿದು ಹಾಕಿದೆ. ಅತಿ ದೊಡ್ಡ ಅನಕೊಂಡ ಹಾವಿನ ಪ್ರತ್ಯಕ್ಷವಾದ ವಿಡಿಯೋ ನೋಡುಗರ ಮೈ ಜುಮ್ಮೆನ್ನುವಂತೆ ಮಾಡಿದೆ.

ಹೌದು.. ಅಮೆಜಾನ್ ಕಾಡಿನಲ್ಲಿ ಜಗತ್ತಿನ ಅತಿ ದೊಡ್ಡ ಹಾವೊಂದು ಪತ್ತೆಯಾಗಿದೆ. ನ್ಯಾಷನಲ್ ಜಿಯಾಗ್ರಫಿಕ್ ಹಾಗೂ ಡಿಸ್ನಿ + ಜನಪ್ರಿಯ ಸೀರಿಸ್‌ನಲ್ಲಿ ಶೂಟ್ ಮಾಡುವಾಗ ಈ ಅನಕೊಂಡ ಹಾವಿನ ವಿಡಿಯೋ ಸೆರೆ ಹಿಡಿಯಲಾಗಿದೆ. ಇದು ಅಪರೂಪದ ಹಾವಿನ ಪ್ರಬೇಧವಾಗಿದ್ದು, ಬಹಳಷ್ಟು ಅಚ್ಚರಿಗೆ ಕಾರಣವಾಗಿದೆ.

ಇದನ್ನೂ ಓದಿ: ಸಾರ್ವಜನಿಕರೇ ಎಚ್ಚರ! ಈ ರೋಗ ಬಂದ್ರೆ ಮನುಷ್ಯ ಬದುಕೋದೆ ಡೌಟ್​​..!

ದಕ್ಷಿಣ ಅಮೆರಿಕಾದ ಅಮೆಜಾನ್ ಕಾಡಿನಲ್ಲಿ ಈ ಅಪರೂಪದ ಹಾವು ಪತ್ತೆಯಾಗಿದೆ. ಅತಿ ದೊಡ್ಡ ಅನಕೊಂಡ ಹಾವಿನ ಉದ್ದ ಬರೋಬ್ಬರಿ 7.5 ಮೀಟರ್‌ ಇದ್ದು, ಇದರ ತೂಕ 500 ಕೆಜಿ ಇದೆ ಎನ್ನಲಾಗಿದೆೆ. ಇಷ್ಟು ದೊಡ್ಡದಾದ ಹಾವು ಇದುವರೆಗೂ ಪತ್ತೆಯಾಗಿರಲಿಲ್ಲ. ಅಮೆಜಾನ್ ಕಾಡಿನ ಈ ದೈತ್ಯ ಹಾವು ಇದುವರೆಗೂ ಪತ್ತೆಯಾಗಿರುವ ಅನಕೊಂಡ ಹಾವಿನ ಎರಡರಷ್ಟು ದೊಡ್ಡದು ಎನ್ನಲಾಗಿದೆ. ಇದರ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಸಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೋಬ್ಬರಿ 500 ಕೆಜಿ ತೂಕ.. ಜಗತ್ತಿನ ಅತಿ ದೊಡ್ಡ ಅನಕೊಂಡ ಹಾವು ಪತ್ತೆ; ಇದರ ಉದ್ದ ಎಷ್ಟು ಗೊತ್ತಾ?

https://newsfirstlive.com/wp-content/uploads/2024/02/Biggest-Snake-1.jpg

Load More