ವಿಶ್ವದ ಅತಿ ದೊಡ್ಡ ರೈಲ್ವೆ ಸ್ಟೇಷನ್, ಒಂದೇ ಬಾರಿ 44 ರೈಲುಗಳು ನಿಲ್ಲುತ್ತವೆ! ಎಲ್ಲಿದೆ ?

author-image
Gopal Kulkarni
Updated On
ವಿಶ್ವದ ಅತಿ ದೊಡ್ಡ ರೈಲ್ವೆ ಸ್ಟೇಷನ್, ಒಂದೇ ಬಾರಿ 44 ರೈಲುಗಳು ನಿಲ್ಲುತ್ತವೆ! ಎಲ್ಲಿದೆ ?
Advertisment
  • ಇದು ಇಡೀ ವಿಶ್ವದ ಅತ್ಯಂತ ದೊಡ್ಡ ರೈಲ್ವೆ ನಿಲ್ದಾಣ ಎಂಬ ಖ್ಯಾತಿ ಪಡೆದಿದೆ
  • ಈ ನಿಲ್ದಾಣದಲ್ಲಿ ನಿತ್ಯ ಎಷ್ಟು ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ ಗೊತ್ತಾ?
  • ಇಲ್ಲಿ ಇರುವ ಒಟ್ಟು ರೈಲ್ವೆ ಟ್ರ್ಯಾಕ್​​ಗಳ ಸಂಖ್ಯೆಗಳೇ ನಿಮ್ಮನ್ನು ಬೆಚ್ಚಿಬೀಳಿಸುತ್ತೆ!

ನಾವು ಸಾಮಾನ್ಯವಾಗಿ ರೈಲ್ವೆ ಸ್ಟೇಷನ್​ಗಳನ್ನು ನೋಡಿರುತ್ತೇವೆ.ರೈಲುಗಳಿಗಾಗಿ ಯಾವ ಪ್ಲಾಟ್​ಫಾರ್ಮ್ ಎಂದು ಹುಡುಕಿ ಸುಸ್ತು ಕೂಡ ಆಗಿರುತ್ತೇವೆ. ಅದಲ್ಲೂ 8-10 ಪ್ಲಾಟ್​ಫಾರ್ಮ್ ಇದ್ದ ರೈಲ್ವೆ ಸ್ಟೇಷನ್​​ಗಳು ಪ್ರಯಾಣಿಕರ ಸಹನೆಯನ್ನೇ ಪರೀಕ್ಷೆ ಮಾಡುತ್ತವೆ. ಅಂತಹದರಲ್ಲಿ ಈ ವಿಶ್ವದ ಅತಿದೊಡ್ಡ ರೈಲ್ವೆ ಸ್ಟೇಷನ್ ಬರೋಬ್ಬರಿ ಪ್ಯಾಲೇಸ್​ಗೆ ನುಗ್ಗಿದ ಅನುಭವ ನೀಡುತ್ತದೆ. ಅದರ ಸ್ಟನ್ನಿಂಗ್ ಬ್ಯೂಟಿಗ ಪ್ರಯಾಣಿಕರು ಮಾರು ಹೋಗುತ್ತಾರೆ.

ಒಂದು ಪುಟ್ಟ ನಗರಿಯಲ್ಲಿರುವ ವಿಶ್ವದ ಅತಿದೊಡ್ಡ ರೈಲ್ವೆ ನಿಲ್ದಾಣ ಇರುವುದು ಅಮೆರಿಕಾದ ನ್ಯೂಯಾರ್ಕ್​ನಲ್ಲಿ. ಇದನ್ನು ಗ್ರ್ಯಾಂಡ್ ಸೆಂಟ್ರಲ್ ಟರ್ಮಿನಲ್ ಎಂದು ಕೂಡ ಕರೆಯುತ್ತಾರೆ. 1903 ರಿಂದ 1913ರ ನಡುವೆ ಈ ಒಂದು ರೈಲ್ವೆ ನಿಲ್ದಾಣ ಸಿದ್ಧಗೊಂಡಿದೆ. ಫೆಬ್ರವರಿ 2,1913ರಲ್ಲಿ ನಡುರಾತ್ರಿ 12.01 ನಿಮಿಷಕ್ಕೆ ಈ ಒಂದು ರೈಲ್ವೆ ನಿಲ್ದಾಣ ಅಧಿಕೃತವಾಗಿ ಚಾಲನೆ ಪಡೆಯಿತು ಮೊದಲ ದಿನವೇ ಸುಮಾರು 15 ಸಾವಿರ ಪ್ರಯಾಣಿಕರು ಈ ನಿಲ್ದಾಣಕ್ಕೆ ಭೇಟಿ ಕೊಟ್ಟಿದ್ದರು.

publive-image

ಇದನ್ನೂ ಓದಿ:ಸೌದಿ ಅರೇಬಿಯಾಗಿದೆಯಾ ಉಕ್ರೇನ್​-ರಷ್ಯಾ ಯುದ್ಧ ನಿಲ್ಲಿಸುವ ಶಕ್ತಿ; ಡೊನಾಲ್ಡ್ ಟ್ರಂಪ್ ಶಾಕಿಂಗ್ ಹೇಳಿಕೆ

ಈ ಒಂದು ಗ್ರ್ಯಾಂಡ್ ಸೆಂಟ್ರಲ್ ಟರ್ಮಿನಲ್ ಸುಮಾರು 44 ಪ್ಲಾಟಫಾರ್ಮ್​ಗಳನ್ನು ಹೊಂದಿದ್ದು ಒಟ್ಟು 67 ಟ್ರ್ಯಾಕ್ಸ್​ಗಳನ್ನು ಹೊಂದಿದೆ. ಎರಡು ಅಂಡರ್​​ಗ್ರೌಂಡ್​​ ಪ್ಲಾಟ್​ಫಾರ್ಮ್​ಗಳು ಇಲ್ಲಿ ನಮಗೆ ಕಾಣಲು ಸಿಗುತ್ತಿವೆ. ಇದು ವಿಶ್ವ ಗಿನ್ನಿಸ್ ರೆಕಾರ್ಡ್​​ನಲ್ಲಿ ಈ ಒಂದು ರೇಲ್ವೆ ಸ್ಟೇಷನ್​ ವಿಶ್ವದ ಅತಿದೊಡ್ಡ ರೈಲ್ವೆ ನಿಲ್ದಾಣ ಎಂದು ದಾಖಲೆ ಹೊಂದಿದೆ.

publive-image

ಇದನ್ನೂ ಓದಿ:ಚೀನಾಗೆ ಸಿಕ್ತು ಮತ್ತೊಂದು ಬಂಗಾರದ ನಿಕ್ಷೇಪ; ಅಲ್ಲಿರುವುದು ಎಷ್ಟು ಟನ್ ಚಿನ್ನ ಗೊತ್ತಾ?

ಗ್ರ್ಯಾಂಡ್ ಸೆಂಟ್ರಲ್ ಟರ್ಮಿನಲ್ ಸುಮಾರು 48 ಎಕರೆ ವಿಸ್ತಿರ್ಣ ಜಾಗದಲ್ಲಿ ಹರಡಿಕೊಂಡಿದೆ. ಇದರ ಸೌಂದರ್ಯವು ಕೇವಲ ಪ್ರಯಾಣಿಕರನ್ನು ಅಲ್ಲ ಅಲ್ಲಿಗೆ ಭೇಟಿಗೆಂದು ಬರುವ ಜನರನ್ನು ಕೂಡ ಆಕರ್ಷಸುತ್ತದೆ. ಒಂದು ವೇಳೆ ನೀವು ಈ ರೈಲ್ವೆ ನಿಲ್ದಾಣಕ್ಕೆ ಕಾಲಿಟ್ಟರೆ ಸಾಕು ಯಾವುದೋ ಭವ್ಯ ಬಂಗಲೆಗೆ ಕಾಲಿಟ್ಟಂತಹ ಅನುಭವವಾಗುತ್ತದೆ. ಒಂದು ಮಾಹಿತಿ ಪ್ರಕಾರ ಈ ರೈಲ್ವೆ ಸ್ಟೇಷನ್​ನಿಂದ ನಿತ್ಯ ಸುಮಾರು 1 ಲಕ್ಷ 25 ಸಾವಿರ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಸರಾಸರಿ ನಿತ್ಯ 660 ಟ್ರೇನ್​ಗಳು ಇಲ್ಲಿ ಸಂಚರಿಸುತ್ತವೆ.

ಈ ರೈಲ್ವೆ ಸ್ಟೇಷನ್​​ನಲ್ಲಿ ಅನೇಕ ಹಾಲಿವುಡ್​ ಸಿನಿಮಾಗಳು ಕೂಡ ಶೂಟಿಂಗ್​ ನಡೆದಿವೆ. ಬೇರೆ ಭಾಷೆಗಳ ಸಿನಿಮಾಗಳ ಶೂಟಿಂಗ್​​ಗಳು ಕೂಡ ಇಲ್ಲಿ ನಡೆದಿವೆ. ಇದನ್ನು ನೋಡಲೇ ಎಂದು ವಿಶ್ವದಿಂದ ಅನೇಕ ಪ್ರವಾಸಿಗರು ಬರುತ್ತಾರೆ. ನ್ಯೂಯಾರ್ಕ್​ಗೆ ಭೇಟಿ ನೀಡಿದವರೆಲ್ಲಾ ತಪ್ಪದೇ ಈ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment