/newsfirstlive-kannada/media/post_attachments/wp-content/uploads/2024/02/bankok.jpg)
ಜಗತ್ತಿನಲ್ಲೇ ಪ್ರವಾಸಿಗರ ನೆಚ್ಚಿನ ತಾಣ ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್. ಪ್ರಪಂಚದಲ್ಲಿರುವ ಪ್ರವಾಸ ಪ್ರಿಯರ ಹೃದಯವನ್ನು ಸ್ಪರ್ಶಿಸುತ್ತದೆ ಈ ಬ್ಯಾಂಕಾಕ್. ಮನುಷ್ಯನಾಗಿ ಹುಟ್ಟಿದ ಮೇಲೆ ಒಮ್ಮೆಯಾದರು ಬ್ಯಾಂಕಾಕ್‌ನ ಪ್ರವಾಸೋದ್ಯಮವನ್ನು ಸವಿಯಬೇಕು ಎಂದು ಬಹುತೇಕರು ಬಯಸುತ್ತಾರೆ. ಇದೀಗ ಇದೇ ಬ್ಯಾಂಕಾಕ್​ನ ಸಂಪೂರ್ಣವಾದ ಹೆಸರು ಸಿಕ್ಕಾಪಟ್ಟೆ ವೈರಲ್​ ಆಗಿದೆ.
/newsfirstlive-kannada/media/post_attachments/wp-content/uploads/2024/02/bankok-1.jpg)
ಬರೋಬ್ಬರಿ 168 ಅಕ್ಷರಗಳು!
ಕೃಂಗ್ ಥೇಪ್ ಮಹಾನಖೋನ್ ಅಮೋನ್ ರತ್ತನಾಕೋಸಿನ್ ಮಹಿಂತರಾ ಆಯುತಾಯ ಮಹಾದಿಲೋಕ್ ಫೋಪ್ ನೊಪ್ಪರತ್ ರಟ್ಚಥನಿ ಬುರಿರೊಮ್ ಉಡೊಮ್ರಾಟ್ಚನಿವೇಟ್ ಮಹಾಸತಾನ್ ಅಮೋನ್ ಪಿಮಾನ್ ಅವತನ್ ಸತಿತ್ ಸಕ್ಕತಟ್ಟಿಯ ವಿತ್ಸಾನುಕಮ್ ಪ್ರಸಿತ್ ಇದು ಬ್ಯಾಂಕಾಂಕ್‌ನ ಅಸಲಿ ಹೆಸರು. ಇದು ಬರೋಬ್ಬರಿ 168 ಅಕ್ಷರಗಳನ್ನು ಹೊಂದಿದೆ. ಇದರ ಅರ್ಥ ದೇವರ ನಗರ, ಅಮರರ ಮಹಾನಗರ, ಒಂಬತ್ತು ಆಭರಣಗಳ ಭವ್ಯವಾದ ನಗರ, ರಾಜನ ಆಸನ, ರಾಜಮನೆತನಗಳ ನಗರ, ಇಂದ್ರನ ಆಜ್ಞೆಯ ಮೇರೆಗೆ ವಿಶ್ವಕರ್ಮ ನಿರ್ಮಿಸಿದ ಅವತಾರ ದೇವರ ಮನೆ. ಬಾಂಕಾಕ್​​ನ ಪೂರ್ಣ ಹೆಸರು ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ.
ಬ್ಯಾಂಕಾಕ್​ ಹಳೆಯ ಹೆಸರನ್ನು ನಾವು, ನೀವು ಯಾರು ಹೇಳಲು ಸಾಧ್ಯವೇ ಇಲ್ಲ. ಅಷ್ಟು ಉದ್ದವಾಗಿ ಬ್ಯಾಂಕಾಕ್​ನ ಹಳೆಯ ಹೆಸರು ಇದೆ. ಇದೀಗ ಬ್ಯಾಂಕಾಕ್​ನ ಇಷ್ಟುದ್ದ ಹೆಸರೇ ಈಗ ಗಿನ್ನೆಸ್ ದಾಖಲೆ ಮಾಡುವ ಸನಿಹದಲ್ಲಿದೆ. ಹೌದು, ಇತ್ತೀಚಿಗಷ್ಟೇ ಮಹಿಳೆಯೊಬ್ಬರು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿದ್ದರು. ಆ ವಿಡಿಯೋದಲ್ಲಿ ಪ್ರವಾಸಿಗರು ತುಂಬಿರುವ ಬಸ್ಸಿನಲ್ಲಿ ಪ್ರವಾಸಿ ಮಾರ್ಗದರ್ಶಿಯೊಬ್ಬರು ಬ್ಯಾಂಕಾಕ್​ ನಗರದ ಪೂರ್ಣ ಹೆಸರನ್ನು ಹೇಳಿದ್ದಾರೆ. ಇದೀಗ ಬ್ಯಾಂಕಾಕ್ ಅತಿ ಉದ್ದದ ಹೆಸರನ್ನು ಹೊಂದಿದ್ದಕ್ಕಾಗಿ ಗಿನ್ನೆಸ್ ದಾಖಲೆ ಮಾಡೋ ಸಾಧ್ಯತೆ ಇದೆ.
View this post on Instagram
ಇದನ್ನು ಓದಿ: 9 ವರ್ಷ ಕಟ್ಟಿ ಬೆಳೆಸಿದ ಕಂಪನಿಯಿಂದಲೇ ಕಿಕ್‌ಔಟ್ ಆಗ್ತಾರಾ ಬೈಜು ರವೀಂದ್ರನ್?
ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಇದೇ ವಿಡಿಯೋ 2.4 ಮಿಲಿಯನ್​ ವೀವ್ಸ್​ ಪಡೆದುಕೊಂಡಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಇಷ್ಟು ಉದ್ದದ ಹೆಸರನ್ನು ಕೇಳಿ ಶಾಕ್​​ ಆಗಿದ್ದಾರೆ. ಜೊತೆಗೆ ನನಗೆ ಈಗಾಗಲೇ ಬ್ಯಾಂಕಾಕ್‌ನ ಪೂರ್ಣ ಹೆಸರು ಗೊತ್ತಾಗಿದ್ದು, ಬ್ಯಾಂಕಾಕ್​ನ ಪೂರ್ಣ ಹೆಸರು ಕೇಳಿ ಶಾಕ್​ ಆಯ್ತು ಅಂತಾ ಕಾಮೆಂಟ್​ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us