/newsfirstlive-kannada/media/post_attachments/wp-content/uploads/2024/12/WOrdl-Longest-Traffic-Jam-1.jpg)
ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಟ್ರಾಫಿಕ್ ಎನ್ನುವುದು ಅಲ್ಲಿಯ ನಿವಾಸಿಗಳ ನೆಮ್ಮದಿಯನ್ನೇ ಹೆಚ್ಚು ಕಡಿಮೆ ಹಾಳು ಮಾಡುತ್ತದೆ. ದೆಹಲಿಯಲ್ಲಿ ಜನರು ತಮ್ಮ ಆಫೀಸ್ ಮುಟ್ಟಲು ನಿಗದಿತ ಸಮಯಕ್ಕಿಂತ 20 ರಿಂದ 25 ನಿಮಿಷ ಜಾಸ್ತಿ ತೆಗೆದುಕೊಳ್ಳಲು ಕಾರಣ ಇದೇ ಟ್ರಾಫಿಕ್, ಬೆಂಗಳೂರಲ್ಲಿ ಜನರು ತಮ್ಮ ಅರ್ಧ ಆಯುಷ್ಯವನ್ನೇ ಟ್ರಾಫಿಕ್ ಜಾಮ್ನಲ್ಲಿ ಕಳೆಯುತ್ತಾರೆ ಎಂಬ ಮಾತುಗಳು ಕೂಡ ಇವೆ. ನೀವು ಯಾವುದಾದರೂ ಪ್ಲೇನ್, ಟ್ರೇನ್ ಬಸ್ ಹಿಡಿದು ದೂರದ ಪ್ರಯಾಣ ಮಾಡಬೇಕಾಗಿದ್ದಲ್ಲಿ. ಮನೆಯನ್ನು ಒಂದರಿಂದ ಒಂದೂವರೆಗೆ ಗಂಟೆ ಮುಂಚಿತವಾಗಿಯೇ ಬಿಡಬೇಕು ಅಷ್ಟೊಂದು ಟ್ರಾಫಿಕ್ ಈ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಕಾಣುತ್ತವೆ
ಒಂದು ಬಾರಿ ಟ್ರಾಫಿಕ್ನಲ್ಲಿ ಸಿಲುಕಿದರೆ ಸಾಕು, ಅದು ಕ್ಲಿಯರ್ ಆಗಿ ನಮ್ಮ ವಾಹನ ಮುಂದಕ್ಕೆ ಹೋಗೋಕೆ ಕನಿಷ್ಠ ಅರ್ಧದಿಂದ ಒಂದು ಗಂಟೆಯಾದರೂ ಸಮಯ ಬೇಕು. ಆ ಒಂದು ಗಂಟೆ ಕಾಲ ಟ್ರಾಫಿಕ್ ಜಾಮ್ ಎನ್ನುವುದು ಅಕ್ಷರಶಃ ನಮ್ಮ ಸಹನೆಯನ್ನು ಕೊಂದು ಹಾಕಿರುತ್ತದೆ. ಕೇವಲ ಒಂದು ಗಂಟೆಗೆ ನಾವು ಈ ರೀತಿಯಾಗಿ ಹೈರಾಣ ಆದ್ರೆ 12 ದಿನಗಳ ಕಾಲ ಟ್ರಾಫಿಕ್ನಲ್ಲಿ ಸಿಕ್ಕವರ ಗತಿ ಏನು ಹೇಳಿ. 12 ದಿನದವರೆಗೂ ಟ್ರಾಫಿಕ್ ಜಾಮ್ ಆಗೋಕೆ ಸಾಧ್ಯನಾ ಅಂತ ನಿಮ್ಮ ವಾದ ಆಗಿದ್ದರೆ, ಅಂತಹದೊಂದು ಟ್ರಾಫಿಕ್ ಜಾಮ್ ಆಗಸ್ಟ್ 14, 2010ರಂದು ಚೀನಾದಲ್ಲಿ ಘಟಿಸಿ ಹೋಗಿದೆ.
ಚೀನಾದ ರಾಜಧಾನಿ ಬೀಜಿಂಗ್ನಲ್ಲಿ 2010ರಂದು ಜಾಮ್ ಆದ ಟ್ರಾಫಿಕ್ ವಿಶ್ವದ ಅತಿ ಉದ್ದನೆಯ ಟ್ರಾಫಿಕ್ ಜಾಮ್ ಎಂದು ಪ್ರಸಿದ್ಧಿಯನ್ನು ಪಡೆದಿದೆ. ಬೀಜಿಂಗ್-ಟಿಬೆಟ್ ಎಕ್ಸ್ಪ್ರೆಸ್ ಹೈವೇನಲ್ಲಿ ಇಂತಹದೊಂದು ಟ್ರಾಫಿಕ್ ಜಾಮ್ ಉಂಟಾಗಿತ್ತು 100 ಕಿಲೋ ಮೀಟರ್ವರೆಗೂ ಟ್ರಾಫಿಕ್ ಜಾಮ್ನಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದನ್ನು ಕ್ಲಿಯರ್ ಮಾಡೋಕೆ ತೆಗೆದುಕೊಂಡಿದ್ದ ಸಮಯ ಬರೋಬ್ಬರಿ 12 ದಿನಗಳು. ಇದು ವಿಶ್ವದ ಅತ್ಯಂತ ಸುದೀರ್ಘ ಕಾಲದ ಟ್ರಾಫಿಕ್ ಎಂದು ಕೂಡ ಕರೆಯುತ್ತಾರೆ. ಇಂತಹ ಘಟನೆ ಈ ಹಿಂದೆ ಎಂದೂ ಕೂಡ ನಡೆದಿರಲಿಲ್ಲ. ಅಂದು ಬೀಜಿಂಗ್ ಟಬೆಟ್ ಎಕ್ಸ್ಪ್ರೆಸ್ ಹೈವೇನಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ಕೇವಲ ವಾಹನಗಳೇ ಕಾಣ ಸಿಗುತ್ತಿದ್ದವು.
ಬೀಜಿಂಗ್ ಟಿಬೆಟ್ ಎಕ್ಸ್ಪ್ರೆಸ್ ಹೈವೇಯ ಕಾಮಗಾರಿ ಅಂದು ಇನ್ನೂ ಮುಗಿದಿರಲಿಲ್ಲ.
ಇದನ್ನೂ ಓದಿ:18 ವರ್ಷ ಸಾಕಿ ಸಲುಹಿದ ಅಮ್ಮನಿಗೆ 2ನೇ ಮದುವೆ ಮಾಡಿಸಿದ ಮಗ; ವಿಡಿಯೋ ಸಖತ್ ವೈರಲ್!
ಅದಕ್ಕಾಗಿಯೇ ಮಂಗೋಲಿಯಾದಿಂದ ಟ್ರಕ್ಗಳು ಕಲ್ಲಿದ್ದಲು ಹಾಗೂ ಕಾಮಗಾರಿಗೆ ಬೇಕಾಗುವ ವಸ್ತುಗಳನ್ನ ಹೊತ್ತುಕೊಂಡು ಬೀಜಿಂಗ್ ಕಡೆ ಹೊರಟಿದ್ದವು. ಇದೇ ಕಾರಣದಿಂದ, ಉಳಿದ ವಾಹನಗಳು ಒನ್ ವೇ ನಲ್ಲಿ ಸಂಚರಿಸುವಂತೆ ಸೂಚನೆ ನೀಡಲಾಗಿತ್ತು. ಅದರೊಂದಿಗೆ ಇತ್ತ ಕಲ್ಲಿದ್ದಲು ಹೇರಿಕೊಂಡು ಬಂದಿದ್ದ ಟ್ರಕ್ಗಳು ಬೀಜಿಂಗ್ನ ನಿರ್ಗಮನದ ದ್ವಾರವನ್ನ ಸಂಪೂರ್ಣವಾಗಿ ಬ್ಲಾಕ್ ಮಾಡಿ ಹಾಕಿದ್ದವು ಇದರಿಂದಾಗಿ ಅದೆಲ್ಲವನ್ನು ಕ್ಲೀಯರ್ ಮಾಡಲು 12 ದಿನಗಳು ಬೇಕಾಗಿದ್ದವು.
ಇದನ್ನೂ ಓದಿ:ಇಡೀ ದೇಶದಲ್ಲಿ ಕಿಟಕಿ ಇಲ್ಲದ ಮನೆ ಕಟ್ಟಲು ಆದೇಶ ಹೊರಡಿಸಿದ ಸರ್ಕಾರ; ಕಾರಣವೇನು?
ಇನ್ನು ಈ ಟ್ರಾಫಿಕ್ ಕ್ರಿಯರ್ ಆಗುವವರೆಗೂ ಹೈವೇದ ಬದಿಯಲ್ಲಿಯೇ ಎಲ್ಲಾ ವಾಹನಗಳ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ತಾತ್ಕಾಲಿಕ ವಸತಿ ಸೌಕರ್ಯವನ್ನು ಟೆಂಟ್ ಹಾಕಿ ಮಾಡಿಕೊಡಲಾಗಿತ್ತು. ಅವರಿಗಾಗಿ ಸ್ನ್ಯಾಕ್ಸ್, ಕೋಲ್ಡ್ಡ್ರಿಂಕ್ಸ್, ನ್ಯೂಡಲ್ಸ್ ಮತ್ತು ಇತರ ಆಹಾರಗಳ ವ್ಯವಸ್ಥೆ ಮಾಡಲಾಗಿತ್ತು. ಆದ್ರೆ ಅಂದು ಬಿಕರಿಯಾದ ಆಹಾರ ಪದಾರ್ಥಗಳ ಮೇಲೆ ನಾಲ್ಕು ಪಟ್ಟು ಹಣ ವಸೂಲಿ ಮಾಡಲಾಗಿತ್ತು. ಟ್ರಾಫಿಕ್ ಜಾಮ್ ಯಾವ ಮಟ್ಟಿಗೆ ಆಗಿತ್ತು ಅಂದ್ರೆ 12 ದಿನಗಳ ಕಾಲ ಟ್ರಾಫಿಕ್ನಲ್ಲಿ ಸಿಲುಕಿದ್ದ ವಾಹನಗಳು ದಿನಕ್ಕೆ ಕೇವಲ ಒಂದೇ ಕಿಲೋ ಮೀಟರ್ ಮಾತ್ರ ಚಲಿಸುತ್ತಿದ್ದವು. ಕೊನೆಗೆ ಆಗಸ್ಟ್ 26, 2010ರಂದು ಟ್ರಾಫಿಕ್ ಸಂಪೂರ್ಣವಾಗಿ ಕ್ಲಿಯರ್ ಮಾಡುವುದರಲ್ಲಿ ಆಡಳಿತ ವ್ಯವಸ್ಥೆ ಯಶಸ್ವಿಯಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ