/newsfirstlive-kannada/media/post_attachments/wp-content/uploads/2025/04/LONGEST-TRAIN.jpg)
ಭಾರತೀಯ ರೈಲ್ವೆ ಕಾಶ್ಮೀರ ಕಣಿವೆಗೆ ರೈಲು ಸಂಚಾರವನ್ನು ನಿರ್ಮಿಸಿದ ಭಾರತೀಯ ರೈಲ್ವೆ ಸಂಪರ್ಕ ಕಲ್ಲಪಿಸುವ ಇತಿಹಾಸದಲ್ಲಿ ಹೊಸ ಮೈಲಿಗಲ್ಲನ್ನು ನೆಟ್ಟಿದೆ. ಭಾರತ ಸರ್ಕಾರದ ದೂರದೃಷ್ಟಿಯಿಂದಾಗಿ ಇಂದು ಭಾರತೀಯ ರೈಲ್ವೆ ಹೊಸ ದಿಕ್ಕು ದೆಸೆಯನ್ನು ಪಡೆಯುತ್ತಿದೆ. ಇದೇ ಕಾಲಮಾನದಲ್ಲಿ ಈಗ ಭಾರತೀಯ ರೈಲ್ವೆ ಇಲಾಖೆ ಹೊಸ ಗಮನಾರ್ಹ ರೂಪಾಂತರಕ್ಕೆ ಒಳಗಾಗುತ್ತಿದೆ. ಈಗಾಗಲೇ ಮೋದಿ ಸರ್ಕಾರ ಅನೇಕ ಹೊಸ ರೈಲುಗಳನ್ನು ಪರಿಚಯ ಮಾಡಿದೆ. ಪ್ರಯಾಣದ ಅನುಭವವನ್ನು ಇನ್ನಷ್ಟ ಸರಳಗೊಳಿಸಲು ಪ್ರಯಾಣಿಕರಿಗೆ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ. ಆದ್ರೆ ನಿಮಗೆ ಒಂದು ವಿಷಯ ಗೊತ್ತಾ ವಿಶ್ವದಲ್ಲಿಯೇ ಅತಿ ಉದ್ದವಾದ ರೈಲು ಯಾವುದು ಅಂತ? ಅದು ಆಸ್ಟ್ರೇಲಿಯಾದಲ್ಲಿದೆ.
ಇದನ್ನೂ ಓದಿ: ಈ 7 ಪ್ರಾಣಿಗಳನ್ನು ಸ್ಮರಿಸದೇ ಜಗತ್ತಿನ ಇತಿಹಾಸ ಸಂಪೂರ್ಣ ಆಗುವುದಿಲ್ಲ! ಮರೆಯಲಾದೀತೆ ಇವುಗಳ ತ್ಯಾಗ?
ಆಸ್ಟ್ರೇಲಿಯಾ ಕೂಡ ತನ್ನ ರೈಲ್ವೆ ಇಲಾಖೆಯನ್ನು ಮತ್ತಷ್ಟು ಸುಧಾರಿಕಣರಗೊಳಿಸುತ್ತಿದೆ. ಪಶ್ಚಿಮ ಆಸ್ಟ್ರೇಲಿಯಾದಲ್ಲಿ ವಿಶ್ವದ ಅತಿ ಉದ್ದವಾದ ರೈಲು ಸಂಚಾರ ಮಾಡುತ್ತದೆ. ಈ ಟ್ರೈನ್ 2011, ಜೂನ್ 21 ರಂದು ಯಂಡಿಖಾನ್​ ರೈಲ್ವೆ ನಿಲ್ದಾಣದಿಂದ ಪೋರ್ಟ್​ ಹರ್ಡ್​ಲ್ಯಾಂಡ್​​ ನಡುವೆ ಸುಮಾರು 170 ಕಿಲೋ ಮೀಟರ್​ವರೆಗೆ ಸಂಚಾರ ಮಾಡುತ್ತದೆ. ಈ 170 ಕಿ.ಮೀ ಜರ್ನಿಗೆ ಅದು ತೆಗೆದುಕೊಳ್ಳುವ ಸಮಯ 10 ಗಂಟೆಗಳ ಕಾಲ. ಇ ರೈಲಿನ ಒಟ್ಟು ಉದ್ದ 7.29 ಕಿಲೋ ಮೀಟರ್​ನಷ್ಟಿದೆ. ಇದು ಒಟ್ಟು 682 ಬೋಗಿಗಳನ್ನು ಹೊಂದಿದ್ದು. ಒಟ್ಟು 82 ಸಾವಿರ ಮೆಟ್ರಿಕ್​ ಟನ್​ ಕಬ್ಬಿಣವನ್ನು ಸಾಗಿಸುತ್ತದೆ.
ಇದು ಒಟ್ಟು 402 ಅಮೆರಿಕಾದ ಲಿಬರಟಿ ಸ್ಟ್ಯಾಚುನ ಭಾರಕ್ಕೆ ಸಮ ಎಂದು ಹೇಳಲಾಗುತ್ತದೆ. 8 ಜನರಲ್ ಎಲೆಕ್ಟ್ರಿಕ್ ಡಿಸೇಲ್ ಇಂಜಿನ್​ ಈ ರೈಲಿಗೆ ಇನ್​ಸ್ಟಾಲ್ ಮಾಡಲಾಗಿದೆ. ಇದರ ಒಟ್ಟು ಭಾರವನ್ನು ಹೊರುವ ಸಾಮರ್ಥ್ಯ ಸುಮಾರು 99 ಸಾವಿರದ 734 ಟನ್ ಎಂದು ಹೇಳಲಾಗುತ್ತದೆ. ಇದರ ಹೆಸರು ಬಿಹೆಚ್​ಪಿ ಐರನ್ ಓರೆ ಟ್ರೇನ್ ಎಂದು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us